Headlines

Kerala style mutton curry:ಸಂಡೇ ಸ್ಪೆಷಲ್ ರುಚಿರುಚಿಯಾದ ಕೇರಳ ಸ್ಟೈಲ್ ಮಟನ್ ಕರಿ ಮಾಡಿ ನೋಡಿ | Try The Delicious Kerala Style Mutton Curry As A Sunday Special

Kerala style mutton curry:ಸಂಡೇ ಸ್ಪೆಷಲ್ ರುಚಿರುಚಿಯಾದ ಕೇರಳ ಸ್ಟೈಲ್ ಮಟನ್ ಕರಿ ಮಾಡಿ ನೋಡಿ | Try The Delicious Kerala Style Mutton Curry As A Sunday Special



ವಾರಾಂತ್ಯದಲ್ಲಿ ರುಚಿಕರವಾದ ಮಾಂಸಾಹಾರ ಬಯಸುವವರಿಗೆ, ಈ ಕೇರಳದ ಮಟನ್ ಕರಿ ರೆಸಿಪಿ ಒಂದು ಉತ್ತಮ ಆಯ್ಕೆ. ಖಾರ ಪ್ರಿಯರಿಗೆ ಈ ರೆಸಿಪಿ ತುಂಬಾ ಇಷ್ಟವಾಗುತ್ತದೆ. ಮಟನ್, ತೆಂಗಿನಕಾಯಿ, ಮತ್ತು ವಿವಿಧ ಮಸಾಲೆಗಳ ಸಮ್ಮಿಲನದಿಂದ ತಯಾರಾಗುವ ಈ ಖಾದ್ಯ ನಿಮ್ಮ ಊಟವನ್ನು ವಿಶೇಷವಾಗಿಸುತ್ತದೆ.

ಸಂಡೇ ಅಂದ್ರೆ ಸಾಕು ಬಹುತೇಕ ನಾನ್‌ವೆಜ್ ಪ್ರಿಯರು ಮಾಂಸಾಹಾರ ಮಾಡ್ತಾರೆ. ಹೀಗೆ ಮಾಂಸಾಹಾರ ಮಾಡುವವರಿಗಾಗಿ ರುಚಿರುಚಿಯಾದ ಕೇರಳ ಸ್ಟೈಲ್ ಮಟನ್ ಕರಿ ರೆಸಿಪಿ ಮಾಡುವ ವಿಧಾನದ ಬಗ್ಗೆ ಇಲ್ಲಿದೆ ಮಾಹಿತಿ. ಖಾರ ಖಾರವಾಗಿ ತಿನ್ಬೇಕು ಅಂತ ಬಯಸುವ ಖಾರಪ್ರಿಯರಿಗೆ ಇದು ಬೆಸ್ಟ್ ರೆಸಿಪಿ. ದಕ್ಷಿಣ ಭಾರತೀಯ ಶೈಲಿಯ ಈ ರೆಸಿಪಿ ನಿಮಗೂ ಇಷ್ಟವಾಗ್ಬಹುದು.

ಮೊದಲಿಗೆ ಕೇರಳ ಸ್ಟೈಲ್ ಮಟನ್ ಕರಿ ಮಾಡಲು ಬೇಕಾದ ಸಾಮಗ್ರಿಗಳು

  • ಮಟನ್‌ಗೆ ಬೇಕಾದ ಸಾಮಗ್ರಿಗಳು
  • 350 ಗ್ರಾಂ ಮಟನ್
  • 1 ಟೇಬಲ್ ಸ್ಪೂನ್ ಶುಂಠಿ ಕತ್ತರಿಸಿದ್ದು,
  • 1 ಟೇಬಲ್ ಸ್ಪೂನ್ ಸಣ್ಣಗೆ ಕತ್ತರಿಸಿದ ಬೆಳ್ಳುಳ್ಳಿ
  • ಒಂದು ಹಸಿರು ಮೆಣಸಿನಕಾಯಿ ಕತ್ತರಿಸಿದ್ದು,
  • 1/2 ಟೇಬಲ್ ಸ್ಪೂನ್ ಅರಿಶಿಣ
  • ಕಾಲು ಕಪ್‌ ಸಣ್ಣ ಸೈಜ್ ಈರುಳ್ಳಿ
  • 8 ರಿಂದ 10 ಕರಿಬೇವಿನ ಎಲೆ
  • ರುಚಿಗೆ ತಕ್ಕಷ್ಟು ಉಪ್ಪು
  • ಬೇಕಾಗುವಷ್ಟು ನೀರು
  • ಕರಿ ಮಾಡಲು ಬೇಕಾಗುವ ಸಾಮಗ್ರಿಗಳು
  • 2 ರಿಂದ 3 ಚಮಚ ತೆಂಗಿನ ಎಣ್ಣೆ
  • ಒಂದು ಟೇಬಲ್ ಸ್ಪೂನ್ ಕೆಂಪು ಮೆಣಸಿನ ಹುಡಿ
  • ಮುಕ್ಕಾಲು ಕಪ್ ಕತ್ತರಿಸಿದ ಈರುಳ್ಳಿ
  • ಒಂದು ಟೇಬಲ್ ಸ್ಪೂನ್ ತುರಿದ ಶುಂಠಿ
  • 3ರಿಂದ 4 ಎಸಳು ಬೆಳ್ಳುಳ್ಳಿ
  • 8ರಿಂದ 10 ಕರಿಬೇವಿನ ಎಲೆ
  • ಕಾಲು ಕಪ್ ಟೊಮೇಟೋ
  • ಒಂದು ಟೇಬಲ್ ಸ್ಪೂನ್ ಕತ್ತರಿಸಿದ ತೆಂಗಿನಕಾಯಿ

ಕೇರಳ ಸ್ಟೈಲ್ ಮಟನ್ ಕರಿ ಮಾಡುವುದು ಹೇಗೆ?

ಮೊದಲಿಗೆ ಮಟನ್ ಅನ್ನು ಚೆನ್ನಾಗಿ ಬೇಯಿಸಿಕೊಳ್ಲಬೇಕು. ಮಟನ್ ಬೇಯಿಸುವುದಕ್ಕೆ ಕುಕ್ಕರನ್ನು ಬಳಸಿ. ಮಟನ್ ಜೊತೆ ಅರಿಶಿಣ ಪುಡಿ, ಕರಿಬೇವಿನ ಎಲೆಗಳು, ಶುಂಠಿ, ಬೆಳ್ಳುಳ್ಳಿ, ಕತ್ತರಿಸಿದ್ದ ಸಣ್ಣ ಈರುಳ್ಳಿ(shallots), ಹಸಿ ಮೆಣಸು ಹಾಗೂ ಉಪ್ಪು ಇವಿಷ್ಟನ್ನು ಹಾಕಿದ ಮಟನ್ ಮಾಂಸವನ್ನು ಮೊದಲಿಗೆ ಕುಕ್ಕರ್‌ಗೆ ಹಾಕಿ 15ರಿಂದ 20 ನಿಮಿಷಗಳ ಕಾಲ ಬೇಯಿಸಿ.

ಗ್ಯಾಸ್ ಸಣ್ಣ ಉರಿಯಲ್ಲಿ ಇಟ್ಟು ಈಗ ಒಂದು ಪಾತ್ರೆಗೆ ಕೊಬ್ಬರಿ ಎಣ್ಣೆ ಹಾಕಿ, ಒಲೆ ಮೇಲೆ ಇಡಿ. ಎಣ್ಣೆ ಬಿಸಿಯಾಗುತ್ತಿದ್ದಂತೆ ಕರಿಬೇವಿನ ಎಲೆಗಳನ್ನು ಹಾಗೂ ನಂತರ ಈರುಳ್ಳಿಯನ್ನು ಹಾಕಿ, ನಂತರ ಸೌಟ್‌ನಲ್ಲಿ ಅತ್ತಿತ್ತ ತಿರುಗಿಸಿ ಎರಡು ನಿಮಿಷದ ನಂತರ ಅದಕ್ಕೆ ಬೆಳ್ಳುಳ್ಳಿ ಹಾಗೂ ಶುಂಠಿ ಹಾಕಿ.

ನಂತರ ಕತ್ತರಿಸಿ ಇಟ್ಟ ತೆಂಗಿನ ಕಾಯಿ ಹಾಗೂ ಟೊಮೆಟೋ ಹಾಗೂ ಕೆಂಪು ಮೆಣಸಿನ ಹುಡಿಯನ್ನು ಅದಕ್ಕೆ ಸೇರಿಸಿ ನಂತರ ಸೌಟ್‌ನಲ್ಲಿ ಕೆಲ ನಿಮಿಷ ತಿರುಗಿಸಿದ ನಂತರ ಈಗಾಗಲೇ ಬೇಯಿಸಿದ ಮಟನ್ ಅನ್ನು ಕೂಡ ಇದಕ್ಕೆ ಸೇರಿಸಿ ಈಗ ಬೆಂಕಿ ಕಡಿಮೆ ಮಾಡಿ ಹಾಗೂ ಮುಚ್ಚಳ ಮುಚ್ಚಿ 20ರಿಂದ 25 ನಿಮಿಷಗಳ ಕಾಲ ಸಣ್ಣ ಉರಿಯಲ್ಲಿ ಬೇಯಲು ಬಿಡಿ ನಡು ನಡುವೆ ಆಗಾಗ ಸೌಟು ಹಾಕಿ ತಿರುಗಿಸುತ್ತಿರಿ. 25 ನಿಮಿಷದ ನಂತರ ಈ ಕೇರಳ ಸ್ಟೈಲ್ ಮಟನ್ ಕರಿ ರೆಡಿಯಾಗಿರುತ್ತೆ. ಬಿಸಿ ಬಿಸಿಯಾಗಿ ಊಟದ ಜೊತೆ ಸೇವಿಸಿ.



Source link

Leave a Reply

Your email address will not be published. Required fields are marked *