Headlines

ದೆಹಲಿ ಬ್ಲಾಸ್ಟ್​ನಲ್ಲಿ ರಾಜಕಾರಣದ ವಾಸನೆ ಬರ್ತಿದೆ: ಶಾಸಕ ಚನ್ನಬಸಪ್ಪ

ದೆಹಲಿ ಬ್ಲಾಸ್ಟ್​ನಲ್ಲಿ ರಾಜಕಾರಣದ ವಾಸನೆ ಬರ್ತಿದೆ: ಶಾಸಕ ಚನ್ನಬಸಪ್ಪ


ಬೆಂಗಳೂರು, ನವೆಂಬರ್ 12: ದೆಹಲಿಯಲ್ಲಿ ನಡೆದ ಸ್ಫೋಟ ಘಟನೆಗೆ ಪ್ರತಿಕ್ರಿಯೆ ನೀಡಿರುವ ಶಾಸಕ ಚನ್ನಬಸಪ್ಪ ಈ ಘಟನೆಯಲ್ಲಿ ರಾಜಕೀಯ ವಾಸನೆ ಬರುತ್ತಿದೆ ಎಂದು ಹೇಳಿಕೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮಗಳಿಗೆ ಕಾಂಗ್ರೇಸ್ಸಿರುವ ಅವರು, ಭಯೋತ್ಪಾದಕ ಕೃತ್ಯ ನಡೆದಾಗಲೆಲ್ಲಾ ಪಕ್ಷವು “ಸಾಫ್ಟ್ ಕಾರ್ನರ್” ಅನ್ನು ತೋರಿಸುತ್ತದೆ. ಭಯೋತ್ಪಾದನೆ ಬೆಳವಣಿಗೆಗೆ ಕಾಂಗ್ರೆಸ್‌ನ ಮಾನಸಿಕತೆ ದೊಡ್ಡ ಶಕ್ತಿ ನೀಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಘಟನೆಯನ್ನು ಚುನಾವಣೆಗೆ ಲಿಂಕ್ ಮಾಡಿ ಮಾತನಾಡಿರುವುದು ಅಕ್ಷಮ್ಯವಾಗಿದೆ. ಭಯೋತ್ಪಾದಕರಿಗೆ ಶಕ್ತಿ ನೀಡುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ಎನ್‌ಐಎ ತಂಡವು ಆರೋಪಿಗಳನ್ನು ಬಂಧಿಸಿರುವುದು ಕೇಂದ್ರ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ತಾಕತ್ತು. ಕಾಂಗ್ರೆಸ್ ತನ್ನ ನೀತಿಗಳನ್ನು ಬದಲಾಯಿಸಿಕೊಳ್ಳದಿದ್ದರೆ ಅವನತಿ ಖಚಿತ ಎಂದು ಕಿಡಿಕಾರಿದ್ದಾರೆ.

ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *