Chanakya Niti: ಹೆಂಡ್ತಿಯಾದವಳು ಗಂಡನ ಮುಂದೆ ಈ ಮಾತುಗಳನ್ನಾಡಬಾರದೆಂದು ಚಾಣಕ್ಯರು ಹೇಳುತ್ತಾರೆ

Chanakya Niti: ಹೆಂಡ್ತಿಯಾದವಳು ಗಂಡನ ಮುಂದೆ ಈ ಮಾತುಗಳನ್ನಾಡಬಾರದೆಂದು ಚಾಣಕ್ಯರು ಹೇಳುತ್ತಾರೆ


ಪ್ರತಿಯೊಂದು ಸಂಬಂಧವು ಪ್ರೀತಿ, ನಂಬಿಕೆ ಮತ್ತು ತಿಳುವಳಿಕೆಯನ್ನು ಆಧರಿಸಿದೆ. ಅದರಲ್ಲೂ ಗಂಡ ಹೆಂಡತಿಯ (ಗಂಡ ಹೆಂಡತಿ) ಸಂಬಂಧ ಎನ್ನುವಂತಹದ್ದು ತುಂಬಾನೇ ಪವಿತ್ರವಾದದ್ದು, ಗಂಡ ಹೆಂಡತಿಯ ನಡುವೆ ಯಾವುದೇ ರೀತಿಯ ಮುಚ್ಚುಮರೆ ಇರಬಾರದು, ಸಂಗಾತಿಗಳಿಬ್ಬರೂ ಮುಕ್ತವಾಗಿ ಮಾತನಾಡಬೇಕು ಎಂದು ಹೇಳಿದರೆ. ಆದರೆ ಆಚಾರ್ಯ ಚಾಣಕ್ಯರು ಹೆಂಡತಿಯಾದವಳು ಯಾವುದೇ ಕಾರಣಕ್ಕೂ ಗಂಡನ ಜೊತೆ ಈ ಕೆಲವು ಮಾತುಗಳನ್ನಾಡಬಾರದು ಎಂದು ಹೇಳಿದ್ದಾರೆ. ಪತ್ನಿ ತನ್ನ ಪತಿಯ ಮುಂದೆ ಆಡುವ ಈ ಕೆಲವು ಮಾತುಗಳು ಸಂಬಂಧದಲ್ಲಿ ಬಿರುಕು ಮೂಡಲು ಕಾರಣ, ಅಂತಹ ಮಾತುಗಳನ್ನಾಡದಿದ್ದರೆ ಒಳ್ಳೆಯದು. ಹಾಗಿದ್ದರೆ ಹೆಂಡ್ತಿ ಗಂಡನ ಮುಂದೆ ಯಾವ ಮಾತುಗಳನ್ನಾಡಬಾರದು ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ.

ಹೆಂಡತಿ ತನ್ನ ಗಂಡನ ಜೊತೆ ಈ ಮಾತುಗಳನ್ನಾಡಬಾರದು:

ಕುಟುಂಬ ಸದಸ್ಯರನ್ನು ಹೋಲಿಕೆ ಮಾಡಿ ಮಾತನಾಡುವುದು: ಮದುವೆಯ ನಂತರ ಹೆಂಡತಿ ತನ್ನ ಹೆತ್ತವರ ಮನೆಯ ಸದಸ್ಯರೊಂದಿಗೆ ಗಂಡನ ಮನೆಯ ಸದಸ್ಯರನ್ನು ಹೋಲಿಕೆ ಮಾಡಬಾರದು ಎಂದು ಆಚಾರ್ಯ ಚಾಣಕ್ಯರು ಹೇಳುತ್ತಾರೆ. ಪ್ರತಿಯೊಂದು ಕುಟುಂಬದ ಪರಿಸ್ಥಿತಿಯೂ ವಿಭಿನ್ನ ಮತ್ತು ತನ್ನ ಗಂಡನ ಮನೆಯನ್ನು ತಾಯಿಯ ಮನೆಗೆ ಹೋಲಿಸುವುದು ಸಂಬಂಧದಲ್ಲಿ ಬಿರುಕು ಮೂಡಲು ಕಾರಣ. ಇದು ಗಂಡನಿಗೆ ಅನಾನುಕೂಲವನ್ನುಂಟುಮಾಡುತ್ತದೆ ಮತ್ತು ಮನೆಯ ವಾತಾವರಣವನ್ನು ಹಾಳು ಮಾಡುತ್ತದೆ ಎನ್ನುತ್ತಾರೆ ಚಾಣಕ್ಯ.

ಸುಳ್ಳು ಮಾತುಗಳನ್ನಾಡುವುದು: ಚಾಣಕ್ಯನ ಪ್ರಕಾರ, ಸಂಬಂಧದ ಅಡಿಪಾಯ ನಂಬಿಕೆಯ ಮೇಲೆ ಅವಲಂಬಿತವಾಗಿದೆ. ಒಮ್ಮೆ ಸುಳ್ಳು ಬಹಿರಂಗವಾದರೆ, ಒಡೆದು ಹೋದ ನಂಬಿಕೆಯನ್ನು ಪುನರ್ನಿರ್ಮಿಸಲು ಸಾಧ್ಯವಿಲ್ಲ. ಆದ್ದರಿಂದ, ಸಣ್ಣ ವಿಷಯಗಳಲ್ಲಿಯೂ ಪ್ರಾಮಾಣಿಕವಾಗಿರುವುದು ಬಹಳ ಮುಖ್ಯ. ಸತ್ಯವು ಸಂಬಂಧಗಳನ್ನು ಬಲಪಡಿಸುತ್ತದೆ. ಯಾವುದೇ ಗಂಡನ ಬಳಿ ಯಾವುದೇ ಕಾರಣಕ್ಕೂ ಸುಳ್ಳು ಮಾತುಗಳನ್ನಾಡಬೇಡಿ.

ಗಂಡನೊಂದಿಗೆ ಇತರರೊಂದಿಗೆ ಹೋಲಿಸಿ ಮಾತನಾಡುವುದು: ಕೆಲ ಮಹಿಳೆಯರು ತಮ್ಮ ಗಂಡನನ್ನು ಇತರರೊಂದಿಗೆ ಹೋಲಿಸಿ ಮಾತನಾಡುತ್ತಾರೆ. ನನ್ನ ಸ್ನೇಹಿತೆ ಗಂಡ ಆಕೆಗೆ ಚಿನ್ನವನ್ನು ಕೊಡಿಸಿದ್ದಾರೆ, ನೀವೇನು ಕೊಡಿಸಿದ್ದಾರೆ, ನೀವ್ಯಾಕೆ ಆ ಹುಡುಗನಂತೆ ಸ್ಟೈಲ್ ಮಾಡೋದಿಲ್ಲ ಎಂದು ಇತರ ಪುರುಷರ ಜೊತೆ ಹೋಲಿಕೆ ಮಾಡುತ್ತಾರೆ. ಇದು ಪುರುಷನ ಸ್ವಾಭಿಮಾನಕ್ಕೆ ಧಕ್ಕೆ ತರುತ್ತದೆ. ನಿಮ್ಮ ಈ ಕಠೋರ ಮಾತುಗಳು ಸಂಬಂಧದಲ್ಲಿ ಬಿರುಕು ಮೂಡಲು ಸಾಧ್ಯವಾಗಬಹುದು. ಈ ರೀತಿಯ ಹೋಲಿಕೆಯ ಮಾತುಗಳನ್ನಾಡಬೇಡಿ ಎನ್ನುತ್ತಾರೆ ಚಾಣಕ್ಯ.

ಇದನ್ನೂ ಓದಿ: ನಾಲ್ಕು ಕೆಲಸಗಳನ್ನು ಮಾಡುವ ಜನರಿಗೆ ಯಾವಾಗಲೂ ಆರ್ಥಿಕ ಸಂಕಷ್ಟ ಎದುರಾಗುವುದಿಲ್ಲವಂತೆ

ಹಣಕಾಸಿನ ವಿಷಯಗಳಲ್ಲಿ ಗೌಪ್ಯತೆ ಇರಲಿ: ಹೆಂಡತಿ ತನ್ನ ಉಳಿತಾಯ, ದೇಣಿಗೆ ಅಥವಾ ಕುಟುಂಬದ ಖರ್ಚಿನ ಬಗ್ಗೆ ಗಂಡನಿಗೆ ಸಂಪೂರ್ಣ ಹಣ ನೀಡುವುದು ಅನಿವಾರ್ಯವಲ್ಲ. ಕೆಲವು ವಿಷಯಗಳನ್ನು ರಹಸ್ಯವಾಗಿಡುವುದರಿಂದ ಕುಟುಂಬದ ಆರ್ಥಿಕ ಸಮತೋಲನ ಕಾಯ್ದುಕೊಳ್ಳಬಹುದು. ಆದರೂ ಇಬ್ಬರ ನಡುವಿನ ಸಂವಹನ ಮುಖ್ಯ ಎನ್ನುತ್ತಾರೆ ಚಾಣಕ್ಯ.

ಕೋಪದಲ್ಲಿ ಏನನ್ನೂ ಹೇಳಬೇಡಿ: ಒಬ್ಬ ವ್ಯಕ್ತಿ ಕೋಪದಲ್ಲಿ ಮಾತನಾಡಿದ ಆತನ ಮಾತುಗಳು ಕೂಡ ಕಠೋರ ನಡುವೆ. ಕೋಪದಲ್ಲಿ ಮಾತನಾಡುವ ಒಂದು ಮಾತು ಕೂಡ ಸಂಬಂಧವನ್ನು ನಾಶಮಾಡುತ್ತದೆ ಎಂದು ಚಾಣಕ್ಯರು ಹೇಳುತ್ತಾರೆ. ಕೋಪದಲ್ಲಿ ಹೆಂಡತಿ ತನ್ನ ಗಂಡನಿಗೆ ಹೇಳುವ ಮಾತು ಅವನಿಗೆ ತುಂಬಾ ನೋವುಂಟು ಮಾಡುತ್ತದೆ. ಆದ್ದರಿಂದ, ಅಂತಹ ಪರಿಸ್ಥಿತಿಯಲ್ಲಿ ಮೌನವಾಗಿರುವುದು ಉತ್ತಮ. ಮೌನವು ಸಂಬಂಧವನ್ನು ರಕ್ಷಿಸುತ್ತದೆ ಮತ್ತು ಪ್ರೀತಿಯನ್ನು ಬಲಪಡಿಸುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *