ಮುಂದಿನ ದಿನಗಳಲ್ಲಿ ಭಾರತದ ಜಿಡಿಪಿ, ಹಣದುಬ್ಬರ, ಬಡ್ಡಿದರ ಟ್ರೆಂಡ್ ಹೀಗಿರುತ್ತೆ: ಯುಬಿಎಸ್ ಅಂದಾಜು

ಮುಂದಿನ ದಿನಗಳಲ್ಲಿ ಭಾರತದ ಜಿಡಿಪಿ, ಹಣದುಬ್ಬರ, ಬಡ್ಡಿದರ ಟ್ರೆಂಡ್ ಹೀಗಿರುತ್ತೆ: ಯುಬಿಎಸ್ ಅಂದಾಜು


ಜನವರಿ, ನವೆಂಬರ್ 11: ಮುಂಬರುವ ವರ್ಷಗಳಲ್ಲಿ ಭಾರತ ಇದೇ ರೀತಿಯ ಆರ್ಥಿಕ ಬೆಳವಣಿಗೆಯ ವೇಗವನ್ನು ಕಾಯ್ದುಕೊಳ್ಳಲಿದೆ ಎಂದು ನಿರೀಕ್ಷಿಸಲಾಗಿದೆ. ಯುಬಿಎಸ್ ಗ್ಲೋಬಲ್ ರಿಸರ್ಚ್ (ಯುಬಿಎಸ್ ಗ್ಲೋಬಲ್ ರಿಸರ್ಚ್) ಪ್ರಕಾರ ಭಾರತ 2028ರಲ್ಲಿ ವಿಶ್ವದ ಅತಿದೊಡ್ಡ ಆರ್ಥಿಕತೆಯ ದೇಶವೆನಿಸಬಹುದು. 2027-28ರಿಂದ 2029-30ರವರೆಗೂ ಭಾರತದ ಆರ್ಥಿಕ ಬೆಳವಣಿಗೆ ದರ (ಜಿಡಿಪಿ ಬೆಳವಣಿಗೆ) ಶೇ. 6.5ರಷ್ಟು ಇರಬಹುದೆಂದು ನಿರೀಕ್ಷಿಸಲಾಗಿದೆ. ಜೊತೆಗೆ, 2026 ವರ್ಷಕ್ಕೆ ಭಾರತವು ವಿಶ್ವದ ಅತಿದೊಡ್ಡ ಕನ್ಸೂಮರ್ ಮಾರುಕಟ್ಟೆ ಎನಿಸಲಿದೆ ಎಂದು ಯುಬಿಎಸ್ ರಿಸರ್ಚ್ ರಿಪೋರ್ಟ್‌ನಲ್ಲಿ ಅಂದಾಜಿಸಲಾಗಿದೆ.

ಭಾರತದ ಜಿಡಿಪಿ ಬೆಳವಣಿಗೆ ದರ 2026-27ರಲ್ಲಿ ಶೇ. 6.4 ಮತ್ತು 2027-28ರಲ್ಲಿ ಶೇ. 6.5ರಷ್ಟು ಆಗಬಹುದು. ಜಾಗತಿಕ ಅನಿಶ್ಚಿತ ಪರಿಸ್ಥಿತಿಯು ಹೆಚ್ಚು ತೀವ್ರಗೊಳ್ಳುವಂತಿದ್ದರೂ ಭಾರತದ ಸ್ಥೂಲ ಆರ್ಥಿಕತೆಗೆ ಹೆಚ್ಚು ಪ್ರಕ್ಷುಬ್ಧತೆ ಆಗದು ಎಂದು ಯುಬಿಎಸ್ನ ಭಾರತ ವಿಭಾಗದ ಮುಖ್ಯ ಆರ್ಥಿಕ ತಜ್ಞ ತನ್ವೀ ಗುಪ್ತಾ ಜೈನ್ ಅವರು ಹೇಳಿದ್ದಾರೆ.

ಇದನ್ನೂ ಓದಿ: ಭಾರತದ 3 ರಾಜ್ಯಗಳಲ್ಲಿ ಹೊಸ ಚಿನ್ನದ ಗಣಿಗಳು ಪತ್ತೆ; ದೇಶದ ಸ್ವರ್ಣ ದಾಹಕ್ಕೆ ಇದು ಸಾಕಾಗುತ್ತಾ?

ಸುಧಾರಣೆ ತೆರಿಗೆ, ನಿಯಮಗಳ ಸರಳೀಕರಣ, ಮೂಲಸೌಕರ್ಯಗಳಿಗೆ ಒತ್ತುಕೊಟ್ಟಿರುವುದು ಸೇರಿದಂತೆ ಇತ್ತೀಚಿನ ಕೆಲ ನೀತಿ ಕ್ರಮಗಳು ಆರ್ಥಿಕತೆಗೆ ಒಳ್ಳೆಯದು ಮಾಡಿವೆ. ಆದರೆ, ಭೂಮಿ, ಬಂಡವಾಳ, ಆರ್ ಅಂಡ್ ಡಿ ಮೊದಲಾದ ಕ್ಷೇತ್ರಗಳಲ್ಲಿ ನೀತಿಯಲ್ಲಿ ರಚನಾತ್ಮಕವಾದ ಸುಧಾರಣೆಗಳು ಹೆಚ್ಚಾಗಬೇಕು. ಹಾಗಿದ್ದಾಗ ಹೊಸ ಆರ್ಥಿಕತೆಯ ಸೆಕ್ಟರ್‌ಗಳು ಬೆಳವಣಿಗೆ ಹೊಂದಲು ಸಾಧ್ಯ ಎಂಬುದು ಯುಬಿಎಸ್‌ನ ಸಲಹೆ.

ಹಣದುಬ್ಬರದ ಬಗ್ಗೆ ಯುಬಿಎಸ್ ಅಂದಾಜು ಏನು?

ಹಣದುಬ್ಬರ ಮುಂದಿನ ಹಣಕಾಸು ವರ್ಷದ ಶೇ. 4.3ಕ್ಕೆ ಏರಬಹುದು ಎಂದು ಯುಬಿಎಸ್ ರಿಸರ್ಚ್ ರಿಪೋರ್ಟ್ ನಲ್ಲಿ ಅಂದಾಜು ಮಾಡಲಾಗಿದೆ. ಈ ಹಣಕಾಸು ವರದಿ ಪ್ರಕಾರ (2025-26) ಹಣದುಬ್ಬರ ಶೇ. 2.4 ಇರುತ್ತದೆ. 2026-27ರಲ್ಲಿ ಶೇ. 4.3ಕ್ಕೆ ಏರಬಹುದು ಎಂದು ಹೇಳಿದೆ. ಆರ್ ಬಿಐ ಮಾಡಿದ ಅಂದಾಜು ಪ್ರಕಾರ ಆ ವರ್ಷ ಹಣದುಬ್ಬರ ಶೇ. 4.5 ಇರಬಹುದು. ಆರ್ಬಿಐ ನಿರೀಕ್ಷೆಗಿಂತ ಯುಬಿಎಸ್ ಹೆಚ್ಚು ಸಕಾರಾತ್ಮಕವಾಗಿದೆ.

ಇದನ್ನೂ ಓದಿ: ಒಂದು ಲೀಟರ್ ಶುದ್ಧ ಕೊಬ್ಬರಿ ಎಣ್ಣೆಯಲ್ಲಿ ಎಷ್ಟು ಖರ್ಚಾಗುತ್ತೆ ಗೊತ್ತಾ? ಇಲ್ಲಿದೆ ಉತ್ಪಾದಕರ ಪ್ರಾಮಾಣಿಕ ಅನಿಸಿಕೆ

ಈ ವರ್ಷ ಬಡ್ಡಿದರ ಒಮ್ಮೆ ಕಡಿತ ಸಾಧ್ಯತೆ

ಭಾರತದಲ್ಲಿ ಹಣಕಾಸಿನ ಕೊರತೆ ನಿಧಾನವಾಗಿ ಕಡಿಮೆಯಾಗುತ್ತಿದೆ. ಈ ಹಣಕಾಸು ವರ್ಷದ (2026-26) ಮುಂದಿನ ದಿನಗಳಲ್ಲಿ 25 ಮೂಲಾಂಕಗಳ ದರ ಕಡಿತ ಆಗಬಹುದು. ನಂತರದ ಅವಧಿಯಲ್ಲಿ (2026-27) ಬಡ್ಡಿದರದಲ್ಲಿ ಯಾವ ಪರಿಷ್ಕರಣೆ ಆಗದು ಎಂದು ಯುಬಿಎಸ್ ರಿಸರ್ಚ್ ವರದಿಯಲ್ಲಿ ಅಂದಾಜು ಮಾಡಲಾಗಿದೆ.

ಇದೇ ವೇಳೆ, ಭಾರತದ ಮೇಲೆ ಅಮೆರಿಕದ ಶೇ. 50 ಟ್ಯಾರಿಫ್ ಕ್ರಮ ಮುಂದುವರಿದಿದೆ ಆದಲ್ಲಿ ಜಿಡಿಪಿ ಬೆಳವಣಿಗೆಯಲ್ಲಿ 50 ಮೂಲಾಂಕಗಳು ಕಡಿಮೆಯಾಗಬಹುದು ಎಂದು ಈ ವರದಿಯಲ್ಲಿ ಅಭಿಪ್ರಾಯಪಟ್ಟಿದೆ.

ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *