ಬೆಂಗಳೂರು, ನವೆಂಬರ್ 11: ಸಿಎಂ ಸಿದ್ದರಾಮಯ್ಯ ದೆಹಲಿ ಕೇಂದ್ರ ಸ್ಪೋಟದ ಬಗ್ಗೆ ಮಾತನಾಡುವಾಗ ಸರ್ಕಾರವನ್ನು ದೂಷಿಸಿದ್ದಾರೆ. ಅವರು ಏನೇ ಹೇಳಿದರೂ ದೇಶದ ಭದ್ರತೆ ಅಂದರೆ ಅದು ನರೇಂದ್ರ ಮೋದಿ ಭದ್ರತೆ, ಅಂದರೆ ಅದು ಬಿಜೆಪಿ. ಕಾಂಗ್ರೆಸ್ ಮೇಲೆ ದೇಶದ ಜನಕ್ಕೆ ನಂಬಿಕೆಯೇ ಇಲ್ಲ. ಕಾಂಗ್ರೆಸ್ ನವರು ಪಾಕಿಸ್ತಾನಕ್ಕೆ ಬೆಂಬಲವಿದೆ. ಪಾಕಿಸ್ತಾನದ ಜನ ರಾಹುಲ್ ಗಾಂಧಿನ ಪ್ರೀತಿ ಮಾಡ್ತಾರೆ ಅಂತ ಇಡೀ ಪ್ರಪಂಚಕ್ಕೆ ಗೊತ್ತಿದೆ. ಪಾಕಿಸ್ತಾನದಲ್ಲಿ ರಾಹುಲ್ ಗಾಂಧಿ (ರಾಹುಲ್ ಗಾಂಧಿ) ಫೋಟೋ ಫೇಮಸ್. ನಮ್ಮ ದೇಶದ ಜನ ಅಂಥವರನ್ನು ನಂಬುತ್ತಾರಾ? ಕಾಂಗ್ರೆಸ್ ಸರ್ಕಾರ ಕರ್ನಾಟಕದಲ್ಲಿ ಕಳೆದ 6 ತಿಂಗಳಿನಿಂದ ಒಂದು ರೀತಿ ಐಸಿಯುನಲ್ಲಿದೆ. ಇಲ್ಲಿ ಯಾರು ಮುಖ್ಯಮಂತ್ರಿ? ಯಾರು ಮುಖ್ಯಮಂತ್ರಿ ಆಗ್ತಾರೆ? ಎಷ್ಟು ಜನ ಮಂತ್ರಿಗಳು ಖಾಲಿ ಆಗ್ತಾರೆ? ಎಷ್ಟು ಜನ ಒಳಗಡೆ ಬರ್ತಾರೆ? ಎಂಬುದೇ ಗೊತ್ತಾಗುತ್ತಿಲ್ಲ ಎಂದು ಬಿಜೆಪಿ ನಾಯಕ ಆರ್. ಅಶೋಕ್ (ಆರ್ ಅಶೋಕ್) ಲೇವಡಿ ಮಾಡಿದ್ದಾರೆ.
ದೆಹಲಿಯಲ್ಲಿ ನಡೆದ ಸ್ಫೋಟದ ಬಗ್ಗೆ ಕಾಂಗ್ರೆಸ್ ನಾಯಕರು ಪ್ರಧಾನಿ ಮೋದಿ, ಸಚಿವ ಅಮಿತ್ ಶಾ ಅವರನ್ನು ದೂಷಿಸುತ್ತಿದ್ದಾರೆ. ನಮ್ಮ ದೇಶದ ಆಪರೇಷನ್ ಸಿಂಧೂರ್ ಮಾಡುವುದಕ್ಕೂ ಮೊದಲು ಆಪರೇಷನ್ ಇಂಡೋರ್ ಮಾಡಬೇಕಿತ್ತು. ಇದು ಮನಮೋಹನ್ ಸಿಂಗ್ ಸರ್ಕಾರ ಅಲ್ಲ, ಇದು ಸೋನಿಯಾ ಗಾಂಧಿ ಅಥವಾ ರಾಹುಲ್ ಗಾಂಧಿ ಅವರ ಸರ್ಕಾರ ಅಲ್ಲ. ನಮ್ಮ ಸರ್ಕಾರ ಯಾವುದೇ ಕಾರಣಕ್ಕೂ ಈ ಮುಸ್ಲಿಂ ಭಯೋತ್ಪಾದಕರಿಗೆ ಅನುಕಂಪ ತೋರಿಸುವುದಿಲ್ಲ ಅನ್ನೋದು ಇಡೀ ಪ್ರಪಂಚಕ್ಕೆ ಗೊತ್ತಿದೆ. ಕಾಂಗ್ರೆಸ್ ನವರು ಏನೇ ಆರೋಪ ಮಾಡಿದರೂ ತಪ್ಪಿತಸ್ಥರಿಗೆ ಬಿಜೆಪಿ ಸರ್ಕಾರ ಶಿಕ್ಷೆ ಕೊಟ್ಟೇ ಕೊಡುತ್ತದೆ ಎಂದು ಆರ್. ಅಶೋಕ್ ಭರವಸೆ ನೀಡಿದ್ದಾರೆ.
ಗೃಹ ಸಚಿವ ಅಮಿತ್ ಶಾ ಅವರು ಉಕ್ಕಿನ ಮನುಷ್ಯನ ರೀತಿ ಕೆಲಸ ಮಾಡ್ತಾ ಇದ್ದಾರೆ. ಕಾಂಗ್ರೆಸ್ ಸರ್ಕಾರವಿದ್ದಾಗ ಪರಿಸ್ಥಿತಿ ಹೇಗಿತ್ತು ಎಂಬುದು ಎಲ್ಲರಿಗೂ ಗೊತ್ತಿದೆ. ಈಗ ನಾವು ಭಯೋತ್ಪಾದಕ ದಾಳಿ ಮಾಡುವವರಿಗೆ ಗುಂಡಿಗೆ ಸರಿಯಾದ ಉತ್ತರ ಅಂತ ತೀರ್ಮಾನ ಮಾಡಿದ್ದೇವೆ. ಭಯೋತ್ಪಾದಕರಿಗೆ ಭಯೋತ್ಪಾದನಾ ದೃಷ್ಟಿಯಿಂದಲೇ ಉತ್ತರ ಕೊಡಬೇಕು. ಆ ಉತ್ತರವನ್ನು ನಮ್ಮ ಕೇಂದ್ರ ಸರ್ಕಾರ ನೀಡುತ್ತದೆ ಎಂದು ಆರ್. ಅಶೋಕ್ ಬೆಂಗಳೂರಿನಲ್ಲಿ ಹೇಳಿದ್ದಾರೆ.
ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ