‘ಮ್ಯಾನ್ ಆಫ್ ಸ್ಟೀಲ್’: ಪತಿ ಸಂಸದ ತೇಜಸ್ವಿ ಸೂರ್ಯ ಸಾಧನೆಗೆ ಪತ್ನಿ ಶಿವಶ್ರೀ ಬಹುಪರಾಕ್

‘ಮ್ಯಾನ್ ಆಫ್ ಸ್ಟೀಲ್’: ಪತಿ ಸಂಸದ ತೇಜಸ್ವಿ ಸೂರ್ಯ ಸಾಧನೆಗೆ ಪತ್ನಿ ಶಿವಶ್ರೀ ಬಹುಪರಾಕ್


ಪತಿ ತೇಜಸ್ವಿ ಸೂರ್ಯ ಸಾಧನೆಗೆ ಪತ್ನಿ ಶಿವಶ್ರೀ ಬಹುಪರಾಕ್

ಬೆಂಗಳೂರು, ನವೆಂಬರ್ 11: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ (ತೇಜಸ್ವಿ ಸೂರ್ಯ) ಸತತ 2ನೇ ವರ್ಷವೂ ಗೋವಾದಲ್ಲಿ ನಡೆದ ಐರನ್‌ಮ್ಯಾನ್ 70.3 ಓಟವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವ ಅವರ ಪತ್ನಿ ಶಿವಶ್ರೀ ಪತಿಯನ್ನ ಹಾಡಿ ಹೊಗಳಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವ ಅವರು, ಎರಡನೇ ಐರನ್‌ಮ್ಯಾನ್ 70.3 ಯಶಸ್ವಿಯಾಗಿ ಪೂರ್ಣಗೊಳಿಸಿದ ‘ಮ್ಯಾನ್ ಆಫ್ ಸ್ಟೀಲ್’ ನನ್ನ ಪತಿ ತೇಜಸ್ವಿ ಸೂರ್ಯ ಅವರಿಗೆ ಅಭಿನಂದನೆಗಳು. ಹಿಂದಿನ ಬಾರಿಯ ಸಮಯದಲ್ಲಿ 40 ನಿಮಿಷ ಕಡಿಮೆ ಗುರಿಯನ್ನ ಪೂರ್ಣಗೊಳಿಸಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ನನ್ನ ವೈಯಕ್ತಿಕ ಕೋಚ್ ಮತ್ತು ಮುಖ್ಯ ಪ್ರೇರಣಾದಾಯಕರಾಗಿ ನನ್ನ ಐರನ್ಮ್ಯಾನ್ ಸರಣಿಯನ್ನು ಮುಂದುವರಿಸಲು ನೀವು ಸಹಾಯ ಮಾಡಿದ್ದಕ್ಕೆ ಧನ್ಯವಾದಗಳು. ನಾನು ಈಗ ಮಾಡುತ್ತಿರುವ ಕೆಲಸಗಳಿಗೆ ಯಾರೂ ನನಗೆ ಪ್ರೇರಣೆ ನೀಡಲಾರರು. ನೀವು ನನಗೆ ದೊರೆತ ಅತ್ಯುತ್ತಮ ವ್ಯಕ್ತಿ. ನೀವು ಯಾವಾಗಲೂ ನನ್ನ ಬೆನ್ನಿನ ಹಿಂದೆ ಬೆಂಬಲವಾಗಿ ಇದ್ದೀರಿ ಎಂಬುದು ನನಗೆ ಗೊತ್ತಿದೆ ಎಂದು ಶಿವಶ್ರೀ ತಮ್ಮ ಪೋಸ್ಟ್‌ನಲ್ಲಿ ಬರೆದಿದ್ದಾರೆ.

ಇದನ್ನೂ ಓದಿ: ಅಣ್ಣಾಮಲೈ, ತೇಜಸ್ವಿ ಸೂರ್ಯ ಸಾಧನೆ, ಯುವ ನಾಯಕರನ್ನು ಕೊಂಡಾಡಿದ ಪ್ರಧಾನಿ ನರೇಂದ್ರ ಮೋದಿ

ಸಂಸದ ಸೂರ್ಯ ಅವರು ಸ್ಪರ್ಧೆಯ ಮೂರು ಕಠಿಣ ಹಂತಗಳಲ್ಲಿ 1.9 ಕಿ.ಮೀಜು, 90 ಕಿ.ಮೀ ಸೈಕ್ಲಿಂಗ್, ಮತ್ತು 21.1 ಕಿ.ಮೀ ಓಟವನ್ನು 7 ಗಂಟೆ 49 ನಿಮಿಷಗಳಲ್ಲಿ ಪೂರ್ಣಗೊಳಿಸಿದ್ದರು. ಈಜಲು ಸುಮಾರು 44 ನಿಮಿಷ, ಸೈಕ್ಲಿಂಗ್‌ಗೆ 3 ಗಂಟೆ 47 ನಿಮಿಷ ಮತ್ತು ಓಟಕ್ಕೆ 2 ಗಂಟೆ 54 ನಿಮಿಷಗಳು ತೆಗೆದುಕೊಂಡಿದ್ದಾರೆ. ಇವರಿಗೆ ಮಿಳುನಾಡು ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ ಕೂಡ ಸಾಥ್ ನೀಡಿದ್ದು, ಅವರು ಈ ಸ್ಪಧರ್ೆಯನ್ನು 8 ಗಂಟೆ 13 ನಿಮಿಷಗಳಲ್ಲಿ ಪೂರ್ಣಗೊಳಿಸಿದ್ದಾರೆ. ಇವರ ಈ ಶಾಧನೆಗೆ ಪ್ರಧಾನಿ ನರೇಂದ್ರ ಮೋದಿಯವರೇ ಸಂತಸ ವ್ಯಕ್ತಪಡಿಸಿದ್ದರು. ಇಂತಹ ಕಾರ್ಯಕ್ರಮಗಳು #FitIndia ಆಂದೋಲನಕ್ಕೆ ಕೊಡುಗೆ. ಭಾಗವಹಿಸಿದ ಎಲ್ಲರಿಗೂ ಅಭಿನಂದನೆಗಳು. ಈ ಐರನ್‌ಮ್ಯಾನ್ ಓಟವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದವರಲ್ಲಿ ನಮ್ಮ ಪಕ್ಷದ ಯುವ ಸಹೋದ್ಯೋಗಿಗಳಾದ ಅಣ್ಣಾಮಲೈ ಮತ್ತು ತೇಜಸ್ವಿ ಸೂರ್ಯ ಸೇರಿದ್ದಾರೆ ಸಂತೋಷ ಎಂದಿದ್ದರು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *