ಬೆಂಗಳೂರು, ನವೆಂಬರ್ 12: ಹಗಲು-ರಾತ್ರಿ ಎನ್ನದೆ ಸಂಚಾರಿ ಪೊಲೀಸ್ ಕರ್ತವ್ಯ ನಿರ್ವಹಿಸುತ್ತಾರೆ. ಉರಿ ಬಿಸಿಲು, ವಾಹನಗಳ ಹೊಗೆ ಮಧ್ಯೆ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡುತ್ತಾರೆ. ಗಂಟೆಗಟ್ಟಲೆ ನಿಂತುಕೊಂಡು ಕೆಲಸ ಮಾಡುವ ಅವರ ಕಷ್ಟ ಅವರಿಗೆ ಮಾತ್ರ ಗೊತ್ತು. ಹೀಗಾಗಿ ಜನಸಾಮಾನ್ಯರಿಗೂ ಸಂಚಾರಿ ಪೊಲೀಸರ ಕಷ್ಟವೇನು ಎಂದು ತಿಳಿಸುವ ಬೆಂಗಳೂರು ಸಂಚಾರಿ ನೂತನ ಉಪಕ್ರಮಕ್ಕೆ ಕೈಹಾಕಿದ್ದಾರೆ. 18 ವರ್ಷ ಮೇಲ್ಪಟ್ಟವರಿಗೆ ಬೇಕಾದರೂ ‘ಒಂದು ದಿನ’ದ ಮಟ್ಟಿಗೆ ಸಂಚಾರಿ ಪೊಲೀಸರಿಗೆ ಕರ್ತವ್ಯ ನಿರ್ವಹಿಸುವ ಅವಕಾಶವಿದೆ. ಇದಕ್ಕೆ ಹೇಗೆ ನೋಂದಾಯಿಸಿಕೊಳ್ಳಬೇಕು ಎಂಬ ಮಾಹಿತಿ ಇಲ್ಲಿದೆ ವಿಡಿಯೋ ನೋಡಿ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.