ವ್ಯಕ್ತಿತ್ವ ಪರೀಕ್ಷೆಚಿತ್ರ ಕ್ರೆಡಿಟ್ ಮೂಲ: ಜಾಗರನ್ ಜೋಶ್
ಪ್ರತಿಯೊಬ್ಬರ ವ್ಯಕ್ತಿತ್ವ (ವ್ಯಕ್ತಿತ್ವ), ನಡವಳಿಕೆ, ಭಾವನೆ, ಚಿಂತನೆಗಳು, ಭಾವನಾತ್ಮಕ ನಿಲುವುಗಳಲ್ಲಿ ಹಲವಾರು ಭಿನ್ನತೆಗಳು ಇರುವಂತೆ, ಪ್ರತಿಯೊಬ್ಬರ ದೇಹಕಾರವು ಸಹ ಭಿನ್ನವಾಗಿದೆ. ಕೆಲವರ ಕಿವಿಯ ಆಕಾರದಲ್ಲಿ ದೊಡ್ಡದಾಗಿದ್ದರೆ, ಕೆಲವರ ಕಿವಿ ಚಿಕ್ಕದಾಗಿದ್ದರೆ, ಕೆಲವರ ಕಣ್ಣುಗಳು ದೊಡ್ಡದಾಗಿದ್ದರೆ, ಕೆಲವರ ಕಣ್ಣುಗಳು ಚಿಕ್ಕದಾಗಿರುತ್ತವೆ. ಹೀಗೆ ದೇಹಕಾರದಲ್ಲಿ ಸಾಕಷ್ಟು ಭಿನ್ನತೆಗಳಿವೆ. ಈ ಕಿವಿ, ಮೂಗು, ಪಾದ, ಬೆರಳು, ಕಣ್ಣು, ಹಣೆ, ಕೂದಲು ಇವುಗಳ ಆಕಾರದ ಮೂಲಕವೂ ವ್ಯಕ್ತಿತ್ವ ನಿಗೂಢ ವ್ಯಕ್ತಿತ್ವವನ್ನು ತಿಳಿಯಬಹುದು. ನೀವು ಸಹ ಇವುಗಳ ಮುಖಾಂತರ ನಿಮ್ಮ ವ್ಯಕ್ತಿತ್ವ ಹೇಗಿದೆ ಎಂದು ಪರೀಕ್ಷಿಸುತ್ತೀರಿ ಅಲ್ವಾ. ಅದೇ ರೀತಿ ಇಂದಿನ ಈ ಟೆಸ್ಟ್‌ನಲ್ಲಿ ನಿಮ್ಮ ಗಲ್ಲ ಹೇಗಿದೆ ವ್ಯಕ್ತಿ ಮೇಲೆ ನೀವೆಂಥಾ ಎಂಬುದನ್ನು ತಿಳಿದುಕೊಳ್ಳಿ.
ಗಲ್ಲದ ಆಕಾರದಿಂದ ತಿಳಿಯಬಹುದು ವ್ಯಕ್ತಿತ್ವದ ರಹಸ್ಯ:
ಡಿಂಪಲ್ ಗಲ್ಲ: ಕೆಲವರ ಗಲ್ಲದ ಮಧ್ಯಭಾಗದಲ್ಲಿ ರೇಖೆ ಇರುತ್ತದೆ. ಇದನ್ನು ಡಿಂಪಲ್ ಗಲ್ಲ ಎಂದಿ ಕರೆಯುತ್ತಾರೆ. ಇಂತಹ ಗಲ್ಲವಿದ್ದವರು ಹೆಚ್ಚು ವರ್ಚಸ್ವಿ, ಆತ್ಮವಿಶ್ವಾಸ, ಬೆರೆಯುವ, ಬುದ್ಧಿವಂತ, ವಿಜ್ಞಾನಿ ಮತ್ತು ಕಲಾತ್ಮಕ ವ್ಯಕ್ತಿಗಳಾಗಿದ್ದಾರೆ. ನಾಯಕತ್ವ ಗುಣಗಳನ್ನು ಹೊಂದಿರುವ ಇವರು ಯಾವುದೇ ಭಯವಿಲ್ಲದೆ ಅಪಾಯವನ್ನು ಎದುರಿಸುತ್ತಾರೆ. ಇವರು ಸ್ವಂತ ವ್ಯವಹಾರ, ಉದ್ಯಮಗಳಲ್ಲಿ ಯಶಸ್ವಿಯಾಗುವ ಸಾಧ್ಯತೆ ಹೆಚ್ಚು. ಜೊತೆಗೆ ಇಂತಹ ಗಲ್ಲವನ್ನು ಹೊಂದಿರುವವರು ಚಿತ್ರಕಲೆ, ಹಾಡುಗಾರಿಕೆ ಸಂಗೀತ ಇತ್ಯಾದಿ ಕಲೆಗಳಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದಿದೆ. ಇನ್ನೊಂದೇನೆಂದರೆ ಈ ರೀತಿಯ ಗಲ್ಲವನ್ನು ಹೊಂದಿರುವವರು ಮಿಲಿಟರಿ ಅಥವಾ ಪೊಲೀಸ್ ವೃತ್ತಿಗೆ ಸೇರುವ ಸಾಧ್ಯತೆ ಹೆಚ್ಚಾಗಿರುತ್ತದೆ.
ಇದನ್ನೂ ಓದಿ: ನಿಮ್ಮ ಕಿವಿಗಳು ಆಕಾರ ಹೇಗಿದೆ? ಇದುವೇ ತಿಳಿಸುತ್ತೆ ನಿಮ್ಮ ವ್ಯಕ್ತಿತ್ವದ ರಹಸ್ಯ
ನೇರ ಗಲ್ಲ: ಕೆಲವರ ಗಲ್ಲ ಡಿಂಪಲ್ ರೀತಿಯಲ್ಲಿ ಇದ್ದರೆ ಹಲವರ ಗಲ್ಲ ನೇರ. ಇಂತಹ ಗಲ್ಲದ ವ್ಯಕ್ತಿಗಳು ದೃಢನಿಶ್ಚಯ ಮತ್ತು ಆತ್ಮವಿಶ್ವಾಸವುಳ್ಳವರಾಗಿರುತ್ತಾರೆ. ಇವರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಹಿಂಜರಿಯುವುದಿಲ್ಲ. ಸಾಮಾಜಿಕವಾಗಿ ಎಲ್ಲರನ್ನೂ ಬೆರೆಯುವ ಇವರು ಹೊಸ ಹೊಸ ಸ್ನೇಹಿತರನ್ನು ಮಾಡಿಕೊಳ್ಳಲು ಸಖತ್ ಇಷ್ಟಪಡುತ್ತಾರೆ. ತುಂಬಾ ವರ್ಚಸ್ವಿಯಾಗಿರುವ ಇವರತ್ತ ಜನ ಬೇಗನೆ ಆಕರ್ಷಿತರಾಗುತ್ತಾರೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ