ಮನುಷ್ಯರೇ (ಮಾನವ) ಇರಲಿ ಪ್ರಾಣಿಗಳೇ ಇರಲಿ, ಎಲ್ಲಾ ಜೀವಿಗಳಿಗೂ ಸ್ವತಂತ್ರವಾಗಿ ಬದುಕುವ ಹಕ್ಕಿದೆ. ಆದರೆ ತಿಳುವಳಿಕೆಯಿರುವ ಮನುಷ್ಯನೇ ತನ್ನ ಸ್ವಾರ್ಥಕ್ಕಾಗಿ ಬಿದ್ದಂತೆ ಹಾರಾಡುವ ಪಕ್ಷಿಗಳನ್ನು (ಪಕ್ಷಿಗಳನ್ನು) ಬಂಧಿಸಿ ತನ್ನ ಸಂತೋಷವನ್ನು ಕಾಣುತ್ತಾನೆ. ಇದಕ್ಕೆ ತದ್ವಿರುದ್ಧ ಎನ್ನುವಂತಿದೆ ಈ ದೃಶ್ಯ. ಪಂಜರದಲ್ಲಿದ್ದ ಪಕ್ಷಿಗಳನ್ನು ಮಾರಾಟ ಮಾಡುತ್ತಿರುವ ವ್ಯಕ್ತಿಯನ್ನು ಕಂಡ ಯುವಕನು ದುಡ್ಡು ಕೊಟ್ಟು ಖರೀದಿಸಿದ್ದಾನೆ. ಆ ಬಳಿಕ ಮುಗಿದಂತೆ ಹಾರಲು ಬಿಟ್ಟಿದ್ದಾನೆ. ಈ ಹೃದಯ ಸ್ಪರ್ಶಿ ವಿಡಿಯೋ ಸದ್ಯ ವೈರಲ್ ಆಗಿದೆ.
ಪಂಜರದಲ್ಲಿದ್ದ ಪಕ್ಷಿಗಳನ್ನು ಕಂಡು ಈ ವ್ಯಕ್ತಿ ಮಾಡಿದ್ದೇನು ನೋಡಿ
ಮಂಜುನಾಥ್ ಲೋಕಾಪುರ್ (ಮಂಜುನಾಥ ಲೋಕಾಪುರ) ಹೆಸರಿನ ಖಾತೆಯಲ್ಲಿ ಹಂಚಿಕೊಂಡ ವಿಡಿಯೋದಲ್ಲಿ ಒಬ್ಬ ವ್ಯಕ್ತಿ ಬಸ್ ಸ್ಟ್ಯಾಂಡ್ ಪಕ್ಕದಲ್ಲಿ ಕುಳಿತು ತನ್ನ ಹೊಟ್ಟೆ ತುಂಬಿಸಿಕೊಳ್ಳಲು ಪಂಜರದಲ್ಲಿದ್ದ ಪಕ್ಷಿಗಳನ್ನು ಮಾರಾಟ ಮಾಡುವುದನ್ನು ನೋಡಬಹುದು. ಇದೇ ಮಾರ್ಗವಾಗಿ ನಡೆದುಹೋಗುತ್ತಿದ್ದ ಯುವಕನು ಇದನ್ನು ಗಮನಿಸಿದ್ದಾನೆ. ಹಿಂದೆ ಮುಂದೆ ನೋಡದೆ ಒಂದು ಪಂಜರದಲ್ಲಿದ್ದ ಎಲ್ಲಾ ಹಕ್ಕಿಗಳನ್ನು ಖರೀದಿಸಿದೆ, ಎಲ್ಲಾ ಪಕ್ಷಿಗಳನ್ನು ಮುಗಿಲೆತ್ತರಕ್ಕೆ ಹಾರಲು ಬಿಟ್ಟಿದ್ದಾನೆ. ಪಕ್ಷಿಗಳನ್ನು ಬಂಧನಮುಕ್ತಗೊಳಿಸಿದ ಸಂತೋಷವು ಆತನ ಮುಖದಲ್ಲಿ ಎದ್ದು ಕಾಣುತ್ತಿದೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ
ಇದನ್ನೂ ಓದಿ: ಸೂರಿಲ್ಲದ ತಾಯಿ ಮಗುವಿಗೆ ಕೈಲಾದ ಸಹಾಯ ಮಾಡಿದ ಯುವಕ
ಈ ವಿಡಿಯೋ ಮೂರುವರೆ ಲಕ್ಷಕ್ಕೂ ಅಧಿಕ ವೀಕ್ಷಣೆಗಳು ಇವೆ. ಒಬ್ಬ ಬಳಕೆದಾರ ದಯವಿಟ್ಟು ಈ ತರಹ ಪಕ್ಷಿಗಳನ್ನು ಯಾರು ಬಂಧಿಸಬೇಡಿ. ಏಕೆಂದರೆ ಮನುಷ್ಯರೇ ಒಂದು ಜಾಗದಲ್ಲಿ ಗಂಟೆ ಹೊತ್ತು ಕೂರೋಕೆ ಆಗಲ್ಲ. ಇತರರು, ಲವ್ ಬರ್ಡ್ಸ್ ಗಳು ಹೊರಗೆ ಬದುಕೊಲ್ಲ. ಒಂದು ವೇಳೆ ಪಾರಿವಾಳ ಪಂಜರದಲ್ಲಿದ್ದರೆ ಅದನ್ನು ಬಿಡಿಸಿ ಎಂದು ಸಲಹೆ ನೀಡಿದರು. ಮತ್ತೊಬ್ಬ ಬಳಕೆದಾರ ಈ ಪಕ್ಷಿಗಳಿಗೆ ಸ್ವತಂತ್ರವಾಗಿ ಬದುಕುವ ಕಲೆ ಗೊತ್ತಿಲ್ಲ. ಪಾಪ ಆ ಪಕ್ಷಿಗಳನ್ನು ಕೆಲವೇ ಗಂಟೆಗಳಲ್ಲಿ ಕಾಗೆ ಅಥವಾ ಹದ್ದು ಹಿಡಿದು ಸಾಯಿಸಿ ತಿಂದು ಬಿಡುತ್ತೆ ಎಂದು ಹೇಳಿದರು.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ