ಬಾಗಲಕೋಟೆ, (ನವೆಂಬರ್ 11): ಕಬ್ಬು ಬೆಳೆಗಾರರ ಸಮಸ್ಯೆ ಬಗೆಹರಿಯುವ ಲಕ್ಷಣಗಳು ಕಾಣುತ್ತಿಲ್ಲ. ಪ್ರತಿ ಟನ್ ಕಬ್ಬಿಗೆ 3500 ನಿಗದಿ ಮಾಡುವಂತೆ ಒತ್ತಾಯ ಬೆಳಗಾವಿಯಲ್ಲಿ ಭಾರೀ ಪ್ರಮಾಣದಲ್ಲಿ ಪ್ರತಿಭಟನೆ ನಡೆಯಿತು. ರೈತರ ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆಯೇ ಸಿಎಂ ಸಿದ್ದರಾಮಯ್ಯ ಸಕ್ಕರೆ ಕಾರ್ಖಾನೆಯೊಂದಿಗೆ ಸಭೆ ನಡೆಸಿ ಫಿಪ್ಟಿ ಫಿಪ್ಟಿ ತೀರ್ಮಾನ ಕೈಗೊಂಡಿದ್ದಾರೆ. ಹಾಗೆ ಸರ್ಕಾರದಿಂದ 50 ರೂ. ಹಾಗೂ ಕಾರ್ಖಾನೆಯಿಂದ 50 ರೂ. ಒಟ್ಟು 330 ರೂ ನೀಡಲು ಸರ್ಕಾರ ತೀರ್ಮಾನಿಸಿದೆ, ಈ ಸಂಬಂಧ ಅಧಿಕೃತ ಆದೇಶ ಸಹ ಹೊರಡಿಸಿದೆ. ಈ ಬೆಳಗಾವಿ ರೈತರು ಸಂಭ್ರಮಾಚರಣೆ ಮಾಡಿ ಪ್ರತಿಭಟನೆ ಅಂತ್ಯಗೊಳಿಸಿದ್ದರು. ಆದರೆ, ಬಾಗಲಕೋಟೆಯಲ್ಲಿ ಮಾತ್ರ ಕಬ್ಬು ಬೆಳೆಗಾರರ ಪ್ರತಿಭಟನೆ ನಿಲ್ಲುತ್ತಿಲ್ಲ. ಕಬ್ಬಿಗೆ ದರ ನಿಗದಿ ರಾಜ್ಯ ಸರ್ಕಾರದ ಆದೇಶವನ್ನು ತಿರಸ್ಕರಿಸಿದೆ, ಆದೇಶ ಪ್ರತಿಗೆ ಬೆಂಕಿ ಇಟ್ಟು ಆಕ್ರೋಶ ಹೊರಹಾಕಿದೆ.
ಈ ಸಂಬಂಧ ಬಾಗಲಕೋಟೆ ಜಿಲ್ಲೆ ಮುಧೋಳದಲ್ಲಿ ಮಾತನಾಡಿದ ಕೋಡಿಹಳ್ಳಿ ಚಂದ್ರಶೇಖರ್ , ಕಬ್ಬಿಗೆ ಸೂಕ್ತ ದರ ನಿಗದಿಗಾಗಿ ರಾಜ್ಯಾದ್ಯಂತ ಹೋರಾಟ ಮಾಡ್ತೇವೆ. ಸಕ್ಕರೆ ಕಾರ್ಖಾನೆ ಚುನಾವಣೆಗೆ ನಿಂತರೆ ಮತ ಹಾಕಬಾರದು. ರೈತರಿಗೆ ಕಾರ್ಖಾನೆಗಳಿಗೆ ಮತ ಹಾಕದಿದ್ದರೆ ಸೊಂಟ ಮುರಿಯುತ್ತೆ. ನಮಗೂ ಮಾನ ಮರ್ಯಾದೆ ಇಲ್ಲ, ಅಂಥವರಿಗೆ ವೋಟ್ ಹಾಕುತ್ತೇವೆ. ರೈತರ ಶಾಸನಸಭೆಗೆ ಕಳುಹಿಸಿದರೆ ನಮಗೆ ಇಂತಹ ಸ್ಥಿತಿ ಬರಲ್ಲ. ಬೆಳಗಾವಿ ಜಿಲ್ಲೆಯ ರೈತರು ಬೆಳಗಾವಿಯಲ್ಲೇ ಹೋರಾಟ ಮಾಡಬೇಕು. ಧಾರವಾಡ ಭಾಗದ ರೈತರ ಹೋರಾಟದ ಘೋಷಣೆ ಮಾಡಲಿ. ರೈತರ ಹೋರಾಟಕ್ಕೆ ಬೆಂಬಲ ನೀಡುತ್ತೇವೆ ಎಂದರು.