Headlines

Horoscope Today: ಇಂದು ಈ ರಾಶಿಯವರಿಗೆ ಅನುಕಂಪವೇ ಅಧಿಕವಾಗಿ ಕೆಲಸ ಮಾಡಲಿದ್ದು, ದುರುಪಯೋಗ ಸಾಧ್ಯತೆ

Horoscope Today: ಇಂದು ಈ ರಾಶಿಯವರಿಗೆ ಅನುಕಂಪವೇ ಅಧಿಕವಾಗಿ ಕೆಲಸ ಮಾಡಲಿದ್ದು, ದುರುಪಯೋಗ ಸಾಧ್ಯತೆ


ಮೇಷ ರಾಶಿ :
ಗೃಹಕಾರ್ಯದ ವಿಚಾರದಲ್ಲಿ ಮನೆಯವರ ಜೊತೆ ವಿವಾದ. ನೌಕರರಿಂದ ಕಾರ್ಯದಲ್ಲಿ ತೊಂದರೆ ಸಾಧ್ಯತೆ. ನಿಮ್ಮದಲ್ಲದ ಕಾರ್ಯವನ್ನು ಮಾಡಲು ಒಪ್ಪುಕೊಳ್ಳಲಾರಿರಿ. ಸಾಲದ ಮರುಪಾವತಿಗೆ ಸೂಕ್ತ ಕ್ರಮದ ಅಗತ್ಯವಿರಲಿದೆ. ಆಲಸ್ಯದಿಂದ ಕಛೇರಿಯ ಕೆಲಸಗಳು ವಿಳಂಬವಾಗುವುದು. ನಿಮ್ಮ ಬಗ್ಗೆ ಪ್ರಶಂಸೆಯ ನುಡಿಗಳು ಕೇಳಿಬರಬಹುದು. ಓದುವ ಸಮಯದಲ್ಲಿ ಇಂದು ಹೊಂದಾಣಿಕೆಯಾಗದು. ಪೂರಕ ವಾತಾವರಣದಲ್ಲಿ ಕೊರತೆ ಇರುವುದು. ಹೂಡಿಕೆಯ ವಿಚಾರದಲ್ಲಿ ಇಂದು ಸಕಾರಾತ್ಮಕ ಆಲೋಚನೆಯು ಇರದು. ಉದ್ವೇಗದಲ್ಲಿ ಇದ್ದರೂ ಏನೂ ಆಗದೇ ಇರುವಂತೆ ತೋರುವಿರಿ. ಸಹೋದ್ಯೋಗಿಯ ವರ್ತನೆಯು ನಿಮಗೆ ಆಶ್ಚರ್ಯಗೊಳ್ಳುವಿರಿ. ಸ್ಪರ್ಧೆಗಳಲ್ಲಿ ನಿರೀಕ್ಷಿತ ಉತ್ಸಾಹವಿಲ್ಲ. ಕಾರ್ಮಿಕ ವಲಯದಿಂದ ಗೌರವ ಸಿಗಲಿದೆ. ಮನೋಬಲವು ಯಾರಿಂದಲಾದರೂ ಕುಗ್ಗಬಹುದು. ಸಿಟ್ಟು ಮಾಡಿಕೊಂಡು ಆಗಬೇಕಾದ ಕೆಲಸವನ್ನು ಮಾಡಿ ಮುಗಿಸಿ. ಮೊದಲಿಗೆ ಎಲ್ಲ ಕಡೆ ಬಿಂಬಿಸಿಕೊಳ್ಳುವರು.

ವೃಷಭ ರಾಶಿ :
ನಿಮ್ಮನ್ನು ಕಾಯಿಸಿ ಅವರಿಂದ ಅತಿಯಾದ ನಿಂದನೆ ಪಡೆಯಬೇಕಾಗುವುದು. ಸಹೋದ್ಯೋಗಿಗಳು ಸುಮ್ಮನೆ ತಡೆ ತರಬಹುದು. ನೀವು ಕೆಲಸ ಮಾಡುವ ಸಂಸ್ಥೆಯ ರಹಸ್ಯವನ್ನು ನೀವು ಬಿಟ್ಟುಕೊಡಲಾರಿರಿ. ನಿಮ್ಮ ಸಮ್ಮುಖದಲ್ಲಿ ಕುಟುಂಬದ ಸಮಸ್ಯೆಗಳು ಬಗೆಹರಿಯಬಹುದು. ಬಹಳ ದಿನಗಳ ಅನಂತರ ಸಾರ್ವಜನಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿರಿ. ಉತ್ಸಾಹವೂ ಇರಲಿದೆ. ನಿಮ್ಮ ನಿರುದ್ಯೋಗದ ಸ್ಥಿತಿಯು ದಾಯಾದಿಗಳಿಗೆ ಸಂತಸವಾಗುವುದು. ಸಕಾರಾತ್ಮಕ ಆಲೋಚನೆಗಳನ್ನು ನೀವು ಆಪ್ತರ ಜೊತೆ ಹಂಚಿಕೊಳ್ಳುವಿರಿ. ನಿಮ್ಮ ಯೋಜನೆಗೆ ಬೆನ್ನೆಲುಬಾಗಿ ನಿಲ್ಲುವವರು ಬೇಕಾಗಿದ್ದಾರೆ. ನಿಮ್ಮ ಅಸೂಯೆ ಇತರರಿಗೆ ಕಷ್ಟ ಕೊಡುವುದು. ಅಧಿಕ ಖರ್ಚನ್ನು ಇಂದು ಮಾಡಬೇಕಾಗುವುದು. ನಿಮ್ಮ ದುರಭ್ಯಾಸವನ್ನು ಇತರರಿಗೂ ಹಿಡಿಸುವ ಸಾಧ್ಯತೆ ಇದೆ. ಭವಿಷ್ಯದ ಆಗುಹೋಗುಗಳ ಬಗ್ಗೆ ಅತಿಯಾದ ಚಿಂತೆ ಇರಲಿದೆ. ಸಿಕ್ಕಿದ್ದನ್ನು ರಕ್ಷಣೆ ಮಾಡಿಕೊಳ್ಳುವ ಜವಾಬ್ದಾರಿಯು ನಿಮ್ಮದಾಗಿದೆ. ಸುಮ್ಮನೆ ಇರುವುದು ನಿಮಗೆ ಇಂದು ಪ್ರಿಯವಾದೀತು. ಹೂಡಿಕೆಯಿಂದ ಹಣವನ್ನು ಕಳೆದುಕೊಳ್ಳುವಿರಿ.

ಮಿಥುನ ರಾಶಿ :
ಕಾಲಿನ ರೋಗದಿಂದ ತೊಂದರೆ. ಓಡಾಟವನ್ನು ಅತಿಯಾಗಿ ಮಾಡುವುದು ಬೇಡ. ದುಷ್ಕಾರ್ಯಕ್ಕೆ ನಿಮ್ಮನ್ನು ಪ್ರಚೋದಿಸಬಹುದು. ಮನಸ್ಸು ಯಾವುದೋ ಕಾರಣಕ್ಕೆ ಭಾರವಾಗಿರುತ್ತದೆ. ಅನ್ಯರಿಂದ ಅಸಾಧ್ಯ ಎನಿಸಿದ ಕಾರ್ಯವನ್ನು ಮಾಡಲು ನೀವು ಧೈರ್ಯವನ್ನು ಬಿಡಲಾರಿರಿ. ಶತ್ರುವಿನ ಮೇಲೆ ಸೇಡು ತೀರಿಸಿಕೊಳ್ಳಲು ಅಧಿಕ ಖರ್ಚನ್ನು ಮಾಡಬೇಕಾದೀತು. ಉದ್ಯಮಿಗಳಿಗೆ ನೌಕರರ ಕಲಹವನ್ನು ಸರಿ ಮಾಡುವುದೇ ಹೆಚ್ಚಾಗುವುದು. ಆಪತ್ತಿನ ಸಹಾಯಕ್ಕೆ ಪ್ರಶಂಸೆ ಸಿಗಲಿದೆ. ಸ್ನೇಹಿತರ ಸಹಕಾರದಿಂದ ಸ್ಥಿರಾಸ್ತಿಯನ್ನು ಖರೀದಿಸಿ. ಪಾಂಡಿತ್ಯವಿದೆ ಎಂದು ಎಲ್ಲ ಕಡೆ ಪ್ರದರ್ಶಿಸಲಾಗದು. ಉದ್ಯಮಕ್ಕೆ ಬೇಕಾದ ವಿವರಗಳನ್ನು ಅನುಭವಿಗಳಿಂದ ಪಡೆಯಿರಿ. ವಿಶ್ರಾಂತಿಯ ಕಾರಣ ಕಾರ್ಯದಲ್ಲಿ ಅಸ್ತವ್ಯಸ್ತತೆ ಕಾಣಲಿದೆ. ವಿವಾಹ ಸಮಾರಂಭದಲ್ಲಿ ಪಾಲ್ಗೊಳ್ಳುವಿರಿ. ಪ್ರಭಾವೀ ವ್ಯಕ್ತಿಗಳ ಭೇಟಿಯು ನಿಮ್ಮ ಜೀವನೋತ್ಸಾಹವನ್ನು ಹೆಚ್ಚಿಸುವುದು. ಮಾತನಾಡುವ ವೇಗದಲ್ಲಿ ಏನನ್ನಾದರೂ ಹೇಳಿಬಿಡುವಿರಿ.

ಕರ್ಕಾಟಕ ರಾಶಿ :
ಅದನ್ನು ಹುಡುಕಿಕೊಂಡು ಬರುವಂತೆ ಮಾಡಬೇಕೇ ವಿನಃ ನೀವೇ ಹುಡುಕಬೇಡಿ. ಹಣ ಬರುವ ದಾರಿಯನ್ನೇ ನೋಡಿ ಕುಳಿತರೆ ಆಗದು. ಕಾರ್ಯವು ಪ್ರಾರಂಭದಲ್ಲಿ. ಯಶಸ್ಸಿಗಾಗಿ ಏನನ್ನೂ ಮಾಡದೇ ಕರ್ತವ್ಯದ ದೃಷ್ಟಿಯಿಂದ ಯಶಸ್ಸನ್ನು ನಿಮ್ಮನ್ನು ಬಂದು ಸೇರುವುದು. ನಿಮ್ಮನ್ನು ದುರುಪಯೋಗ ಮಾಡಿಕೊಳ್ಳುವ ಸಂಭವವಿದೆ. ನಿಮ್ಮ ಜ್ಞಾನವನ್ನು ಕಿರಿಯರು ಪರಿಹರಿಸುತ್ತಾರೆ. ಉತ್ತಮ ಭೂಮಿಯ ಲಾಭವನ್ನು ಪಡೆದುಕೊಳ್ಳಿ. ಅಪಾಯಕ್ಕೆ ಸಿಕ್ಕಿಕೊಳ್ಳುವ ಸಂಭವವಿತ್ತು. ಧನವ್ಯಯವನ್ನು ನಿಮ್ಮ ಜಾಣ್ಮೆಯಿಂದ ತಪ್ಪಿಸಿಕೊಳ್ಳಿರಿ. ಅಪರಿಚಿತರಿಗೆ ಇಂದು ಅಲ್ಪ ಧನಸಹಾಯವನ್ನು ಮಾಡಬೇಕಾಗುವುದು. ಅಲ್ಪ ಸಾಧನೆಗೆ ಅಹಂಕಾರ ಚಿಗುರುವುದು. ಕೋಪದ ನಿಯಂತ್ರಣವೂ ಕಷ್ಟವಾದೀತು. ಮಾಡುವ ಕೆಲಸದಲ್ಲಿ ನಿರಂತರತೆ ಮುಖ್ಯ. ಸಂಸಾರದಲ್ಲಿ ನಿರಾಸಕ್ತಿಯು ಹೆಚ್ಚಾಗುವುದು. ಸಂಗಾತಿಯ ಜೊತೆ ನಿಮಗೆ ಸಮಯ ಕಳೆಯಲೂ ಕಷ್ಟವಾದೀತು. ಇಷ್ಟದವರನ್ನು ನೀವು ಭೇಟಿಯಾಗುವಿರಿ.

ಸಿಂಹ ರಾಶಿ :
ಸಾಲವನ್ನು ಉಳಿಸಿಕೊಳ್ಳುವುದು ಬೇಡ. ಅದು ಬೃಹತ್ತಾಗಿ ಗೊತ್ತಾಗದಂತೆ ಬೆಳೆಯುವುದು. ಗುರಿಯ ಬಗ್ಗೆ ಯಾವುದೇ ಅಳುಕು ಇರದು. ಬಂಧುಗಳ ಕಾರಣದಿಂದ ಇಂದಿನ ಕಾರ್ಯದಲ್ಲಿ ತೊಡಕುಗಳು ಕಾಣಿಸಿಕೊಳ್ಳುತ್ತವೆ. ತಂದೆಗೆ ಬೇಕಾದ ಧನಸಹಾಯವನ್ನು ನೀವು ಮಾಡುತ್ತೀರಿ. ಬಂದ ಹಣವನ್ನು ಸಂಗ್ರಹಿಸಲು ಪ್ರಯತ್ನಿಸಿ. ಇಲ್ಲವಾದರೆ ಸಂಪತ್ತನ್ನು ಉಳಿಸಿಕೊಳ್ಳುವುದು ಕಷ್ಟವಾದೀತು. ಪರಾವಲಂಬಿಯಾಗಿ ಹೆಚ್ಚು ಕಾಲ ಇರಲಾಗದು. ಅಸಾಧ್ಯವನ್ನು ಸಾಧಿಸುವ ಹಠವು ಬೇಡವಾದೀತು. ಉದ್ಯಮದಲ್ಲಿ ಹಿನ್ನಡೆಯಾಗುವುದು ನಿಮಗೆ ಮೊದಲೇ ಗೊತ್ತಿದ್ದೂ ಪ್ರಯತ್ನಿಸುವಿರಿ. ಕ್ಷಮಾ ಗುಣದಿಂದ ದೊಡ್ಡವರಾಗುವ ಸಂಭವ. ಸಂಸ್ಥೆಯ ಮುಖ್ಯಸ್ಥರಾಗಲು ಆಹ್ವಾನ ಬರಲಿದೆ. ಅನಪೇಕ್ಷಿಯ ವಿಚಾರವನ್ನು ಪ್ರಸ್ತಾಪಿಸಿಕೊಂಡು ಕಾಲಹರಣ ಮಾಡುವಿರಿ. ತಾಯಿಯ ವಿಚಾರದಲ್ಲಿ ನೀವು ಇಂದು ಕೋಪಗೊಳ್ಳುವ ಸಾಧ್ಯತೆಯಿದೆ. ಉದ್ಯಮಿಗಳಿಗೆ ಉದ್ಯಮವನ್ನು ವಿಸ್ತರಿಸುವ ಚಿಂತನೆಯಲ್ಲಿ ಇರುವಿರಿ. ಜನರ ಮಾತನ್ನು ಕೇಳುವ ತಾಳ್ಮೆ ನಾಯಕನಿಗೆ ಬೇಕು.

ಕನ್ಯಾ ರಾಶಿ :
ಆದಾಯದ ವೃದ್ಧಿಯಿಂದ ಮನೆಯಲ್ಲಿ ಕಿರಿಕಿರಿ ಆರಂಭ. ರಾಜಕೀಯದ ಅಸಹಜ ಬೆಳವಣಿಗೆಯಿಂದ ಅತಂತ್ರ ಸ್ಥಿತಿ ಕಾಣಿಸಿಕೊಳ್ಳಬಹುದು. ಸಾಲವನ್ನು ಇನ್ನೊಬ್ಬರಿಗಾಗಿ ಮಾಡಬೇಕಾದೀತು. ನಿಮ್ಮ ಸಂಕಷ್ಟಕ್ಕೆ ಯಾರನ್ನೋ ದೂರುವುದು ಸರಿಯಲ್ಲ. ಸ್ತ್ರೀಯರ ಉಪಸ್ಥಿತಿಯು ನಿಮಗೆ ಬಲವನ್ನು ತಂದುಕೊಡುವುದು. ವಿದೇಶದ ಮಿತ್ರರ ಸಹಾಯದಿಂದ ನೀವು ಉದ್ಯಮವು ವಿಸ್ತಾರವಾಗಿದೆ. ಅಧಿಕ ಓಡಾಟದಿಂದ ನೀವು ಆಯಾಸಗೊಳ್ಳುವಿರಿ. ಇಂದು ಹಣದ ಹರಿವು ಅಲ್ಪವಾಗಿ ಇರುವುದು. ಆಪ್ತರನ್ನು ಕಳೆದುಕೊಂಡು ಬೇಸರಿಸುವಿರಿ. ಆರ್ಥಿಕ ಸಮಸ್ಯೆಗೆ ಸಾಲ ಮಾಡುವುದೊಂದೇ ಆಗಿರದು. ನಿಮ್ಮ ಭಾಗವಹಿಸುವಿಕೆ ಎಲ್ಲದರಲ್ಲೂ ಕಡಿಮೆಯಾಗಲಿದೆ. ನಿದ್ರೆಯು ಕಡಿಮೆಯಾದ ಕಾರಣ ಕಾರ್ಯದಲ್ಲಿ ಉತ್ಸಾಹ ಕಡಿಮೆ ಇರುತ್ತದೆ. ಪ್ರೇಮಿಯ ಜೊತೆ ಹರಟೆ ಹೊಡೆಯುತ್ತ ದಿನವನ್ನು ಕಳೆಯುವಿರಿ. ಸ್ತ್ರೀಸಂಬಂಧದ ವಿಷಯದಲ್ಲಿ ಆರೋಪವನ್ನು ಕೇಳಬಹುದು. ಸಂಪತ್ತು ಮತ್ತಾವುದೋ ರೂಪದಲ್ಲಿ ಬಂದು ಸೇರುತ್ತದೆ ಎಂಬ ನಂಬಿಕೆ ಇರಲಿದೆ. ಇತರರ ಮೇಲೆ ಪರಿಣಾಮ ಬೀರುವಂತೆ ಮಾಡುವಿರಿ.

ಇದನ್ನೂ ಓದಿ: ನವೆಂಬರ್ 09 ರಿಂದ 15 ರವರೆಗೆ ವಾರ ಭವಿಷ್ಯ ತಿಳಿಯಿರಿ

ತುಲಾ ರಾಶಿ :
ಸಿದ್ಧತೆಯ ಪರಿಶೀಲನೆ ಮಾಡುವಿರಿ. ಬೌದ್ಧಿಕ ಕಸರತ್ತಿಗೆ ನೀವು ಒಗ್ಗುವುದು ಕಷ್ಟ. ಇಂದು ನೀವು ಹೊರಟ ಕಾರ್ಯದಿಂದ ಅರ್ಧಕ್ಕೆ ಬರಬೇಕಾದೀತು. ಶತ್ರುಗಳ ಕಾರಣದಿಂದ ಖರ್ಚು ಮಾಡಬೇಕಾದ ಸ್ಥಿತಿಯು ಬರಲಿದೆ. ಮನಶ್ಶಾಂತಿಗಾಗಿ ಧಾರ್ಮಿಕ ಕಾರ್ಯಗಳನ್ನು ಮಾಡಿರಿ. ಅಕಾಲದಲ್ಲಿ ಸೇವಿಸಿದ ಆಹಾರದಿಂದ ನಿಮಗೆ ಆರೋಗ್ಯವು ಹಾಳಾಗುತ್ತದೆ. ಮನೆಯಲ್ಲಿ ನೌಕರರ ಕಾರಣಕ್ಕೆ ಸಿಟ್ಟಾಗುವಿರಿ. ಫಲಿತಾಂಶದಿಂದ ಹೊರಬರುವುದು ನಿಮಗೆ ಆಗದೇ ಇರಬಹುದು. ಹೊಸ ಸಂಬಂಧದ ಕಡೆ ನಿಮ್ಮ ಚಿತ್ತವು ಇರಲಿದೆ. ನಿರಂತರ ಕೆಲಸ ಮಾಡುವುದು ಇಷ್ಟ. ಸಂಗಾತಿಯ ಭಾವನೆಗೆ ಬೆಲೆ ಕೊಟ್ಟು ಸಂತೋಷಪಡಿಸುವಿರಿ. ಆಂತರಿಕ ಭಿನ್ನತೆಯು ಅತಿಯಾಗಲಿದೆ. ಎಲ್ಲರೂ ಸಂದೇಹದ ದೃಷ್ಟಿಯಿಂದ ನೋಡುವವರೇ. ಗೃಹನಿರ್ಮಾಣವು ಕಾರಣಾಂತರಗಳಿಂದ ಮುಂದೆ ಹೋಗುವುದು. ನಿಮಗೆ ಬೇಕಾದ ಅವಕಾಶ ಸಿಗದೇ ಒದ್ದಾಡುವಿರಿ. ವಿದ್ಯುತ್ ಉಪಕರಣದಿಂದ ಅಪಾಯವು ಆಗಬಹುದು. ಹಳೆಯ ಘಟನೆಗಳು ನಿಮ್ಮನ್ನು ಕಾಡಬಹುದು. ಆತಂಕದಿಂದ ನೀವು ಮುಕ್ತರಾಗಲು ಬಯಸುವಿರಿ.

ವೃಶ್ಚಿಕ ರಾಶಿ :
ಹೊಸ ತರಬೇತಿಗೆ ಸೇರಿಕೊಳ್ಳಿ. ಸ್ತ್ರೀಯರಿಗೆ ಸಂಬಂಧಿಸಿದ ವಿಚಾರದಲ್ಲಿ ಮನಸ್ತಾಪ ಕಾಣಿಸಿಕೊಳ್ಳುವುದು. ಹಣಕ್ಕಿಂತ ಆರೋಗ್ಯ ಮುಖ್ಯವಾದ ಕಾರಣ ಅಂತಹ ಸನ್ನಿವೇಶವನ್ನು ನೀವು ಹೊಂದಿರಬೇಕು. ಅನಿರೀಕ್ಷಿತ ಮಾತುಗಳನ್ನು ಕೇಳಬೇಕಾದ ಸ್ಥಿತಿ ಬರಬಹುದು. ಸಣ್ಣ ಆರೋಗ್ಯದ ತೊಂದರೆಯೂ ನಿಮ್ಮ ಮನಸ್ಸಿಗೆ ಕಿರಿಕಿರಿಯನ್ನು ಉಂಟುಮಾಡುತ್ತದೆ. ಕಾರ್ಯದಲ್ಲಿ ವೇಗವು ಕುಂಠಿತವಾಗುವುದು. ಸರ್ಕಾರದ ಸೌಲಭ್ಯವು ನಿಮಗೆ ಸಿಗದೇ ಹೋಗಬಹುದು. ದೃಷ್ಟಿದೋಷದಿಂದ ಬೇರೆ ಬೇರೆ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಯಾರಿಗೂ ನಿಮ್ಮ ಅವಶ್ಯಕತೆ ಇಲ್ಲದೇ ಹೋಗಬಹುದು. ನಿರಪೇಕ್ಷಿತ ಸಹಾಯದಿಂದ ನೀವು ಕಾರ್ಯದಲ್ಲಿ ಮುನ್ನಡೆಯುವಿರಿ. ಹಣವನ್ನು ಸಾಲವಾಗಿ ಬರುವ ನಿರೀಕ್ಷೆ ಇಲ್ಲದೇ ಕೊಡುವಿರಿ. ಸಾಮಾಜಿಕ ತಾಣದಿಂದ ಪ್ರೇಮವು ಉಂಟಾಗಬಹುದು. ಅಹಂಕಾರದ ಕಾರಣ ಅನ್ಯರನ್ನು ದ್ವೇಷಿಸುವಿರಿ. ಉದ್ಯಮದಲ್ಲಿ ಹಿನ್ನಡೆಯಾಗುವುದು ನಿಮಗೆ ಮೊದಲೇ ಗೊತ್ತಿದ್ದೂ ಪ್ರಯತ್ನಿಸುವಿರಿ.

ಧನು ರಾಶಿ :
ಎಲ್ಲಿಗೇ ಹೋದರೂ ನೆಮ್ಮದಿ ಸಿಗದು. ಹಲವು ಚಿಂತೆಗಳು ನಿಮ್ಮನ್ನು ಆಗಾಗ್ಗೆ ಕಾಡುವುದು. ಇಂದು ಬಂದ ಹಣವನ್ನು ಉಳಿಸಿಕೊಳ್ಳಲಾಗದ ಭೀತಿ ಕಾಡುವುದು. ನಿಮ್ಮನ್ನು ಅಗೌರವದಿಂದ ಕಾಣುವವರ ಮೇಲೆ ಕೋಪ ಬರುವುದು. ಯಾರ ಬಳಿಯೂ ಸಹಾಯ ಹಸ್ತವನ್ನು ಚಾಚದೇ ಸ್ವಂತ ಬಲದ ಮೇಲೆ ಬರುವ ಆಸೆ ಇರಲಿದೆ. ನಿಮ್ಮ ನಿಷ್ಕಾಳಜಿಯಿಂದ ಅನಾಯಾಸವಾಗಿ ಬರುವ ಆದಾಯವು ಸಿಗದೇ ಹೋಗುವುದು. ವಿದ್ಯಾಭ್ಯಾಸದಲ್ಲಿ ಸಹಪಾಠಿಗಳಿಂದ ತೊಂದರೆ. ಸಂಗಾತಿಯಿಂದ ಅವಮಾನವಾಗುವುದು. ಆರ್ಥಿಕವಾಗಿ ನಿಮಗೆ ಖುಷಿ ಕೊಟ್ಟರೂ ಸಂತೋಷ ಮಾತ್ರ ಇರದು. ಮಿತ್ರರು ನಿಮ್ಮ ಆರೋಗ್ಯವನ್ನು ವಿಚಾರಿಸಿಕೊಳ್ಳಬಹುದು. ನಿಮ್ಮ ಜೀವನದ ಕುರಿತು ತಂದೆ ತಾಯಿಯರು ಚಿಂತಿಸುತ್ತಾರೆ. ನೀವು ಮಾತಿಗೆ ತಪ್ಪಿದವರು ಎಂಬ ಪಟ್ಟಕ್ಕೆ ಸಿಗುವುದು. ಕುಟುಂಬಕ್ಕಾಗಿ ಹಣವು ಖರ್ಚಾಗಲಿದೆ. ಯಾರ ಯೋಗ್ಯತೆಯನ್ನೂ ಅಳೆಯಲು ಸಾಧ್ಯವಾಗದು. ಅಪಾಯಕ್ಕೆ ಸಿಕ್ಕಿಕೊಳ್ಳುವ ಸಂಭವವಿದೆ. ಜಾಣತನ ಇಂದು ನಿಮ್ಮ ಉಪಯೋಗಕ್ಕೆ ಬಾರದು.

ಮಕರ ರಾಶಿ :
ಸಮಾರಂಭಗಳಿಗೆ ನೀವು ವಿಶೇಷ ಆಹ್ವಾನಿತರಾಗಿ ಹೋಗುವಿರಿ. ವಾಹನ ಖರೀದಿಯ ಯೋಗವು ಸಫಲವಾಗುವುದು. ಒಳ್ಳೆಯ ವ್ಯವಸ್ಥೆ ಇಟ್ಟುಕೊಂಡು ಸರಿಯಾದ ಸೇವೆ ಕೊಡಲು ಕಷ್ಟವಾಗಬಹುದು. ತಾತ್ಕಾಲಿಕವಾಗಿ ನಿಮ್ಮ ಸಮಸ್ಯೆಗಳು ನಿವಾರಣೆಯಾಗಲು ಸ್ವಲ್ಪ ಉಸಿರಾಡಲು ಸಿಗುತ್ತದೆ. ಉದ್ಯೋಗದಲ್ಲಿ ಭಡ್ತಿಗಾಗಿ ಕಾಯುತ್ತಿದ್ದರೆ ಇಂದು ಸಿಗಬಹುದು. ಹಿತಶತ್ರುಗಳ ಬಗ್ಗೆ ಎಚ್ಚರಿಕೆ ಅತಿಯಾಗಿ ಬೇಕು. ಮೋಸದ ಜಾಲಕ್ಕೆ ಸಿಕ್ಕಿಹಾಕು ಸಾಧ್ಯತೆ ಇದೆ. ಆಭರಣ ಮೇಲೆ ಹೂಡಿಕೆಗೆ ಯೋಚನೆ. ಅನುಭವಕ್ಕೆ ಬಾರದೇ ಏನನ್ನು ಒಪ್ಪಿಕೊಳ್ಳುವುದು ಬೇಡ. ಪೂಜಾಯೋಗ್ಯರಿಗೆ ಆತಿಥ್ಯವನ್ನು ನೀಡುವಿರಿ. ಯಾವ ವಿಚಾರವನ್ನೂ ಹಂಚಿಕೊಳ್ಳುವ ಮನಸ್ಸಾಗದು. ನಿಮ್ಮ ಬಗ್ಗೆ ಇರುವ ಸುಳ್ಳು ಸುದ್ದಿಯು ಸರಿಯಾಗಬಹುದು. ಬರುವ ಆದಾಯವನ್ನು ಗೌಪ್ಯವಾಗಿ ಇಡಿರಿ. ಸ್ನೇಹಿತರ ಸಹಕಾರದಿಂದ ಸ್ಥಿರಾಸ್ತಿಯನ್ನು ಖರೀದಿಸಿ. ಪ್ರೀತಿಯಲ್ಲಿ ನಿಮಗೆ ಮೋಸವಾಗುವುದು.

ಕುಂಭ ರಾಶಿ :
ಇದ್ದಕಿದ್ದಂತೆ ಕಾರ್ಯದಲ್ಲಿ ನಿರುತ್ಸಾಹ. ಆದಾಯದ ಮಾರ್ಗವು ಸರಿಯಾಗಿ ಇರಲಿ ಹಾಗೂ ಎಲ್ಲದರ ಲೆಕ್ಕವೂ ಬೇಕಾದೀತು. ಅಧರ್ಮದ ಆದಾಯವನ್ನು ಪಡೆಯುವ ಇಚ್ಛೆ ಬರದು. ಚಾಂಚಲ್ಯದ ಮನಸ್ಸಿನಿಂದ ಕೆಲವು ನಿರ್ಧಾರಗಳನ್ನು ಗಟ್ಟಿಯಾಗಿಸಲು ಕಷ್ಟವಾಯಿತು. ನಿಮ್ಮ ಪುಟ್ಟ ಪ್ರಪಂಚದಿಂದ ಹೊರಬರಲು ತಯಾರಾಗುವಿರಿ. ಬಂಧುಗಳ ನಕಾರಾತ್ಮಕ ಹೇಳಿಕೆಗಳು ನಿಮಗೆ ಉದ್ವೇಗ ಉಂಟಾಗಲಿದೆ. ಆಡಿದ ಮಾತಿಗೆ ಕ್ಷಮೆಯನ್ನು ಕೇಳಬೇಕಾದೀತು. ನಿಮ್ಮ ಸುರಕ್ಷತೆಯಲ್ಲಿ ನೀವಿರುವುದು ಉತ್ತಮ. ಕಾರ್ಯಗಳನ್ನು ಸೋಮಾರಿತನದಿಂದ ಮುಂದಿಡುವುದು. ಅತಿಯಾದ ಕೋಪವು ವ್ಯವಹಾರಸ್ಥರು ಮೇಲೆ ತೊಂದರೆ ಕೊಡುವುದು. ನಿಮ್ಮ ಗೌಪ್ಯ ವಿಚಾರವನ್ನು ಮುಚ್ಚಿಡಲು ಪ್ರಯತ್ನಿಸುವಿರಿ. ನಿಮ್ಮ ನಿಲುವು ಕೆಲವರಿಗೆ ಇಷ್ಟವಾಗುವುದು. ನಿಮ್ಮಲ್ಲಿ ಭೀತಿಯ ಮನೋಭಾವವು ಇರಲಿದೆ. ಅತಿಥಿಗಳ ಆಗಮನ ಕಾರ್ಯಕ್ರಮ. ನಿರುದ್ಯೋಗದ ಸ್ಥಿತಿಯು ದಾಯಾದಿಗಳಿಗೆ ಸಂತಸವಾಗುವುದು.

ಮೀನ ರಾಶಿ :
ವ್ಯಾಪಾರದಲ್ಲಿ ಅಪಾರ ಲಾಭ. ಸಣ್ಣ ಮಾತು ದೊಡ್ಡ ಕಲಹಕ್ಕೆ. ನಿಮ್ಮ ಸಾಮಾಜಿಕ ಕಾರ್ಯಗಳಿಗೆ ಉತ್ತಮ ಜನಸ್ಪಂದನ ಸಿಗಬಹುದು. ನೀವು ಉದ್ಯಮಿಗಳ ಜೊತೆ ಹೊಸ ಯೋಜನೆ ಪಡೆಯುವ ತವಕದಲ್ಲಿ ಇರುವಿರಿ. ನಂಬಿಕೆ ದ್ರೋಹವು ನಿಮಗಾಗಲಿದೆ. ಉತ್ತಮ ಸ್ಥಾನವು ಸಿಗಲಿದೆ. ಇಷ್ಟಪಟ್ಟವರನ್ನು ದೂರ ಮಾಡಿಕೊಳ್ಳುವಿರಿ. ಅನ್ಯರ ವಿಚಾರದಲ್ಲಿ ನಿಮಗೆ ಆಸಕ್ತಿ ಕಡಿಮೆ ಆಗುವುದು. ನಿಮ್ಮ ಸ್ವಭಾವದಿಂದ ದಾಂಪತ್ಯದಲ್ಲಿ ಕೆಲವು ಮಾತುಗಳನ್ನು ಕೇಳಬಹುದು. ಅನಗತ್ಯ ವಿಚಾರವನ್ನು ಪ್ರಸ್ತಾಪಿಸಿ ವಿವಾದ ಮಾಡುವಿರಿ. ನಿಮ್ಮ ವಿರುದ್ಧ ದೂರುಗಳು ಸಲ್ಲಿಕೆಯಾಗಬಹುದು. ನಿಮ್ಮ ಆದಾಯವು ಅಧಿಕವಾಗಿದ್ದು ನಿಮಗೆ ಸಂತೋಷವನ್ನು ಕೊಡುವ ವಿಚಾರವು ಇದಾಗಿದೆ. ನಿರಂತರ ಪ್ರಯತ್ನದ ಫಲವು ಇಂದು ಸಿಗಬಹುದು. ಓದಲು ಸಮಯವನ್ನು ಇಂದು ಹೊಂದಿಕೆಯಾಗದು. ಮನಸ್ಸನ್ನು ಉದ್ವಿಗ್ನ ಮಾಡಿಕೊಳ್ಳದೆ ಶಾಂತತೆಯಿಂದ ನಿರ್ವಹಿಸಿ. ಇಂದು ನಿಮಗೆ ಗೊತ್ತಿಲ್ಲದೇ ದುಷ್ಟರ ಸಹವಾಸ ಸಿಗಬಹುದು.

12 ನವೆಂಬರ್ 2025 ರ ಬುಧವಾರದ ಪಂಚಾಂಗ:

ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಋತು : ಶರದ್, ಚಂದ್ರ ಮಾಸ : ಕಾರ್ತಿಕ, ಸೌರ ಮಾಸ : ತುಲಾ, ಮಹಾನಕ್ಷತ್ರ : ವಿಶಾಖ, ವಾರ : ಬುಧ, ಪಕ್ಷ : ಕೃಷ್ಣ, ತಿಥಿ : ಸಪ್ತಮೀ, ನಿತ್ಯನಕ್ಷತ್ರ : ಆಶ್ಲೇಷಾ, ಯೋಗ : ಶುಭ, ಕರಣ : ತೈತಿಲ, ೦೫ ಸೂರ್ಯೋದಯ ೧ – ೦೬ ಸೂರ್ಯೋದಯ pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 12:04 – 13:30, ಗುಳಿಕ ಕಾಲ 10:37 – 12:04, ಯಮಗಂಡ ಕಾಲ 07:45 – 09:11

-ಲೋಹಿತ ಹೆಬ್ಬಾರ್ – 8762924271 (What’s app ಮಾತ್ರ)

ರಂದು ಪ್ರಕಟಿಸಲಾಗಿದೆ – 12:25 am, ಬುಧವಾರ, 12 ನವೆಂಬರ್ 25



Source link

Leave a Reply

Your email address will not be published. Required fields are marked *