Video: ಇದು ಯಕ್ಷಗಾನ ಗೊಂಬೆಯಾಟ; ಸೂತ್ರದಲ್ಲೇ ಕಥೆ ಹೇಳುವ ಪರಿ ರೋಚಕ

Video: ಇದು ಯಕ್ಷಗಾನ ಗೊಂಬೆಯಾಟ; ಸೂತ್ರದಲ್ಲೇ ಕಥೆ ಹೇಳುವ ಪರಿ ರೋಚಕ


ಕರಾವಳಿ ಗಂಡುಕಲೆ ಎಂದೆಂದೂ ಪ್ರಸಿದ್ಧವಾಗಿರುವ ಯಕ್ಷಗಾನದ (ಯಕ್ಷಗಾನ) ಬಗ್ಗೆ ನಿಮಗೆ ತಿಳಿದಿರಬಹುದು. ಈ ಕಲೆಯ ಪೂರ್ವರೂಪವೇ ಈ ಯಕ್ಷಗಾನ ಬೊಂಬೆಯಾಟ. ಇದು ಕರ್ನಾಟಕದ ಕಾಸರಗೋಡು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಪ್ರಚಲಿತದಲ್ಲಿರುವ ಒಂದು ಸಂಪ್ರದಾಯದ ಕಲಾ ಪ್ರಕಾರವಾಗಿದೆ, ಬೊಂಬೆಗಳ ಮೂಲಕ ಯಕ್ಷಗಾನದ ಕಥೆಗಳನ್ನು ಹೇಳಲಾಗಿಲ್ಲ. ಇದೀಗ ನೀರ್ಜಿವ ಗೊಂಬೆಗಳಿಗೆ ಕಥೆಯ ಪಾತ್ರದ ಮೂಲಕ ಜೀವ ಕಳೆ ತುಂಬುವ ಈ ವಿಡಿಯೋ ಸದ್ಯ ವೈರಲ್ ಆಗಿದೆ. ಚೂಡಾಮಣಿ ಹಾಗೂ ಲಂಕದಹನ ಪ್ರಸಂಗವನ್ನು ಗೊಂಬೆಯಾಟದ ಮೂಲಕ ಪ್ರದರ್ಶಿಸಲಾಗುತ್ತಿದ್ದು, ಈ ಕಲಾ ಪ್ರಕಾರಕ್ಕೆ ನೆಟ್ಟಿಗರು ಕಳೆದೇ ಹೋಗಿದ್ದಾರೆ.

ವೇದಿಕೆಯ ಮೇಲೆ ಯಕ್ಷಗೊಂಬೆಗಳ ಮೋದಿ ಹೇಗಿದೆ ನೋಡಿ

cool_dude_dhyan ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ಯಕ್ಷಗಾನ ಗೊಂಬೆಯಾಟದ ಪ್ರದರ್ಶನವನ್ನು ನೋಡಬಹುದು. ಪುಟ್ಟ ಗೂಡಿನಂತೆ ಇರುವ ವೇದಿಕೆಯ ಮೇಲೆ ಚೆಂಡೆ, ಮೆದ್ದಳೆ ಹಾಗೂ ಭಾಗವತಿಕೆಯಲ್ಲಿ ಯಕ್ಷ ಬೊಂಬೆಗಳು ಪ್ರಸಂಗವನ್ನು ಪ್ರಸ್ತುತಪಡಿಸುತ್ತಿವೆ. ಸೂತ್ರದಾರನ ಅಣತಿಯಂತೆ ಕಥೆಯನ್ನು ಅಭಿನಯಿಸುತ್ತ ಚೂಡಾಮಣಿ ಹಾಗೂ ಲಂಕದಹನ ಪ್ರಸಂಗದ ಕಥೆಯನ್ನು ಹೇಳುವುದನ್ನು ಕಾಣಬಹುದು.

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಇದನ್ನೂ ಓದಿ:ನೋಡೋರಿಗೆ ಮನೋರಂಜನ; ಇದು ಸೈಕಲ್ ಸರ್ಕಸ್ ನಂಬಿಕೊಂಡ ಕುಟುಂಬದ ಹೋರಾಟದ ಬದುಕು

ಈ ವಿಡಿಯೋ ನಲವತ್ನಾಲ್ಕು ಸಾವಿರಕ್ಕೂ ಅಧಿಕ ವೀಕ್ಷಣೆಗಳು ಇವೆ. ಒಬ್ಬ ಬಳಕೆದಾರ ಈವಾಗ ಈ ಕಲೆ ಮಾಯವಾಗಿದೆ. ಇದು ತುಂಬಾ ಬೇಸರದ ಸಂಗತಿ ಎಂದು ಹೇಳಿದ್ದಾರೆ. ಇತರರು, ಹೀಗೆ ಕಾಲ ಮಿತಿ ಯಕ್ಷಗಾನಕ್ಕೆ ಪ್ರಾಮುಖ್ಯತೆ ಕೊಟ್ಟರೆ ಯಕ್ಷಗಾನ ಕಲೆಯೂ ಉಳಿಯುತ್ತೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರ ನಾವು ಸಣ್ಣ ವಯಸ್ಸಿನಲ್ಲಿ ಈ ಬೊಂಬೆ ಆಟ ನೋಡಿದ್ದೇವೆ ಎಂದು ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಂದು ಪ್ರಕಟಿಸಲಾಗಿದೆ – 4:50 pm, ಮಂಗಳವಾರ, 11 ನವೆಂಬರ್ 25





Source link

Leave a Reply

Your email address will not be published. Required fields are marked *