ಅಮಿತ್ ಶಾ ಅತ್ಯಂತ ಅಸಮರ್ಥ ಗೃಹ ಸಚಿವ: ಸಚಿವ ಪ್ರಿಯಾಂಕ್​ ಖರ್ಗೆ

ಅಮಿತ್ ಶಾ ಅತ್ಯಂತ ಅಸಮರ್ಥ ಗೃಹ ಸಚಿವ: ಸಚಿವ ಪ್ರಿಯಾಂಕ್​ ಖರ್ಗೆ


ಬೆಂಗಳೂರು, ನವೆಂಬರ್ 11: ದೆಹಲಿಯಲ್ಲಿ ಕಾರು ಸ್ಫೋಟ ಪ್ರಕರಣದ ವಿಚಾರವಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ವಾಗ್ದಾಳಿ. ಸ್ವತಂತ್ರ ಭಾರತದ ಇತಿಹಾಸದಲ್ಲಿ ಅಮಿತ್ ಶಾ ಅವರು ಅತ್ಯಂತ ಅಸಮರ್ಥ ಗೃಹ ಸಚಿವರು ಎಂದು ಖರ್ಗೆ ಹೇಳಿದ್ದಾರೆ. ದೆಹಲಿ, ಮಣಿಪುರ, ಪುಲ್ವಾಮಾ ಮತ್ತು ಪೆಹೆಲ್ಗಾಮ್ ಘಟನೆಗಳನ್ನು ಉಲ್ಲೇಖಿಸಿದ ಅವರು, ಇಂತಹ ಘಟನೆಗಳಿಗೆ ಯಾರು ಹೊಣೆಗಾರರು ಎಂದು ಪ್ರಶ್ನಿಸಿದ್ದಾರೆ. ಕಳೆದ ಹತ್ತು ವರ್ಷಗಳಲ್ಲಿ ಇಂತಹ ಸಾವಿರಾರು ಪ್ರಾಣಹಾನಿಗಳು ಸಂಭವಿಸಿದ್ದು, ಗುಪ್ತಚರ ಇಲಾಖೆ ವೈಫಲ್ಯ ಇದಕ್ಕೆ ಕಾರಣ. ಬಾಂಗ್ಲಾದೇಶಿಗಳು ದೇಶಕ್ಕೆ ನುಸುಳುತ್ತಿರುವ ಬಗ್ಗೆ ಅಮಿತ್ ಶಾ ಅವರು ವಿವಿಧ ರಾಜ್ಯಗಳಲ್ಲಿ ಹೇಳಿಕೆ ನೀಡಿರುವುದನ್ನು ನೆನಪಿಸಿಕೊಂಡರು, ಹಾಗಾದರೆ ಇದಕ್ಕೆ ಯಾರು ಜವಾಬ್ದಾರರು ಎಂದು ಕೇಳಿದ್ದಾರೆ. ಜೊತೆಗೆ, ಈ ಎಲ್ಲಾ ಘಟನೆಗಳ ನೈತಿಕ ಹೊಣೆ ಹೊತ್ತು ಅಮಿತ್ ಶಾ ರಾಜೀನಾಮೆ ನೀಡಿದ್ದಾರೆ ಎಂದು ಸಚಿವ ಖರ್ಗೆ ಒತ್ತಾಯಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *