Headlines

ಭಾರತದ ಅತಿದೊಡ್ಡ ಬ್ಯಾಟರಿ ಸ್ಟೋರೇಜ್ ಸಿಸ್ಟಂ ನಿರ್ಮಿಸಲಿರುವ ಅದಾನಿ ಗ್ರೂಪ್; ಇದು ಯಾಕೆ ಮುಖ್ಯ?

ಭಾರತದ ಅತಿದೊಡ್ಡ ಬ್ಯಾಟರಿ ಸ್ಟೋರೇಜ್ ಸಿಸ್ಟಂ ನಿರ್ಮಿಸಲಿರುವ ಅದಾನಿ ಗ್ರೂಪ್; ಇದು ಯಾಕೆ ಮುಖ್ಯ?


ಜನವರಿ, ನವೆಂಬರ್ 11: ಭಾರತಕ್ಕೆ ಅತಿಮುಖ್ಯವಾಗಿರುವ ಬ್ಯಾಟರಿ ಎನರ್ಜಿ ಸ್ಟೋರೇಜ್ ಸಿಸ್ಟಂ (BESS- ಬ್ಯಾಟರಿ ಎನರ್ಜಿ ಶೇಖರಣಾ ವ್ಯವಸ್ಥೆ) ಕ್ಷೇತ್ರಕ್ಕೆ ಅದಾನಿ ಗ್ರೂಪ್ ಪ್ರವೇಶ ಮಾಡುತ್ತಿದೆ. ಭಾರತದ ಅತಿದೊಡ್ಡ ಬ್ಯಾಟರಿ ಸ್ಟೋರೇಜ್ ಸಿಸ್ಟಂ ಅನ್ನು ಈ ಸಂಸ್ಥೆ ನಿರ್ಮಿಸಲು ಉದ್ದೇಶಿಸಿದೆ. 1,126 ಮೆ.ವ್ಯಾ. ಯೋಜನೆ ಜಾರಿಗೆ ತರಲಿದೆ, ಇದರಿಂದ 3,530 ಎಂಡಬ್ಲ್ಯುಎಚ್ (MWh) ಶಕ್ತಿ ಸಂಗ್ರಹಣೆಯ ಸಾಮರ್ಥ್ಯ ನಿರ್ಮಿಸಲಾಗಿದೆ. ಗುಜರಾತ್ ನ ಖಾವಡ ಜಿಲ್ಲೆಯಲ್ಲಿ ಈ ಯೋಜನೆ ನಿರ್ಮಾಣದ ಕೊನೆಯಲ್ಲಿ ನಡೆಯುತ್ತಿದೆ.

ವರದಿಗಳ ಪ್ರಕಾರ, 2026 ರ ಮಾರ್ಚ್ ವೇಳೆಗೆ ಅದಾನಿ ಗ್ರೂಪ್ನ ಈ ಬ್ಯಾಟರಿ ಸ್ಟೋರೇಜ್ ಸಿಸ್ಟಂ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಅಯಾನ್ ಬ್ಯಾಟರಿ ಟೆಕ್ನಾಲಜಿಯನ್ನು ಇದಕ್ಕೆ ಬಳಸಲಾಗುತ್ತಿದೆ. ಇದೇನಾದರೂ ಜಾರಿಯಾದಲ್ಲಿ ಭಾರತದಲ್ಲಿ ಅತಿದೊಡ್ಡ ಬ್ಯಾಟರಿ ಎನರ್ಜಿ ಸ್ಟೋರೇಜ್ ಸಿಸ್ಟಂ ಎನಿಸಲಿದೆ. ವಿಶ್ವದ ಅತಿದೊಡ್ಡ ಸ್ಟೋರೇಜ್ ಸಿಸ್ಟಂಗಳಲ್ಲಿ ಒಂದೆನಿಸಲಿದೆ.

ಇದನ್ನೂ ಓದಿ: ಕೈಯಲ್ಲಿ ಹಣ ನಿಲ್ಲುತ್ತಿಲ್ಲವಾ? ಮೊದಲು ಕೈಬಿಟ್ಟುಹೋಗೋದು ಹಣ ಅಲ್ಲ; ಇದು ತಿಳಿದಿದೆ…

‘ಈ ಐತಿಹಾಸಿಕ ಯೋಜನೆಯಿಂದ ನಾವು ಜಾಗತಿಕ ಮೈಲಿಗಲ್ಲುಗಳನ್ನು ನಿರ್ಮಿಸುತ್ತಿದ್ದೇವೆ, ಭಾರತದ ಇಂಧನ ಸ್ವಾತಂತ್ರ್ಯ ಮತ್ತು ಸುಸ್ಥಿರತೆಗೆ ನಮ್ಮ ಬದ್ಧತೆಯನ್ನು ತೋರಿಸಲಾಗಿದೆ’ ಎಂದು ಅದಾನಿ ಗ್ರೂಪ್ ಸಂಸ್ಥೆಯ ಚೇರ್ಮನ್ ಗೌತಮ್ ಅದಾನಿ ಹೇಳಿದ್ದಾರೆ.

ಮುಂದಿನ 5 ವರ್ಷಕ್ಕೆ ಅದಾನಿ ಗ್ರೂಪ್ ಇನ್ನೂ ದೊಡ್ಡ ಗುರಿ

ಗುಜರಾತ್ ನಲ್ಲಿ ಅದಾನಿ ಗ್ರೂಪ್ನ ಎನರ್ಜಿ ಸ್ಟೋರೇಜ್ ಸಿಸ್ಟಂ ಅಷ್ಟಕ್ಕೇ ಸೀಮಿತವಾಗಿರುವುದಿಲ್ಲ. 2026 ರ ಮಾರ್ಚ್ ನಂತರವೂ ಎನರ್ಜಿ ಸ್ಟೋರೇಜ್ ಸಿಸ್ಟನ್ನ ಸಾಮರ್ಥ್ಯವು ಮತ್ತಷ್ಟು ಏರಿಸುವ ಯೋಜನೆಯು ಮುಂದುವರಿಯಲಿದೆ. 2027ರ ಮಾರ್ಚ್‌ನೊಳಗೆ 15 ಜಿಡಬ್ಲ್ಯುಎಚ್‌ನಷ್ಟು ಬ್ಯಾಟರಿ ಸ್ಟೋರೇಜ್ ಸಾಮರ್ಥ್ಯ ಹೆಚ್ಚಲಿದೆ. ಐದು ವರ್ಷದ ಇದನ್ನು 50 ಜಿಡಬ್ಲ್ಯುಎಚ್‌ಗೆ ಹೆಚ್ಚಿಸುವ ದೊಡ್ಡ ಗುರಿ ಇಟ್ಟಿದೆ ಅದಾನಿ ಗ್ರೂಪ್.

ಇದನ್ನೂ ಓದಿ: ಸಕ್ಕರೆ ಉತ್ಪಾದನೆ ಶೇ. 16% ಏರಿಕೆ ಸಾಧ್ಯತೆ; ಮಹಾರಾಷ್ಟ್ರ, ಕರ್ನಾಟಕದಲ್ಲಿ ಹೆಚ್ಚು ನಿರೀಕ್ಷೆ

ಬ್ಯಾಟರಿ ಎನರ್ಜಿ ಸ್ಟೋರೇಜ್ ಸಿಸ್ಟಂ ಯಾಕೆ ಮುಖ್ಯ?

ಭಾರತದಲ್ಲಿ ವಿವಿಧ ಮೂಲಗಳಿಂದ ವಿದ್ಯುತ್ ಉತ್ಪಾದನೆ ನಡೆಯುತ್ತಿದೆ. ಇವೆಲ್ಲವೂ ಲೈವ್ ಆಗಿದ್ದು, ಇವುಗಳನ್ನು ಎಲ್ಲೆಡೆ ವಿತರಣೆ ಮಾಡುವುದು ದೊಡ್ಡ ಸವಾಲಿನ ಕೆಲಸ. ವಿದ್ಯುತ್ ಸಂಗ್ರಹ ವ್ಯವಸ್ಥೆ ಇದ್ದರೆ, ಅಗತ್ಯವಿರುವಷ್ಟು ವಿದ್ಯುತ್ ಅನ್ನು ವಿತರಿಸಲು ಸಾಧ್ಯ. ಈ ಕೊಡುಗೆ ಬ್ಯಾಟರಿ ಎನರ್ಜಿ ಸ್ಟೋರೇಜ್ ಸಿಸ್ಟಂಗಳು ಬಹಳ ಮುಖ್ಯ ಎನಿಸುತ್ತವೆ.

ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *