Headlines

Delhi Blast: ದಿಲ್ಲಿ ಕೆಂಪುಕೋಟಿ ಬಳಿ ಸ್ಫೋಟ: ಕನಿಷ್ಠ 8 ಜನ ಸಾವು, ಎಲ್ಲೆಡೆ ಹೈಅಲರ್ಟ್​

Delhi Blast: ದಿಲ್ಲಿ ಕೆಂಪುಕೋಟಿ ಬಳಿ ಸ್ಫೋಟ: ಕನಿಷ್ಠ 8 ಜನ ಸಾವು, ಎಲ್ಲೆಡೆ ಹೈಅಲರ್ಟ್​


ನವಂಬರ್, (ನವೆಂಬರ್ 10): ನವೀನ ಕೆಂಪು ಕೋಟೆ ಮೆಟ್ರೋ ನಿಲ್ದಾಣದ ಗೇಟ್ ಬಳಿ ಕಾರು ಸ್ಫೋಟಗೊಂಡಿದೆ. ಈ ಘಟನೆಯಿಂದ ಹತ್ತಿರದ ವಾಹನಗಳಿಗೆ ಬೆಂಕಿ ಹೊತ್ತಿಕೊಂಡಿದೆ. ಇದೀಗ ಬಂದಿರುವ ಮಾಹಿತಿ ಪ್ರಕಾರ ದುರಂತದಲ್ಲಿ 8 ಜನ ಸಾವನ್ನಪ್ಪಿದ್ದು, ಸ್ಫೋಟದ ರಭಸಕ್ಕೆ ಮೃತದೇಹಗಳು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ಆರಿಸುವ ಪ್ರಯತ್ನ ನಡೆಯುತ್ತಿದೆ. ಈ ವಿಷಯ ತಿಳಿಯುತ್ತಿದ್ದಂತೆಯೇ ಹಿರಿಯ ಅಧಿಕಾರಿಗಳು ಸಹ ಸ್ಥಳಕ್ಕೆ ದೌಡಾಯಿಸಿದ್ದು, ಘಟನೆಯ ಕಾರಣ ಏನೆಂದು ಪರಿಶೀಲನೆ. ಇನ್ನು ಈ ಘಟನೆ ದೆಹಲಿಯಲ್ಲೇ ಮುಂಬೈನಲ್ಲೂ ಹೈಅಲರ್ಟ್ ಘೋಷಿಸಲಾಗಿದೆ.

ಇದನ್ನೂ ಓದಿ: ಕೆಂಪು ಕೋಟೆ ಬಳಿ ಕಾರು ಸ್ಫೋಟವಾಗಿ ಸಾವು; ದೆಹಲಿಯಲ್ಲಿ ಹೈ ಅಲರ್ಟ್

ಈ ಬಗ್ಗೆ ಲೋಕ ನಾಯಕ ಜೈ ಪ್ರಕಾಶ್ ನಾರಾಯಣ್ ಆಸ್ಪತ್ರೆ ಅಧೀಕ್ಷಕ ಹೇಳಿಕೆ ನೀಡಿದ್ದಾರೆ, ಹದಿನೈದು ಜನರನ್ನು ಲೋಕ ನಾಯಕ ಆಸ್ಪತ್ರೆಗೆ ಕರೆತಂದಿದ್ದು, ಈ ಎಂಟು ಜನ ಆಸ್ಪತ್ರೆ ತಲುಪುವ ಮೊದಲೇ ಸಾವನ್ನಪ್ಪಿದ್ದಾರೆ. ಮೂವರು ಸ್ಥಿತಿ ಸರಿಯಾಗಿದ್ದು, ಒಬ್ಬರ ಸ್ಥಿತಿ ಸ್ಥಿರವಾಗಿದೆ ಎಂದು ಮಾಹಿತಿ ನೀಡಿದ್ದಾರೆ.



Source link

Leave a Reply

Your email address will not be published. Required fields are marked *