ನಟಿ ಶೆಹನಾಜ್ ಗಿಲ್ ಅವರು ಸಲ್ಮಾನ್ ಖಾನ್ (ಸಲ್ಮಾನ್ ಖಾನ್) ಅವರ ಆಪ್ತ ಬಳಗದಲ್ಲಿ ಗುರುತಿಸಲಾಗಿದೆ. ‘ಹಿಂದಿ ಬಿಗ್ ಬಾಸ್ 13’ ರಿಯಾಲಿಟಿ ಶೋನಲ್ಲಿ ಅವರು ಇದ್ದರು. ಆ ಸೀಸನ್ ನಲ್ಲಿ ಅವರು ಬಹಳ ಸೆನ್ಸೇಷನ್ ಸೃಷ್ಟಿ ಮಾಡಿದ್ದರು. 2ನೇ ರನ್ನರ್ ಅಪ್ ಸ್ಥಾನ ಅವರಿಗೆ ಸಿಕ್ಕಿತು. ಬಳಿಕ ‘ಕಿಸಿ ಕಾ ಭಾಯ್ ಕಿಸಿ ಕಿ ಜಾನ್’ ಸಿನಿಮಾದಲ್ಲಿ ಸಲ್ಮಾನ್ ಖಾನ್ ಜೊತೆ ನಟಿಸುವ ಅವಕಾಶ ಕೂಡ ಅವರಿಗೆ ಸಿಕ್ಕಿತು. ಅಲ್ಲಿ, ಸಲ್ಮಾನ್ ಖಾನ್ ಫಾರ್ಮ್ ಹೌಸ್ ನಲ್ಲಿ ನಡೆಯುವ ಪಾರ್ಟಿಯಲ್ಲಿಯೂ ಶೆಹನಾಜ್ ಗಿಲ್ (ಶೆಹನಾಜ್ ಗಿಲ್) ಅವರು ಭಾಗಿ ಆಗಿದ್ದರು. ಅಲ್ಲಿ ಏನೆಲ್ಲ ನಡೆಯುತ್ತಿದೆ ಎಂದು ಅವರು ಈಗ ಹೇಳಿದ್ದಾರೆ.
ಯೂಟ್ಯೂಬರ್ ರಣವೀರ್ ಅಲಹಾಬಾದಿಯಾ ಅವರು ನಡೆಸಿದ ಸಂದರ್ಶನದಲ್ಲಿ ಶೆಹನಾಜ್ ಗಿಲ್ ಅವರು ಮಾತನಾಡಿದ್ದಾರೆ. ‘ಕಿಸಿ ಕ ಭಾಯ್ ಕಿಸಿ ಕಿ ಜಾನ್ ಸಿನಿಮಾ ಸಮಯದಲ್ಲಿ ನಾವೆಲ್ಲರೂ ಅವರ ಫಾರ್ಮ್ ಹೌಸ್ ಗೆ ಹೋಗಿದ್ದೆವು. ಯಾವ ದಿನ ನಾವು ಅಲ್ಲಿಯೇ ಉಳಿದುಕೊಂಡಿದ್ದೆವು. ಅಲ್ಲಿ ಸಲ್ಮಾನ್ ಖಾನ್ ಅವರ ಬೈಕ್ ಇದೆ. ಅದರಲ್ಲಿ ನಾವೆಲ್ಲ ಸುತ್ತಾಡಿದೆವು. ನಮಗೆಲ್ಲ ಸಲ್ಮಾನ್ ಖಾನ್ ಅವರು ಮರದಿಂದ ಹಣ್ಣುಗಳನ್ನು ಕಿತ್ತು ಕೊಡುತ್ತಿದ್ದರು’ ಎಂದು ಶೆಹನಾಜ್ ಗಿಲ್ ಹೇಳಿದ್ದಾರೆ.
‘ಸಲ್ಮಾನ್ ಖಾನ್ ಅವರು ಸಖತ್ ದೇಸಿ. ಒಬ್ಬ ರೈತನ ರೀತಿ ಅವರು ಫಾರ್ಮ್ ಹೌಸ್ ನಲ್ಲಿ ಕೆಲಸ ಮಾಡುತ್ತಾರೆ. ಅದಕ್ಕೆ ಅವರು ಪೂರ್ತಿ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಅವರೊಳಗೆ ದೇಸಿ ಗುಣ ಬಹಳ ಇದೆ. ಯಾವಾಗಲೂ ಅವರು ಕೆಲಸದ ಬಗ್ಗೆ ಮಾತನಾಡುತ್ತಾರೆ. ಸಿನಿಮಾದ ಸಾಹಸ ದೃಶ್ಯಗಳ ಕುರಿತು ಮಾತನಾಡುತ್ತಾರೆ. ಅದರ ಬಗ್ಗೆ ಅವರಿಗೆ ತುಂಬಾ ತಿಳಿದಿದೆ’ ಶೆಹನಾಜ್ ಗಿಲ್.
2019ರಲ್ಲಿ ‘ಬಿಗ್ ಬಾಸ್ 13’ ಪ್ರಸಾರ ಆಗುತ್ತಿದೆ. ಅದರಲ್ಲಿದ್ದ ಶೆಹನಾಜ್ ಗಿಲ್ ಬಗ್ಗೆ ಸಲ್ಮಾನ್ ಖಾನ್ ಅವರು ಬಹಳ ಕಾಳಜಿ ವಹಿಸುತ್ತಿದ್ದರು. ವಾರಂತ್ಯದ ಸಂಚಿಕೆಗಳಲ್ಲಿ ಶೆಹನಾಜ್ ಗಿಲ್ ಜೊತೆ ಅವರು ತಮಾಷೆಯ ಮಾತುಕಥೆ ನಡೆಸುತ್ತಿದ್ದರು. ಆ ಸೀಸನ್ ನಲ್ಲಿ ಶೆಹನಾಜ್ ಗಿಲ್ ಅವರು ವಿನ್ನರ್ ಆಗಲಿಲ್ಲ. ಆದರೆ, ಸಾಕಷ್ಟು ಸೆಂಡೇಷನ್ ಸೃಷ್ಟಿಸಿದ್ದ ಅವರಿಗೆ 2ನೇ ರನ್ ಅಪ್ ಸ್ಥಾನ ಸಿಕ್ಕಿತ್ತು.
ಇದನ್ನೂ ಓದಿ: ಭಯೋತ್ಪಾದಕರ ಪಟ್ಟಿಯಲ್ಲಿ ಸಲ್ಮಾನ್ ಖಾನ್ ಹೆಸರು ಇಲ್ಲ: ಪಾಕಿಸ್ತಾನ ಸ್ಪಷ್ಟನೆ
ಶೆಹನಾಜ್ ಗಿಲ್ ಅವರು ಹಿಂದಿ ಮತ್ತು ಪಂಜಾಬಿ ಸಿನಿಮಾಗಳಲ್ಲಿ ಬ್ಯೂಸಿ ಆಗಿದ್ದಾರೆ. ಅವರು ನಟಿಸಿದ ಪಂಜಾಬಿ ಸಿನಿಮಾ ‘ಇಕ್ ಕುಡಿ’ ಇತ್ತೀಚೆಗೆ ಬಿಡುಗಡೆಯಾಗಿ ಮೆಚ್ಚುಗೆ ಪಡೆದಿದೆ. ಅದಕ್ಕಾಗಿ ಅವರಿಗೆ ಧನ್ಯವಾದ. ಪಂಜಾಬಿ ಭಾಷೆಯ ಹಲವಾರು ಮ್ಯೂಸಿಕ್ ವಿಡಿಯೋಗಳಲ್ಲಿ ಅವರು ನಟಿಸಿದ್ದಾರೆ. ಈಗ ಅವರಿಗೆ 31 ವರ್ಷ ವಯಸ್ಸು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.