ಧರ್ಮೇಂದ್ರ-ಹೇಮಾ ಮಾಲಿನಿ ಲವ್​ಸ್ಟೋರಿಗೆ ಜಿತೇಂದ್ರ ವಿಲನ್ ಆದಾಗ

ಧರ್ಮೇಂದ್ರ-ಹೇಮಾ ಮಾಲಿನಿ ಲವ್​ಸ್ಟೋರಿಗೆ ಜಿತೇಂದ್ರ ವಿಲನ್ ಆದಾಗ


ಧರ್ಮೇಂದ್ರ ಅವರು ಅನಾರೋಗ್ಯಕ್ಕೆ ಒಳಗಾಗಿದ್ದರು. ಈಗ ಅವರು ಚೇತರಿಸಿಕೊಂಡಿದ್ದಾರೆ, ಮನೆಗೆ ಹೋಗಿದ್ದಾರೆ ಎಂದು ಹೇಳಿದರು. ಈ ವಿಷಯ ಅವರ ಅಭಿಮಾನಿಗಳಿಗೆ ಖುಷಿ ನೀಡಿದೆ. ಈ ಸಂದರ್ಭದಲ್ಲಿ ಅವರ ವೈಯಕ್ತಿಕ ಜೀವನದ ಬಗ್ಗೆ ನೋಡಿ. ಧರ್ಮೇಂದ್ರ ಅವರ ಎರಡನೇ ಪತ್ನಿ ಹೇಮಾ ಮಾಲಿನಿ. ಇವರದ್ದು ಪ್ರೇಮ ವಿವಾಹ. ಅಸಲಿಗೆ ಹೇಮಾ ಹಾಗೂ ಜೀತೇಂದ್ರ ಇಬ್ಬರೂ ವಿವಾಹ ಆಗಬೇಕಿತ್ತು. ಆದರೆ, ಹೇಮಾ ಅವರು ಧರ್ಮೇಂದ್ರ ಜೊತೆ ಪ್ರೀತಿಯಲ್ಲಿ ಬಿದ್ದರು. ಅವರನ್ನೇ ವರಿಸಿದರು. ಇವರ ಲವ್ ಸ್ಟೋರಿ ಗಮನ ಸೆಳೆಯೋ ರೀತಿಯಲ್ಲಿ ಇದೆ.

ಹೇಮಾ ಹಾಗೂ ಧರ್ಮೇಂದ್ರ ಪ್ರೀತಿಯಲ್ಲಿರೋ ಸುದ್ದಿ ಸಾಕಷ್ಟು ಚರ್ಚೆಯಾಗುತ್ತಿದೆ. ಆದರೆ, ಹೇಮಾ ಪಾಲಕರಾದ ಜಯ ಚಕ್ರವರ್ತಿ ಹಾಗೂ ರಾಮಾಜುನಂ ಚಕ್ರವರ್ತಿ ಅವರು ಇದನ್ನು ವಿರೋಧಿಸಿದ್ದರು. ಏಕೆಂದರೆ ಧರ್ಮೇಂದ್ರ ಅವರಿಗೆ ಆಗಲೇ ಒಂದು ಮದುವೆ ಆಗುತ್ತಿದೆ. ಈ ಕಾರಣದಿಂದ ಈ ಮದುವೆ ಬೇಡ ಎಂಬುದು ಹೇಮಾ ಪಾಲಕರ ಆಸೆ.

ಹೇಮಾ ಭವಿಷ್ಯದ ಬಗ್ಗೆ ಜಯಾ ಅವರು ಚಿಂತೆಗೆ ಒಳಗಾಗಿದ್ದರು. 1974ರಲ್ಲಿ ಹೇಮಾ ಮಾಲಿನಿ ಕುಟುಂಬದವರು ಜಿತೇಂದ್ರ ಅವರನ್ನು ಭೇಟಿ ಮಾಡಲು ಒತ್ತಾಯಿಸಿದರು. ಆದರೆ, ಜಿತೇಂದ್ರ ಅವರಿಗೆ ಮದುವೆ ಆಗುವ ಯೋಚನೆ ಇರಲಿಲ್ಲ. ಇದನ್ನು ಕುಟುಂಬದ ಬಳಿ ಜಿತೇಂದ್ರ ಹೇಳಿದರೂ ಯಾರೂ ಇದನ್ನು ಕೇಳಲೇ ಇಲ್ಲ.

ಇದನ್ನೂ ಓದಿ: ನಟ ಧರ್ಮೇಂದ್ರ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ ಮಗ ಸನ್ನಿ ಡಿಯೋಲ್

ಮದುವೆ ಮಾತುಕತೆಗೆ ಹೇಮಾ ಕುಟುಂಬ ಚೆನ್ನೈಗೆ ತೆರಳಿತ್ತು. ಸುದ್ದಿ ಸಾರ್ವಜನಿಕವಾಗಿ ಲೀಕ್ ಆಯಿತು. ಮದುವೆ ವಿಚಾರ ತಿಳಿದು ಧರ್ಮೇಂದ್ರ ಕೂಡ ತೆರಳಿದರು. ಹೇಮಾ ತಂದೆ ಅವರು ಧರ್ಮೇಂದ್ರ ಬಳಿ ಮಾತನಾಡಿದ್ದರು. ‘ನನ್ನ ಮಗಳನ್ನು ಯಾಕೆ ಬಿಡಬಾರದು? ನೀವು ವಿವಾಹಿತ ವ್ಯಕ್ತಿ; ನಿಮಗೆ ಮದುವೆಯಾಗಲು ಸಾಧ್ಯವಿಲ್ಲ’ ಎಂದಿದ್ದರು. ಆದರೆ, ಧರ್ಮೇಂದ್ರ ಒಪ್ಪಲಿಲ್ಲ. ಆ ಬಳಿಕ ಜಿತೇಂದ್ರ ಕುಮಾರ್ ಕುಟುಂಬ ಅಲ್ಲಿಂದ ಹೊರಟಿತು. ಅಂದು ಇವರ ಮದುವೆ ನಡೆಯಲಿಲ್ಲ. ಇವರು 1980ರಂದು ಮದುವೆ ಆದರು. 45 ವರ್ಷಗಳ ಕಾಲ ಇವರು ಹಾಯಾಗಿ ಸಂಸಾರ. ಈಗ ಧರ್ಮೇಂದ್ರ ಅವರು ಚೇತರಿಸಿಕೊಳ್ಳುತ್ತಿರುವುದು ಖುಷಿಯ ವಿಚಾರ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಮಾಡಿ.



Source link

Leave a Reply

Your email address will not be published. Required fields are marked *