ಬಿಗ್ಬಾಸ್ (ಬಿಗ್ ಬಾಸ್) ಮನೆಯಲ್ಲಿ ಕ್ಯಾಪ್ಟನ್ ಆದ ಮಾಳು ಅವರು ಮನೆಯ ಚಟುವಟಿಕೆಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳುತ್ತಿದ್ದಾರೆ. ಇದೀಗ ಮಾಳು ಅವರು ರಾಶಿಕಾ ಅವರ ಮೇಲೆ ಕಸ ಹಾಕಿದ್ದಾರೆ, ಧ್ರುವಂತ್ ಅವರ ಮೇಲೆ ಸಗಣಿ ನೀರು ಸುರಿದಿದ್ದಾರೆ. ರಾಶಿಕಾ ವ್ಯಕ್ತಿತ್ವದ ಬಗ್ಗೆ ಮಾಳು ಅವರು ಆಡಿರುವ ಮಾತುಗಳಿಂದ ರಾಶಿಕ ಘಾಸಿಗೊಂಡಿದ್ದು, ಕಣ್ಣೀರು ಹಾಕಿದ್ದಾರೆ. ರಾಶಿಕಾ ಅವರನ್ನು ಅವರ ಆಪ್ತ ಗೆಳೆಯ ಸೂರಜ್ ಸಮಾಧಾನ ಪಡಿಸಿದ್ದಾರೆ. ಇತ್ತ ಮಾಳು ಸಹ ರಾಶಿಕಾ ವಿಷಯವಾಗಿ ಸಹ ಸ್ಪರ್ಧಿಯೊಟ್ಟಿಗೆ ಮಾತನಾಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ