Headlines

ಪುನತ್ಸಂಗ್ಚು- II ಜಲವಿದ್ಯುತ್ ಯೋಜನೆ ಉದ್ಘಾಟಿಸಿದ ಪ್ರಧಾನಿ ಮೋದಿ- ಭೂತಾನ್ ರಾಜ

ಪುನತ್ಸಂಗ್ಚು- II ಜಲವಿದ್ಯುತ್ ಯೋಜನೆ ಉದ್ಘಾಟಿಸಿದ ಪ್ರಧಾನಿ ಮೋದಿ- ಭೂತಾನ್ ರಾಜ


ಭೂತಾನ್, ನವೆಂಬರ್ 11: ಭೂತಾನ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ (ಪಿಎಂ ನರೇಂದ್ರ ಮೋದಿ) ಭೂತಾನ್ ರಾಜ ಡ್ರೂಕ್ ಗಯಾಲ್ಪೊ ಅವರೊಂದಿಗೆ ಇಂದು ಪುನತ್ಸಂಗ್ಚು-II ಜಲವಿದ್ಯುತ್ ಯೋಜನೆ ಉದ್ಘಾಟಿಸಿದರು. ಇದು ಭಾರತ ಮತ್ತು ಭೂತಾನ್ ನಡುವಿನ ಯಶಸ್ವಿ ಇಂಧನ ಪಾಲುದಾರಿಕೆಯಲ್ಲಿ ಮತ್ತೊಂದು ಪ್ರಮುಖ ಮೈಲಿಗಲ್ಲಾಗಿದೆ.

ಪುನತ್ಸಂಗ್ಚು-II ಜಲವಿದ್ಯುತ್ ಯೋಜನೆ ಭಾರತ ಮತ್ತು ಭೂತಾನ್ ಎರಡೂ ದೇಶಗಳು ಜಂಟಿಯಾಗಿ ರಚಿಸಿವೆ. 1,020-ಮೆಗಾವ್ಯಾಟ್ನ ಈ ವಿದ್ಯುತ್ ಯೋಜನೆ ಎರಡೂ ದೇಶಗಳ ಇಂಧನ ಪಾಲುದಾರಿಕೆಯಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ.

ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೂತಾನದ ರಾಜ ಮತ್ತು ರಾಣಿ ಭೂತಾನ್‌ನ ಥಿಂಪುವಿನ ವಾಂಗ್ ಚು ನದಿಯ ಪಶ್ಚಿಮದಲ್ಲಿರುವ ಐತಿಹಾಸಿಕ ಕೋಟೆ ಮತ್ತು ಬೌದ್ಧ ಮಠವಾದ ತಾಶಿಚೋ ಡ್ಜಾಂಗ್‌ನಲ್ಲಿ ಬರಮಾಡಿಕೊಂಡರು. ಈ ವೇಳೆ ಮೋದಿ ಅವರು ಪ್ರಾರ್ಥನೆ ಸಲ್ಲಿಸಿದರು. ಹಾಗೆಯೇ, ಭೂತಾನ್ ರಾಜ ಮತ್ತು ರಾಣಿಯೊಂದಿಗೆ ಬೆಣ್ಣೆಯ ದೀಪವನ್ನು ಬೆಳಗಿಸಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *