‘ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ (ಬಿಬಿಕೆ 12) ಧ್ರುವಂತ್ ಅವರು ಎಲ್ಲಾ ಸ್ಪರ್ಧಿಗಳಿಗಿಂತ ಭಿನ್ನ ಎನಿಸಿಕೊಂಡಿದ್ದರು. ಅವರು ಯಾರ ತಂಟೆಗೂ ಹೋಗಿ ಗಲಾಟೆ ಮಾಡಿಸಿದ್ದಾರೆ. ತಮ್ಮ ಬಗ್ಗೆ ಯಾವುದಾದರೂ ಆರೋಪ ಕೇಳಿ ಬಂದಾಗ ಆ ವಿಚಾರ ಅವರಿಗೆ ಸಾಕಷ್ಟು ಬೇಸರ ಮೂಡಿಸುತ್ತಿತ್ತು. ಆದರೆ, ಧ್ರುವಂತ್ ಅವರು ಈಗ ಸಂಪೂರ್ಣವಾಗಿ ಬದಲಾಗಿದ್ದಾರೆ. ಅವರು ಎಲ್ಲರ ಮೇಲೆ ಕೋಪಗೊಳ್ಳುತ್ತಿದ್ದಾರೆ. ಹೀಗಿರುವಾಗಲೇ ಧ್ರುವಂತ್ ಅವರ ವಿಡಿಯೋ ಒಂದು ವೈರಲ್ ಆಗಿದ್ದು, ಚರ್ಚೆಯ ಕೇಂದ್ರಬಿಂದು ಆಗಿದೆ.
ಧ್ರುವಂತ್ ಅವರಿಗೆ ರಕ್ಷಿತಾ ಶೆಟ್ಟಿ ಮೇಲೆ ಕೋಪ ಇದೆ. ‘ಎಂತಾ ಗೊತ್ತುಂಟ ಗಯ್ಸ್’ ಎಂದು ರಕ್ಷಿತಾ ಶೆಟ್ಟಿ ಹೇಳೋ ಡೈಲಾಗ್ ಧ್ರುವಂತ್ ಗೆ ಇಷ್ಟ ಆಗೋದಿಲ್ಲ. ಇದನ್ನು ಅವರು ನಿರಂತರವಾಗಿ ಹೇಳುತ್ತಿದ್ದಾರೆ. ಈ ಮೊದಲು ಮಾತನಾಡಿದ್ದ ಧ್ರುವಂತ್ ಅವರು, ‘ಮಂಗಳೂರಿನಲ್ಲಿ ಯಾರೂ ರಕ್ಷಿತಾ ರೀತಿ ಮಾತನಾಡುವುದಿಲ್ಲ’ ಎಂಬ ಆರೋಪ ಮಾಡಿದ್ದರು. ಇದಕ್ಕೆ ಉತ್ತರಿಸಿದ ಸುದೀಪ್ ಅವರು, ‘ನಮಗೆ ಈ ಭಾಷೆಯ ಬಗ್ಗೆ ಯಾವುದೇ ತೊಂದರೆ ಇಲ್ಲ’ ಎಂದಿದ್ದರು.
ಈಗ ಧ್ರುವಂತ್ ಅವರ ವಿಡಿಯೋ ವೈರಲ್ ಆಗಿದೆ, ‘ರಕ್ಷಿತಾ ಅವರ ವಿಷಯ ಬಂದಾಗ ಏನು ಅನಿಸುತ್ತೆ ಅದನ್ನು ಹೇಳೋಕೆ ಅವಕಾಶ ಕೊಡಲ್ವೋ ಅಲ್ಲಿವರೆಗೆ ಮಾತನಾಡಲ್ಲ. ನನಗೆ ಸುದೀಪ್ ಅವರು ಕೊಡಲ್ಲ. ನಾನು ಮಾತನಾಡ್ತೀನಿ ಅಂತ ಕೊಡಲ್ಲ’ ಎಂದು ಧ್ರುವಂತ್ ಅವರು ಮಾತನಾಡಿದ ವಿಡಿಯೋ ವೈರಲ್ ಆಗಿದೆ. ಇದನ್ನು ಸುದೀಪ್ ಫ್ಯಾನ್ಸ್ ಕಂಡಿದ್ದಾರೆ.
ಇದನ್ನೂ ಓದಿ: ಗಿಲ್ಲಿ ಬಳಿ ಇದೆ ದುಬಾರಿ ಕಾರು; ಧ್ರುವಂತ್ ಆರೋಪ ಒಪ್ಪಿಕೊಂಡ ನಟ
ಧ್ರುವಂತ್ ಅವರಿಗೆ ಈ ವಾರ ಸುದೀಪ್ ಪಾಠ ಹೇಳೋದು ಪಕ್ಕಾ ಎನ್ನಲಾಗುತ್ತಿದೆ. ಇದನ್ನು ಧ್ರುವಂತ್ ಅವರು ಯಾವ ರೀತಿ ಸ್ವೀಕರಿಸುತ್ತಾರೆ ಕಾದು ನೋಡಬೇಕಾಗಿದೆ. ಈ ಮೊದಲು ಅವರು ಶೋನಿಂದ ಹೊರ ಹೋಗುವ ಬಗ್ಗೆ ಬೆದರಿಕೆ ಹಾಕಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.