ಪರಪ್ಪನ ಅಗ್ರಹಾರ ಜೈಲಿನ ಉಗ್ರ ಫೋನ್ ಬಳಕೆ, ಏರ್​ಪೋರ್ಟ್​​ ನಮಾಜ್-ದೆಹಲಿ ಸ್ಫೋಟಕ್ಕೂ ಲಿಂಕ್: ಅಶೋಕ್ ಅನುಮಾನ

ಪರಪ್ಪನ ಅಗ್ರಹಾರ ಜೈಲಿನ ಉಗ್ರ ಫೋನ್ ಬಳಕೆ, ಏರ್​ಪೋರ್ಟ್​​ ನಮಾಜ್-ದೆಹಲಿ ಸ್ಫೋಟಕ್ಕೂ ಲಿಂಕ್: ಅಶೋಕ್ ಅನುಮಾನ


ಬೆಂಗಳೂರು, (ನವೆಂಬರ್ 11): ದೆಹಲಿಯ ಕೆಂಪುಕೋಟೆ ಬಳಿ ಐ20 ಕಾರು ಸ್ಫೋಟ ಪ್ರಕರಣಕ್ಕೆ ಹಾಗೂ ಕರ್ನಾಟಕದಲ್ಲಿನ ಕೆಲ ಬೆಳವಣಿಗೆಗಳಿಗೆ ಲಿಂಕ್ ಇದೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಅನುಮಾನ ವ್ಯಕ್ತಪಡಿಸಿದ್ದಾರೆ. ಪ್ರಕರಣಕ್ಕೆ ಇಂದು ಬೆಂಗಳೂರಿನಲ್ಲಿ ಮಾತನಾಡಿರುವ ಅಶೋಕ್, ಪರಪ್ಪನ ಅಗ್ರಹಾರ ಜೈಲಿನಲ್ಲಿ ಉಗ್ರರ ಸೆಟ್ ಹಾಕಿದ್ದಾರೆ. ಅವನಿಗೆ ದೊಡ್ಡ ಲಿಂಕ್ ಇರಬೇಕು. ಪರಪ್ಪನ ಅಗ್ರಹಾರ ಜೈಲಿನಲ್ಲಿ ಉಗ್ರ ಸ್ಮಾರ್ಟ್ ಫೋನ್ ಬಳಕೆ, ವಿಮಾನ ನಿಲ್ದಾಣದಲ್ಲಿ ನಮಸ್, ದೆಹಲಿ ಸ್ಫೋಟಕ್ಕೂ ಲಿಂಕ್ ಇದೆಯಾ? ಈ ಬಗ್ಗೆ ತನಿಖೆ ಇದೆ ಎಂದು ಹೇಳಿದ್ದಾರೆ.

ಕೇಂದ್ರ ಸರ್ಕಾರ ಕರ್ತವ್ಯ ಮಾಡಿದೆ. ಹಾಗೆ ಮಾರ್ಗಸೂಚಿ ನೀಡಿದೆ. ಆದರೆ ರಾಜ್ಯ ಸರ್ಕಾರ ಮಾಡಬೇಕಲ್ವಾ? ಪೊಲೀಸ್ ಇಲಾಖೆ ಜಸ್ಟ್ ಸುತ್ತೋಲೆ ಹೊರಡಿಸಿದೆ ಅಷ್ಟೇ. ಗೃಹ ಸಚಿವರು, ಸಿಎಂ ಕಂಟ್ರೋಲ್ ರೂಂ ಪರಿಶೀಲನೆ ಏನೂ ಕಾಣುತ್ತಿಲ್ಲ. ರಾಜ್ಯ ಸರ್ಕಾರ ಪಾಲಿಸದಿದ್ರೆ ಭದ್ರತೆಗೆ ಅಪಾಯದ ಪರಿಸ್ಥಿತಿ ಬರುತ್ತೆ ಎಂದು ಕಳವಳ ಹೊಂದಿದ್ದ.



Source link

Leave a Reply

Your email address will not be published. Required fields are marked *