Headlines

Bihar Election Exit Poll Results 2025: ಬಿಹಾರದಲ್ಲಿ ಮತ್ತೊಮ್ಮೆ ಎನ್​ಡಿಎಗೆ ಗೆಲುವಿನ ಮಾಲೆ; ಚುನಾವಣೋತ್ತರ ಸಮೀಕ್ಷೆಗಳ ಲೆಕ್ಕಾಚಾರ ಇಲ್ಲಿದೆ

Bihar Election Exit Poll Results 2025: ಬಿಹಾರದಲ್ಲಿ ಮತ್ತೊಮ್ಮೆ ಎನ್​ಡಿಎಗೆ ಗೆಲುವಿನ ಮಾಲೆ; ಚುನಾವಣೋತ್ತರ ಸಮೀಕ್ಷೆಗಳ ಲೆಕ್ಕಾಚಾರ ಇಲ್ಲಿದೆ


ಪಾಟ್ನಾ, ನವೆಂಬರ್ 11: ಬಿಹಾರದಲ್ಲಿ 2 ಹಂತಗಳಲ್ಲಿ ವಿಧಾನಸಭಾ ಚುನಾವಣೆ (ಬಿಹಾರ ವಿಧಾನಸಭೆ ಚುನಾವಣೆ) ನಡೆದಿದೆ. ಮೊದಲ ಮತದಾನ ನವೆಂಬರ್ 6 ರಂದು ನಡೆದ ಎರಡನೇ ಮತದಾನ ಇಂದು ಮುಕ್ತಾಯವಾಗಿದೆ. ಈ ಬಾರಿ ಬಿಹಾರದಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಹಾಗೂ ಕಾಂಗ್ರೆಸ್ ನೇತೃತ್ವದ ಮಹಾಘಟಬಂಧನ ನಡುವೆ ನೇರ ಸ್ಪರ್ಧೆ ಏರ್ಪಟ್ಟಿತ್ತು. ಇದರಲ್ಲಿ ಯಾವ ಮೈತ್ರಿಕೂಟ ಚುನಾವಣೆಯಲ್ಲಿ ಗೆಲ್ಲಬಹುದು ಎಂಬ ಕಲ್ಪನೆಯನ್ನು ನೀಡಲು ಚನಾವಣೋತ್ತರ ಸಮೀಕ್ಷೆಗಳು ಸಹಾಯ ಮಾಡುತ್ತವೆ. ಎಕ್ಸಿಟ್ ಪೋಲ್ ಯಾವ ಪಕ್ಷಕ್ಕೆ ಎಷ್ಟು ಸ್ಥಾನಗಳು ಸಿಗಬಹುದು ಎಂದು ಲೆಕ್ಕಾಚಾರ ಹಾಕಿದರೆ ಅದರ ಬಗ್ಗೆ ಮಾಹಿತಿ ಇಲ್ಲಿದೆ.

ಬಿಹಾರದಲ್ಲಿ ಮೊದಲ ಹಂತದಲ್ಲಿ, 18 ಜಿಲ್ಲೆಗಳ 121 ಕ್ಷೇತ್ರಗಳಿಗೆ ಚುನಾವಣೆ ನಡೆದರೆ, ಎರಡನೇ ಹಂತದಲ್ಲಿ 20 ಜಿಲ್ಲೆಗಳ 122 ಸ್ಥಾನಗಳಿಗೆ ಮತದಾನ ನಡೆಯಿತು. ಚುನಾವಣಾ ಫಲಿತಾಂಶ ನವೆಂಬರ್ 14 ರಂದು ಹೊರಬೀಳಲಿದೆ. ಎಕ್ಸಿಟ್ ಪೋಲ್ ಸಮೀಕ್ಷೆಗಳು ಬಿಹಾರದಲ್ಲಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಈ ಬಾರಿ ಸ್ಪಷ್ಟ ಮುನ್ನಡೆಯನ್ನು ಸಾಧಿಸಲಿದೆ ಎಂದು ಭವಿಷ್ಯ ನುಡಿದಿವೆ. ತೀವ್ರ ಪೈಪೋಟಿಯಿಂದ ಕೂಡಿರುವ ಈ ಸಮೀಕ್ಷೆಯಲ್ಲಿ ತೇಜಸ್ವಿ ಯಾದವ್ ನೇತೃತ್ವದ ಮಹಾಘಟಬಂಧನ ಬಣ ಎನ್‌ಡಿಎಗಿಂತ ಹಿಂದುಳಿದಿದೆ.

ಇದನ್ನೂ ಓದಿ: ಬಿಹಾರ ವಿಧಾನಸಭಾ ಚುನಾವಣೆ 2025: ಇಂದು ಬಿಹಾರ ವಿಧಾನಸಭಾ ಚುನಾವಣೆಯ ಎರಡನೇ ಮತದಾನ

ಯಾವ ಸಮೀಕ್ಷೆ ಏನು ಹೇಳಿದೆ?:

ಪೀಪಲ್ಸ್ ಪಲ್ಸ್ ಸಮೀಕ್ಷೆ

ಎನ್ಡಿಎ: 133-159 ಮಹಾಘಟಬಂಧನ್: 75-101 ಜನ್ ಸುರಾಜ್: 0-5 ಎಲಿಟ್: 2-8

ಪೀಪಲ್ಸ್ ಇನ್‌ಸೈಟ್ ಸಮೀಕ್ಷೆ

ಎನ್ಡಿಎ: 133-148

ಮಹಾಘಟಬಂಧನ್:87-102

ಬಿಜೆಪಿ: 68-72 ಜೆಡಿಯು: 55-60 ಆರ್‌ಜೆಡಿ: 65-72 ಕಾಂಗ್ರೆಸ್: 9-13

ಮ್ಯಾಟ್ರಿಜ್ ಸಮೀಕ್ಷೆ

ಎನ್ಡಿಎ: 147-167

ಮಹಾಘಟಬಂಧನ್: 70-90

ಜೆವಿಸಿ ಸಮೀಕ್ಷೆ

ಎನ್ಡಿಎ: 135-140

ಮಹಾಘಟಬಂಧನ್: 88-103

ಭಾಸ್ಕರ್ ಬಿಹಾರ ಸಮೀಕ್ಷೆ

ಎನ್ಡಿಎ: 145-160

ಮಹಾಘಟಬಂಧನ್: 73-91

ಚಾಣಕ್ಯ ಸ್ಟ್ರಾಟಜೀಸ್ ಸಮೀಕ್ಷೆ

ಎನ್ಡಿಎ: 130-138 ಮಹಾಘಟಬಂಧನ್: 100-108 ಅಂಶ: 3-5

ಇದನ್ನೂ ಓದಿ: ಬಿಹಾರದಲ್ಲಿ ಮೊದಲ ಹಂತದ ಚುನಾವಣೆ ಮುಕ್ತಾಯ; ಶೇ. 64.46ರಷ್ಟು ಮತದಾನ ದಾಖಲು

2020ರ ಬಿಹಾರ ವಿಧಾನಸಭಾ ಚುನಾವಣೆ, ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಜೆಡಿಎಸ್ 115 ಕ್ಷೇತ್ರಗಳಲ್ಲಿ ಕೇವಲ 43 ಸ್ಥಾನಗಳನ್ನು ಗೆದ್ದಿತ್ತು. 2015ರ ಬಿಹಾರ ಚುನಾವಣೆ, ಜೆಡಿಎಸ್ 71 ಸ್ಥಾನಗಳನ್ನು ಗೆದ್ದಿತ್ತು. 2020ರ ವಿಧಾನಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಬಿಹಾರದಲ್ಲಿ ಏಕೈಕ ಅತಿದೊಡ್ಡ ಪಕ್ಷವಾಗಿ ಸ್ಪರ್ಧಿಸಿತ್ತು. ಆಗ ಅದು 75 ಸ್ಥಾನಗಳನ್ನು ಗೆದ್ದಿತ್ತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಂದು ಪ್ರಕಟಿಸಲಾಗಿದೆ – 7:13 pm, ಮಂಗಳವಾರ, 11 ನವೆಂಬರ್ 25



Source link

Leave a Reply

Your email address will not be published. Required fields are marked *