ಸರಿಯಾಗಿ 10 ವರ್ಷಗಳ ಹಿಂದೆ ತೆರೆಗೆ ಬಂದು ಸೂಪರ್ ಹಿಟ್ ಆಗಿದ್ದ ಸಿನಿಮಾ ಎಂದರೆ ಅದು ‘ತಿಥಿ’. 2015ರಲ್ಲಿ ತೆರೆಗೆ ಬಂದ ಈ ಚಿತ್ರ ಮೆಚ್ಚುಗೆ ಪಡೆಯಿತು. ಹಲವು ಪ್ರಶಸ್ತಿಗಳನ್ನು ಕೂಡ ಬಾಚಿಕೊಂಡಿತು. ಈ ಸಿನಿಮಾದಲ್ಲಿ ಗಡ್ಡಪ್ಪ ಹೆಸರಿನ ಪಾತ್ರ ಮಾಡಿದ್ದ ಚನ್ನೇಗೌಡ ಅವರು ನಿಧನರಾದರು. ಅವರಿಗೆ 89 ವರ್ಷ ವಯಸ್ಸಾಗಿತ್ತು. ‘ತಿಥಿ’ ಸಿನಿಮಾದಲ್ಲಿ ಅವರು ಮಾಡಿದ್ದ ಪಾತ್ರ ಸಾಕಷ್ಟು ಗಮನ ಸೆಳೆದಿತ್ತು.
ಗಡ್ಡಪ್ಪ ಅವರು ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು. ಇಂದು (ನವೆಂಬರ್ 12) ಚಿಕಿತ್ಸೆ ಫಲಿಸದೆ ಇಹಲೋಕದ ಪ್ರಯಾಣ ಮುಗಿಸಿದ್ದಾರೆ. ಗಡ್ಡಪ್ಪ ಅವರು ಮಂಡ್ಯ ತಾಲೂಕಿನ ನೊದೆ ಕೊಪ್ಪಲು ಗ್ರಾಮದವರು. ಬೆಂಗಳೂರು-ಮೈಸೂರು ರಸ್ತೆಯಿಂದ ಪಾಂಡವಪುರಕ್ಕೆ ಹೋಗುವ ರಸ್ತೆಯಲ್ಲಿ ಇದು ಸಿಗುತ್ತದೆ. ಅವರು ‘ತಿಥಿ’ ಸಿನಿಮಾದಲ್ಲಿ ಗಡ್ಡಪ್ಪ ಹೆಸರಿನ ಪಾತ್ರ ಮಾಡಿ ಫೇಮಸ್ ಆದರು. ಎಲ್ಲರೂ ಅವರನ್ನು ಗಡ್ಡಪ್ಪ ಎಂದೆಂದೂ ಗುರುತಿಸುತ್ತಾರೆ.
ಗಡ್ಡಪ್ಪ ಅವರಿಗೆ ಕೆಲವು ವರ್ಷಗಳ ಹಿಂದೆ ಪಾರ್ಶ್ವ ವಾಯು. ಇದರಿಂದ ಚೇತರಿಸಿಕೊಳ್ಳಲು ಅವರಿಗೆ ಸಾಧ್ಯವಾಗಿಲ್ಲ. ಚಿಕಿತ್ಸೆಗೂ ಅವರ ಬಳಿ ಹಣವಿಲ್ಲ. ಇದಲ್ಲದೆ ನಟನಿಗೆ ಹೃದಯ ಕಾಯಿಲೆ, ಕೆಮ್ಮು ಮತ್ತು ಉಬ್ಬಸ, ಶ್ರವಣದೋಷ ಮತ್ತು ಇತರ ವಯಸ್ಸಿಗೆ ಸಂಬಂಧಿಸಿದ ಸಮಸ್ಯೆಗಳು ಇದ್ದವು.
ಇದನ್ನೂ ಓದಿ: ಬಾಲಿವುಡ್‌ಗೆ ಮತ್ತೊಂದು ಶಾಕ್; ಕುಸಿದುಬಿದ್ದು ಆಸ್ಪತ್ರೆಗೆ ಸೇರಿದ ನಟ ಗೋವಿಂದ
‘ಗಡ್ಡಪ್ಪ’ ಪಾತ್ರವನ್ನು ನೋಡಿ ಅನೇಕರು ಮೂಕವಿಸ್ಮಿತರಾದರು. ಅವರು ತಮ್ಮ ಸಹಜ ನಟನ ಕೌಶಲ್ಯದಿಂದ ಜನಪ್ರಿಯರಾದರು. ಆ ಬಳಿಕ ಹಲವು ಸಿನಿಮಾಗಳಲ್ಲಿ ಚನ್ನೇಗೌಡ ಅವರು ನಟಿಸಿದ್ದರು. ಅವರು ಅನೇಕ ಸಿನಿಮಾಗಳಲ್ಲಿ ನಟಿಸಿದರೂ ಆರ್ಥಿಜವಾಗಿ ಸೃಧರಾಗಲು ಸಾಧ್ಯವಾಗಲೇ ಇಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.