ಬೆಂಗಳೂರು, ನವೆಂಬರ್ 11: ಚಳಿಗಾಲ ಪ್ರಾರಂಭವಾಗಿದ್ದು, ಚುಮುಚುಮು ಚಳಿಯಲ್ಲಿ ಬೆಳ್ಳಂ ಬೆಳಗ್ಗೆ ಒಂದು ಕಪ್ ಕಾಫಿ ಇದ್ದರೆ ಬೆಸ್ಟ್ ಅನಿಸುತ್ತೆ. ಆದರೆ, ಇನ್ಮುಂದೆ ಈ ಬಿಸಿ ಕಾಫಿ ಜನರ ನಾಲಿಗೆಯನ್ನಷ್ಟೇ ಅಲ್ಲ, ಜೇಬನ್ನೂ ಸುಡಲಿದೆ. ಕಾಫಿ ಪ್ರಿಯರಿಗೆ ಬಿಗ್ ಶಾಕ್ ಎದುರಾಗಿದ್ದು, ಕಾಫಿಪುಡಿ ಬೆಲೆ ಒಂದು ಕೆಜಿಗೆ ಸಾವಿರ ರೂಪಾಯಿ ಗಡಿಯನ್ನ ದಾಟಿದೆ. ದರ 1200 ರೂ,ವರೆಗೂ ಹೋಗುವ ನಿರೀಕ್ಷೆ ಇದೆ. 2022ರಲ್ಲಿ ಕೆಜಿಗೆ 300-400 ರೂಪಾಯಿ ಇದ್ದ ಕಾಫಿಪುಡಿ ಬೆಲೆ ಇದೀಗ ಏಕಾಏಕಿ ಏರಿಕೆಯಾಗಿದೆ. ಕಳೆದ ಒಂದೇ ವರ್ಷದಲ್ಲಿ ಕೆಜಿಪುಡಿ ಬೆಲೆ 200 ರೂಪಾಯಿವರೆಗೆ ಆಗಿದೆ.
ಕಾಫಿಪುಡಿ ಬೆಲೆ ಏರಿಕೆಗೆ ಪ್ರಮುಖ ಕಾರಣ
- ಕಾಫಿಯನ್ನು ಹೆಚ್ಚು ಬೆಳೆಯುವ ಬ್ರೆಜಿಲ್,ವಿಯ್ನಟಾಂಗಳಲ್ಲಿ ಕಾಫಿ ಬೆಳೆ ಕುಂಠಿತವಾಗಿರುತ್ತದೆ
- ರಾಜ್ಯದಲ್ಲಿ ಅತಿ ಹೆಚ್ಚಿನ ಮಳೆಯಾಗಿ ಕಾಫಿ ಹೂವುಗಳು ಉದುರಿದ್ದು ಕಾಫಿ ಬೀಜಗಳ ಅಭಾವ
- ಕಾಫಿ ಬೆಳೆಗಾರರು ಎದುರಿಸುತ್ತಿರುವ ಕೆಲಸಗಾರರ ಸಮಸ್ಯೆಯಿಂದ ಇಳುವರಿ ಮೇಲೆ ಪರಿಣಾಮ ಬೀರುತ್ತದೆ
ಇದನ್ನೂ ಓದಿ: ಒಂದು ದಿನವೂ ಮಿಸ್ ಮಾಡ್ದೆ ಬ್ಲಾಕ್ ಕಾಫಿ ಕುಡಿತೀರಾ ಹಾಗಿದ್ರೆ ನೀವು ಈ ಸ್ಟೋರಿ ಓದಲೇಬೇಕು
ಹೋಟೆಲ್‌ಗಳಲ್ಲಿ ಕಾಫಿ ದರ ಏರಿಕೆ?
ಕಾಫಿಪುಡಿ ದರ ನಿರಂತರವಾಗಿ ಏರಿಕೆಯಾಗುತ್ತಿರುವುದು ಹೋಟೆಲ್ ಉದ್ಯಮಕ್ಕೆ ದೊಡ್ಡ ಹೊಡೆತ ಬಿದ್ದಿದ್ದು, ಕಾಫಿಪುಡಿ ದರ ಇದೇ ರೀತಿ ಏರಿಕೆಯಾಗುತ್ತಿದೆ, ಅನಿವಾರ್ಯವಾಗಿ ಕಾಫಿ ದರವೂ ಏರಿಕೆಯಾಗುತ್ತಿದೆ. ಹೋಟೆಲ್ ಮತ್ತು ಕ್ಯಾಂಟೀನ್‌ಗಳಲ್ಲಿ ಒಂದು ಕಾಫಿ ಬೆಲೆ 12 ರಿಂದ 15 ರೂಪಾಯಿ, 15 ರಿಂದ 17 ರೂಪಾಯಿ, 18 ರಿಂದ 20 ರೂಪಾಯಿವರೆಗೆ ಏರಿಕೆಯಾಗಿದೆ. ಮತ್ತೆ ಕಾಫಿ ಪುಡಿ ದರ ಏರಿಕೆ ಆದರೆ 15 ರಿಂದ 25 ರೂಪಾಯಿವರೆಗೆ ದರ ಏರಿಕೆಯಾಗುವ ಸಾಧ್ಯತೆಗಳಿವೆ. ಮುಂದಿನ ತಿಂಗಳು ಮತ್ತೆ ಕೆಜಿಗೆ 150-200 ರೂಪಾಯಿವರೆಗೆ ಕಾಫಿಪುಡಿ ಬೆಲೆಯಲ್ಲಿ ಏರಿಕೆ ಆಗುವ ಸಾಧ್ಯತೆ ಇದೆ. ಕಾಫಿಪುಡಿ ಬೆಲೆ ಏರಿಕೆ ಕೇವಲ ವ್ಯಾಪಾರಸ್ಥರಿಗೆ ಮಾತ್ರ ನೋವು ಉಂಟುಮಾಡುವುದಿಲ್ಲ, ಕಾಫಿ ಪ್ರಿಯರಿಗೂ ಇದರ ಬಿಸಿ ತಟ್ಟಿದೆ. ಈ ಬಗ್ಗೆ ಟಿವಿ9 ಜೊತೆ ಮಾತನಾಡಿರುವ ಕಾಫಿ ಪ್ರಿಯರು, ಈ ಹಿಂದೆ ಮೂವರು ಹೋಟೆಲ್‌ಗೆ ಬಂದ್ರೆ ಮೂರು ಕಾಫಿ ಆರ್ಡರ್ ಮಾಡ್ತಿದ್ವಿ ಆದರೆ ಈಗ ಎರಡು ಕಾಫಿ ತಗೊಂಡು ಶೇರ್ ಮಾಡಿಕೊಳ್ಳುತ್ತಿದ್ದೀವಿ. ಡಿಸೆಂಬರ್ ನಲ್ಲಿ ಮತ್ತೆ ಕಾಫಿ ದರ ಏರಿಕೆ ಆದರೆ ಒಂದು ಕಾಫಿಯಲ್ಲಿ ಮೂವರು ಕುಡಿಯಬೇಕು ಅಷ್ಟೇ ಎಂದು ಅಭಿಪ್ರಾಯಪಟ್ಟಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.