AI Content Regulations: ಎಐ ಸೃಷ್ಟಿತ ಕಂಟೆಂಟ್; ಸೋಷಿಯಲ್ ಮೀಡಿಯಾಗಳಿಗೆ ಜವಾಬ್ದಾರಿ; ಬರಲಿದೆ ಹೊಸ ಕಾನೂನು

AI Content Regulations: ಎಐ ಸೃಷ್ಟಿತ ಕಂಟೆಂಟ್; ಸೋಷಿಯಲ್ ಮೀಡಿಯಾಗಳಿಗೆ ಜವಾಬ್ದಾರಿ; ಬರಲಿದೆ ಹೊಸ ಕಾನೂನು


ಜನವರಿ, ನವೆಂಬರ್ 12: ದೀಪ್‌ಫೇಕ್ ವಿಡಿಯೋಗಳು (ಡೀಪ್‌ಫೇಕ್ ವಿಡಿಯೋಗಳು) ಹಾವಳಿ ವಿಪರೀತವಾಗಿ ಹೆಚ್ಚುತ್ತಿದೆ. ಸೆಲಬ್ರಿಟಿಗಳ ಧ್ವನಿಯನ್ನೋ, ದೃಶ್ಯವನ್ನೋ ನಕಲು ಮಾಡಿ, ತಿರುಚಿ ತೋರಿಸಿ ವಂಚಿಸುತ್ತಿರುವ ಪ್ರಕರಣಗಳು ಬಹಳಷ್ಟಿವೆ. ರಶ್ಮಿಕಾ ಮಂದಣ್ಣರ ಬಾತ್‌ರೂಮ್ ವಿಡಿಯೋ, ನರೇಂದ್ರ ಮೋದಿ ಅವರ ಭಾಷಣದ ತುಣುಕು ಹೀಗೆ ನಿತ್ಯವೂ ಹಲವಾರು ಡೀಪ್‌ಫೇಕ್ ವಿಡಿಯೋಗಳು ಈ ಮೂಲಕ ಜನರೇಟ್ ಆಗಿ ಸೋಷಿಯಲ್ ಮೀಡಿಯಾದಲ್ಲಿ ಹರಡುತ್ತಿವೆ. ನಿರ್ಮಲಾ ಸೀತಾರಾಮನ್ ಅವರ ದೀಪ್‌ಫೇಕ್ ವಿಡಿಯೋದ ಮೆಸೇಜ್ ನೋಡಿ ಬೆಂಗಳೂರಿನ ಮಹಿಳೆಯೊಬ್ಬರು 43 ಲಕ್ಷ ರೂ ಕಳೆದುಕೊಂಡ ಘಟನೆ ಕಳೆದ ವಾರ ಬೆಳಕಿಗೆ ಬಂದಿದೆ. ಇಂತಹ ಹಾವಳಿ ತಡೆಯ ಸರ್ಕಾರ ಕಾಯ್ದೆ ರೂಪಿಸುತ್ತಿದೆ.

ಸೋಷಿಯಲ್ ಮೀಡಿಯಾದಲ್ಲಿ ಎಐ ಸೃಷ್ಟಿಯ ಕಾಂಟೆಂಟ್‌ಗಳಿಗೆ ನಿರ್ಬಂಧಗಳನ್ನು ಹಾಕುವ ಕರಡು ನಿಯಮಗಳು ಸರ್ಕಾರ ರೂಪಿಸಿದೆ. 2021ರ ನೀತಿ ತಂತ್ರಜ್ಞಾನ ಮಧ್ಯಂತರ ಮಾರ್ಗಸೂಚಿ ಮತ್ತು ಡಿಜಿಟಲ್ ಮೀಡಿಯಾ ಸಂಹಿತೆ ನಿಯಮಗಳಿಗೆ ತಿದ್ದುಪಡಿ ತರುವ ಮೂಲಕ ಈ ಕರಡು ನಿಯಮಗಳ ಸಲಹೆ, ಟೀಕೆ, ಟಿಪ್ಪಣಿಗಳ ಬಗ್ಗೆ ಸರ್ಕಾರಕ್ಕೆ ಆಹ್ವಾನಿಸಲಾಗಿದೆ.

ಇದನ್ನೂ ಓದಿ: ನಿರ್ಮಲಾ ಸೀತಾರಾಮನ್ ಸಹಿ ನಕಲು ಮಾಡಿ ಮಹಿಳೆಯೊಬ್ಬಳಿಂದ ಕೋಟಿ ರೂ ವಸೂಲಿ ಮಾಡಿದ ದುಷ್ಕರ್ಮಿಗಳು

ಎಐ ಸೃಷ್ಟಿತ ಕಾಂಟೆಂಟ್ ಕುರಿತ ಸರ್ಕಾರದ ಕರಡು ನಿಯಮಗಳು ಏನಿವೆ?

ಯೂಟ್ಯೂಬ್, ಇನ್‌ಸ್ಟಾಗ್ರಾಮ್, ಫೇಸ್‌ಬುಕ್ ಇತ್ಯಾದಿ ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳು ತಮ್ಮಲ್ಲಿ ಕಾಂಟೆಂಟ್ ಅಪ್‌ಲೋಡ್ ಮಾಡಲು ಜನರಿಂದ ಡಿಕ್ಲರೇಶನ್ ಪಡೆಯಬೇಕು. ಅಂದರೆ, ಈ ಕಾಂಟೆಂಟ್ ಕೃತಕವಾಗಿ ಸೃಷ್ಟಿಸಲಾಗಿರುವುದು ಅಲ್ಲವಾ ಎಂದು ಬಳಕೆದಾರರಿಂದಲೇ ದೃಢೀಕರಣ ಪಡೆಯಬೇಕು ಡ್ರಾಫ್ಟ್ನ ಒಂದು ನಿಯಮ.

ಐ ಸೃಷ್ಟಿಯ ಕಾಂಟೆಂಟ್ ಇದ್ದರೆ ಅದು ನೋಡುಗರಿಗೆ ಸ್ಪಷ್ಟವಾಗಿ ಗೋಚರಿಸುವಂತೆ ಲೇಬಲ್ ಮಾಡಿರಬೇಕು, ವಾಟರ್‌ಮಾರ್ಕ್‌ಗಳನ್ನು ಹಾಕಬೇಕು. ದೃಶ್ಯ ಕಾಂಟೆಂಟ್ ಆಗಿದ್ದರೆ ಪರದೆಯ ಶೇ. 10ರಷ್ಟು ಜಾಗದಲ್ಲಿ ಆ ಲೇಬಲ್ ಕಾಣುವಂತಿರಬೇಕು. ಆಡಿಯೋ ಕಂಟೆಂಟ್ ಆಗಿದ್ದರೆ ಒಟ್ಟೂ ಅವಧಿಯ ಮೊದಲ ಶೇ. 10ರಷ್ಟು ಅವಧಿಯಲ್ಲಿ ಈ ಲೇಬಲ್ ಪ್ರದರ್ಶಿತವಾಗಬೇಕು ಎಂದು ಈ ಕರಡು ನಿಯಮಗಳು ಹೇಳುತ್ತವೆ.

ಇದನ್ನೂ ಓದಿ: ಟ್ರೈನ್‌ನಲ್ಲಿ ಮಕ್ಕಳ ಟಿಕೆಟ್; ವಿನಾಯಿತಿ, ವಯಸ್ಸು, ಸೀಟು, ನಿರ್ಬಂಧ ಇತ್ಯಾದಿ ವಿವರ

ಈ ಕರಡು ನಿಯಮಗಳು ಜಾರಿಗೆ ಬಂದಲ್ಲಿ, ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಆಗುವ ಪ್ರತಿ ಐ ಸೃಷ್ಟಿತ ಚಿತ್ರ ಮತ್ತು ವಿಡಿಯೋಗಳಲ್ಲಿ, ಅದು ಎಐ ಜನರ ಕಂಟೆಂಟ್ ಎಂಬ ವಿಚಾರವನ್ನು ನೋಡುಗರಿಗೆ ಸ್ಪಷ್ಟವಾಗಿ ತಿಳಿಯುವ ರೀತಿಯಲ್ಲಿ ಲೇಬಲ್ ಮಾಡಿಲ್ಲ. ಇದರಿಂದ ಜನರು ಮೋಸವಾಗುವುದು ತಪ್ಪುತ್ತದೆ.

ಅದಕ್ಕೆ, ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಿಗೆ ಹೆಚ್ಚಿನ ಜವಾಬ್ದಾರಿಯನ್ನು ಕೊಡಲಾಗುತ್ತಿದೆ. ಜನರು ಐ ಸೃಷ್ಟಿತ ಕಂಟೆಂಟ್ ಮುಚ್ಚಿಟ್ಟು, ಅದನ್ನು ಅಪ್ಲೋಡ್ ಮಾಡಬಹುದು. ಈ ಪ್ಲಾಟ್‌ಫಾರ್ಮ್‌ಗಳು ತಮ್ಮಲ್ಲಿರುವ ತಂತ್ರಜ್ಞಾನವನ್ನು ಬಳಸಿ, ಅಪ್‌ಲೋಡ್ ಆಗುವ ಕಾಂಟೆಂಟ್ ಐ ಜನರೇಟ್ ಆಗಿರುವಂತಹವುಗಳನ್ನು ಹಚ್ಚುವ ಕೆಲಸ ಮಾಡಬೇಕು ಎಂದು ಕರಡು ನಿಯಮದಲ್ಲಿ ತಿಳಿಸಲಾಗಿದೆ.

ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *