‘ಅಮೃತವರ್ಷಿಣಿ’ ಧಾರಾವಾಹಿ ಖ್ಯಾತಿಯ ರಜಿನಿ ಅವರು ಜಿಮ್ ಟ್ರೇನರ್ ಅರುಣ್ ವೆಂಕಟೇಶ್ ಜೊತೆ ವಿವಾಹ ಆಗಿದ್ದಾರೆ. ನವೆಂಬರ್ 10 ರಂದು ಈ ಮದುವೆ ನಡೆದಿದೆ. ಈ ವಿವಾಹಕ್ಕೆ ಆಪ್ತರು ಹಾಗೂ ಕುಟುಂಬದವರು ಬಂದು ಹಾರೈಸಿದ್ದಾರೆ. ರಜಿನಿ ಅವರ ಆಪ್ತರು ಹಂಚಿಕೊಂಡ ಮದುವೆಯ ಕೆಲ ಫೋಟೋಗಳು ವೈರಲ್ ಆಗಿದ್ದವು. ಈಗ ರಜಿನಿ ಅವರೇ ವಿವಾಹ ಕ್ಷಣದ ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ. ಈ ವಿಡಿಯೋ ಗಮನ ಸೆಳೆಯುವ ರೀತಿಯಲ್ಲಿದೆ.
ರಜಿನಿ ಹಾಗೂ ಅರುಣ್ ಮಧ್ಯೆ ಏಳು ವರ್ಷಗಳ ಪರಿಚಯ ಇದೆ. ಇಬ್ಬರೂ ಒಂದೇ ಜಿಮ್ನಲ್ಲಿ ವರ್ಕೌಟ್ ಮಾಡುತ್ತಿದ್ದಾರೆ. ಇಬ್ಬರ ನಡುವೆ ಫ್ರೆಂಡ್ಶಿಪ್ ಬೆಳೆಯಿತು. ಆ ಬಳಿಕ ಪ್ರೀತಿ ಮೂಡಿದೆ. ಈಗ ಇವರು ಸಪ್ತಪದಿ ತುಳಿದಿದ್ದಾರೆ. ಅರುಣ್ ವೃತ್ತಿಯಲ್ಲಿ ಜಿಮ್ ಟ್ರೇನರ್. ರಜಿನಿ ಅವರು ನಟಿ. ಇಬ್ಬರೂ ರೀಲ್ಸ್ಗಳನ್ನು ಒಟ್ಟಾಗಿ ಮಾಡುತ್ತಿದ್ದರು. ಈಗ ಇವರು ಪತಿ-ಪತ್ನಿ ಆಗಿದ್ದಾರೆ.
ರಜಿನಿ ಅವರು ವಿವಾಹದ ಕ್ಷಣದ ವಿಡಿಯೋ ಹಂಚಿಕೊಂಡಿದ್ದಾರೆ. ಈ ವಿಡಿಯೋಗೆ ‘ನಿಮ್ಮೆಲ್ಲರ ಪ್ರೀತಿ ಆಶೀರ್ವಾದ ಹಾರಿಕೆಯೊಂದಿಗೆ ನಾವು ಹೊಸ ಜೀವನಕ್ಕೆ ಕಾಲಿರಿಸಿದ್ದೆವೇ. ತುಂಬು ಹೃದಯದ ಧನ್ಯವಾದಗಳು’ ಎಲ್ಲರಿಗೂ ರಜಿನಿ. ಅಭಿಮಾನಿಗಳು ಈ ವಿಡಿಯೋಗೆ ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಅನೇಕರು ಅರುಣ್ ಅವರು ಬಾಡಿಗೆಗೆ ಫಿದಾ ಆಗಿದ್ದಾರೆ.
ಅರುಣ್ ಜಿಮ್ ಟ್ರೇನರ್. ಹೀಗಾಗಿ, ಕಟ್ಟುಮಸ್ತಾದ ದೇಹ ಮಾಡಿಕೊಂಡಿದ್ದಾರೆ. ವಿಡಿಯೋ ಜೊತೆಗೆ ಅವರ ಫಿಸಿಕ್ ಹೈಲೈಟ್ ಆಗುವ ರೀತಿಯಲ್ಲಿದೆ. ಅವರ ದೇಹವನ್ನು ಇಷ್ಟಪಟ್ಟಿದ್ದಾರೆ ಎಂದು ಸೂಚಿಸಿದ್ದಾರೆ.
ಇದನ್ನೂ ಓದಿ: ‘ಅಮೃತವರ್ಷಿಣಿ’ ರಜಿನಿ ವಿವಾಹ; ಇಲ್ಲಿದೆ ಸುಂದರ ಫೋಟೋಗಳು
ರಜಿನಿ ಅವರನ್ನು ಅರುಣ್ ಅವರು ಮಮ್ಮಿ ಎಂದು ಕರೆಯುತ್ತಾರಂತೆ. ರೀಲ್ಸ್ಗಳಲ್ಲಿ ಅನೇಕ ಕಡೆಗಳಲ್ಲಿ ರಜನಿ ಅವರನ್ನು ಅರುಣ್ ಮಮ್ಮಿ ಎಂದು ಸಂಬೋಧಿಸಿರುವುದನ್ನು ನೀವು ಕಾಣಬಹುದು. ಈ ವಿಚಾರ ಅವರ ಅಭಿಮಾನಿಗಳಿಗೆ ಅಚ್ಚರಿ ತರಿಸಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.