Headlines

ಪಿಎಂ ಕಿಸಾನ್: ಈ ಬಾರಿ ಕೆಲ ರೈತರಿಗೆ 2,000 ಬದಲು 4,000 ರೂ ಸಿಗುತ್ತಾ? ಇಲ್ಲಿದೆ ಕಾರಣ

ಪಿಎಂ ಕಿಸಾನ್: ಈ ಬಾರಿ ಕೆಲ ರೈತರಿಗೆ 2,000 ಬದಲು 4,000 ರೂ ಸಿಗುತ್ತಾ? ಇಲ್ಲಿದೆ ಕಾರಣ


ಜನವರಿ, ನವೆಂಬರ್ 12: ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ (PM Kisan Yojana) ಸುಮಾರು 10 ಕೋಟಿ ರೈತರು (ರೈತರು) 21ನೇ ಕಂತಿನ ಹಣಕ್ಕಾಗಿ ಕಾಯುತ್ತಿದ್ದಾರೆ. ಫೆಬ್ರುವರಿಯಲ್ಲಿ 19ನೇ ಕಂತು ಬಿಡುಗಡೆಯಾಗಿದೆ. 20ನೇ ಕಂತು ವಿಳಂಬಗೊಂಡು ಆಗಸ್ಟ್ ತಿಂಗಳಲ್ಲಿ ಬಿಡುಗಡೆ ಆಯಿತು. 21ನೇ ಕಂತು ಅಕ್ಟೋಬರ್ ಕೊನೆಯ ವಾರ ಅಥವಾ ನವೆಂಬರ್ ಮೊದಲ ವಾರದಲ್ಲಿ ಬಿಡುಗಡೆ ಆಗುವ ನಿರೀಕ್ಷೆ ಇತ್ತು. ಆದರೆ, ಇನ್ನೂ ಆಗಿಲ್ಲ. ಕೆವೈಸಿ ದಾಖಲೆಗಳನ್ನು ಸರ್ಕಾರ ಪರಿಶೀಲಿಸಲು ಈ ವಿಳಂಬವಾಗಬಹುದು.

ಪಿಎಂ ಕಿಸಾನ್ ಸ್ಕೀಮ್ನ ಮಾರ್ಗಸೂಚಿಯಲ್ಲಿ ನೀಡಲಾಗಿಲ್ಲ ನಿಯಮಾವಳಿಗಳನ್ನು ಉಲ್ಲಂಘಿಸಿ ನೊಂದಾಯ ಸೌಲಭ್ಯವನ್ನು ಪಡೆದುಕೊಳ್ಳುತ್ತಿರುವ ರೈತರನ್ನು ಗುರುತಿಸಲಾಗಿದೆ. ಈ ಅನರ್ಹ ಪ್ರತಿನಿಧಿಗಳ ಹೆಸರನ್ನು ಪಟ್ಟಿಯಿಂದ ತೆಗೆದುಹಾಕುವ ಕೆಲಸ ನಡೆಯುತ್ತಿದೆ. ಈ ರೀತಿ ಅನರ್ಹರಿದ್ದು ಹಣ ಪಡೆಯುತ್ತಿರುವ ರೈತರ ಸಂಖ್ಯೆ ಹಲವು ಲಕ್ಷಗಳಿವೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಏಳು ಕೋಟಿಗೂ ಅಧಿಕ ರೈತರಿಗೆ ಕಿಸಾನ್ ಪೆಹಚಾನ್ ಪತ್ರ; ಏನಿದರ ವಿಶೇಷತೆ?

ಈ ಬಾರಿ ಕೆಲ ರೈತರಿಗೆ 2,000 ರೂ ಬದಲಿಗೆ 4,000 ರೂ ಪೇಮೆಂಟ್

ಕಳೆದ ಬಾರಿ ಕೆವೈಸಿ ಸಮಸ್ಯೆಗಳಿಂದ ಕೆಲ ಅರ್ಹ ರೈತರಿಗೆ 20ನೇ ಕಂತಿನ ಹಣ ಬಂದಿರಲಿಲ್ಲ. ಕೆವೈಸಿ ದಾಖಲೆಗಳನ್ನು ಭೌತಿಕವಾಗಿ ಪರಿಶೀಲಿಸುವ ಕೆಲಸ ಮಾಡಲಾಗುತ್ತಿದೆ. ಅಂದರೆ, ತಮ್ಮ ನಾಡಕಚೇರಿಗೆ ಮುಖತಃ ಭೇಟಿ ನೀಡಿ ಕೆವೈಸಿ ದಾಖಲೆಗಳನ್ನು ಕೊಡಲಾಯಿತು. ಈ ದಾಖಲೆಗಳು ಸರಿಯಾಗಿದ್ದರೆ, ಅಂಥ ರೈತರಿಗೆ ಕಳೆದ ಬಾರಿ ತಪ್ಪಿ ಹೋಗಿದ್ದ ಕಣ್ಣಿನ ಹಣ ಸೇರಿ ಎರಡು ಕಂತುಗಳ ಹಣವು ಈ ಬಾರಿ ಸಿಕ್ಕಲಿದೆ. ಅಂದರೆ, 4,000 ರೂ ಹಣವು ಈ ರೈತರ ಖಾತೆಗೆ ಕ್ರೆಡಿಟ್ ಆಗಬಹುದು.

ಹೊಸದಾಗಿ ಜಮೀನು ಮಾಲಕತ್ವ ಪಡೆದವರಿಗೆ ಸಿಗಲ್ಲ ಕಿಸಾನ್ ಹಣ

ಕೃಷಿ ಜಮೀನು ಮಾಲಕತ್ವ ಹೊಂದಿದ ರೈತರು ಪಿಎಂ ಕಿಸಾನ್ ಯೋಜನೆಗೆ ಅರ್ಹರಾಗಿರುತ್ತಾರೆ. ಆದರೆ ಕೆಲವು ನಿರ್ಬಂಧಗಳಿವೆ. 2019ರ ಫೆಬ್ರುವರಿ 1ಕ್ಕಿಂತ ಮುಂಚೆ ಜಮೀನು ಮಾಲಕತ್ವ ಹೊಂದಿದ್ದವರು ಮಾತ್ರ ಯೋಜನೆಗೆ ಅರ್ಹರಾಗಿರುತ್ತಾರೆ. ಆ ನಂತರ ಮಾಲಕತ್ವ ಪಡೆದವರಿಗೆ ಸಿಕ್ಕೋದಿಲ್ಲ.

ಇದನ್ನೂ ಓದಿ: ಪಿಎಂ ಕಿಸಾನ್ 21ನೇ ಕಂತಿನ ಹಣ ಯಾಕೆ ವಿಳಂಬವಾಗುತ್ತಿದೆ ಗೊತ್ತಾ? ಇಲ್ಲಿದೆ ಕಾರಣ

ಅಪ್ಪನಿಂದ ಮಗನಿಗೆ ಜಮೀನು ವರ್ಗಾವಣೆ ಆಗಿದ್ದು, ಅಪ್ಪ ಜೀವಂತ ಆಗ ಮಗನಿಗೆ ಹಣ ಸಿಗಲ್ಲ. ಅಪ್ಪ ನಿಧನರಾದ ಬಳಿಕ ಜಮೀನು ಮಗನಿಗೆ ವರ್ಗಾವಣೆ ಆಗಿದ್ದಕ್ಕೆ ಮಾತ್ರ ಅರ್ಹರಾಗುತ್ತಾರೆ.

ಹಾಗೆಯೇ, ಸರ್ಕಾರಿ ನೌಕರರು, ವೈದ್ಯರು, ವಕೀಲರು ಮುಂತಾದ ವೃತ್ತಿಪರರು, ಶಾಸಕರು ಸಂಸದರು ಮೊದಲಾದ ಜನಪ್ರತಿನಿಧಿಗಳು ಕೃಷಿ ಜಮೀನು ಹೊಂದಿದ್ದರೂ ಪಿಎಂ ಕಿಸಾನ್ ಯೋಜನೆಗೆ ಅನರ್ಹರಾಗಿರುತ್ತಾರೆ. ಆದಾಯ ತೆರಿಗೆ ಪಾವತಿಸುವವರೂ ಕೂಡ ಅರ್ಹರಿಲ್ಲ. ಇಂಥವರನ್ನು ಗುರುತಿಸಿ ಅವರನ್ನು ಪಟ್ಟಿಯಿಂದ ತೆಗೆದುಹಾಕುವ ಕೆಲಸ ಮಾಡಲಾಗುತ್ತಿದೆ.

ಪಿಎಂ ಕಿಸಾನ್ ಯೋಜನೆ ಬಗ್ಗೆ ಹೆಚ್ಚಿನ ಮಾಹಿತಿಗೆ ಈ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ, ಅದರ ವಿಳಾಸ ಇಲ್ಲಿದೆ: pmkisan.gov.in/

ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *