Headlines

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ನವೆಂಬರ್ 13ರ ಭವಿಷ್ಯ

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ನವೆಂಬರ್ 13ರ ಭವಿಷ್ಯ


ಜನ್ಮಸಂಖ್ಯೆ 1 (ಯಾವುದೇ ತಿಂಗಳ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1):

ನಿಮ್ಮ ಒಬ್ಬರಿಂದ ಏನಾದೀತು ಎಂದುಕೊಂಡು ಇಷ್ಟು ಸಮಯ ಸುಮ್ಮನಿದ್ದು, ಸಹಿಸಿಕೊಂಡು ಬಂದಂತಹ ಕೆಲವು ವಿಷಯಗಳ ಬಗ್ಗೆ ಸಂಬಂಧಪಟ್ಟ ವ್ಯಕ್ತಿಗಳು ಅಥವಾ ಅಧಿಕಾರ ಸ್ಥಾನದಲ್ಲಿ ಇರುವವರಿಗೆ ದೂರು ನೀಡುವ ಬಗ್ಗೆ ತೀರ್ಮಾನ ಮಾಡುತ್ತೀರಿ. ಕೈ ಅಳತೆಯಲ್ಲಿ ಇರುವಂತಹ ಬಜೆಟ್ ನೀವು ಕೈಗೊಂಡ ಕಾರ್ಯಗಳ ಬಗ್ಗೆ ಉದ್ಯೋಗ ಸ್ಥಳದಲ್ಲಿ ಮೆಚ್ಚುಗೆ ಹಾಗೂ ಪ್ರೋತ್ಸಾಹ ದೊರೆಯಲಿದೆ. ಲೇಖಕರು, ಪುಸ್ತಕ ಮುದ್ರಕರು, ಸ್ಟೇಷನರಿ ಮಳಿಗೆಗಳನ್ನು ನಡೆಸುತ್ತಾ ಇರುವವರಿಗೆ ಆದಾಯದಲ್ಲಿ ಏರಿಕೆ ಕಾಣುವಂಥ ಯೋಗವಿದೆ, ದೊಡ್ಡ ಮಟ್ಟದ ಆರ್ಡರ್ ದೊರೆಯುವ ಬಗ್ಗೆ ಸುಳಿವು ದೊರೆಯಲಿದೆ. ಸಣ್ಣ- ಪುಟ್ಟ ಮನಸ್ತಾಪ ಆಗಿ ಮಾತು ಬಿಟ್ಟಿದ್ದವರು ಅಥವಾ ಕೆಲ ಕಾಲದಿಂದ ದೂರ ಇದ್ದಂಥ ಹಳೆ ಗೆಳೆಯ- ಗೆಳತಿಯರ ಜೊತೆಗೆ ಮುಕ್ತ ಮಾತುಕತೆ ಮೂಲಕ ಪರಿಸ್ಥಿತಿ ತಿಳಿಗೊಳಿಸುವ ವೇದಿಕೆ ದೊರೆಯಲಿದೆ.

ಜನ್ಮಸಂಖ್ಯೆ 2 (ಯಾವುದೇ ತಿಂಗಳ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2):

ತಂದೆಯ ಅಥವಾ ಸಮಾನರ ಜೊತೆಗೆ ಕೆಲವು ವಿಚಾರ/ವಿಷಯಗಳಿಗೆ ಅಭಿಪ್ರಾಯ ಭೇದ ಕಾಣಿಸಿಕೊಳ್ಳಲಿದೆ. ನಿಮ್ಮ ಉತ್ಸಾಹ ಎಷ್ಟು ಇರಲಿ, ಕಾರಣಗಳನ್ನು ಸರಿಯಾಗಿ ತಿಳಿಸಿ, ಹೇಳಲು ಪ್ರಯತ್ನಿಸಿ. ಉದ್ಯೋಗ ಸ್ಥಳದಲ್ಲಿ ಬಡ್ತಿಯ ನಿರೀಕ್ಷೆಯಲ್ಲಿ ಇರುವವರಿಗೆ ಅದೇ ಕಾರಣವನ್ನು ಮುಂದಿಟ್ಟುಕೊಂಡು ತುಂಬಾ ಕಠಿಣವಾದ ಮತ್ತು ಸವಾಲು ಎನಿಸುವ ಕೆಲವು ಜವಾಬ್ದಾರಿಯನ್ನು ವಹಿಸುವ ಸಾಧ್ಯತೆಯಿದೆ. ಇದರಿಂದ ಸ್ವಲ್ಪ ಮಟ್ಟಿಗೆ ಹಿನ್ನಡೆ ಸಹ ಆಗಬಹುದು. ದೇಹದ ತೂಕ ನಿರ್ವಹಣೆ ಬಗ್ಗೆ ವೈದ್ಯರು ನೀಡುವ ಸೂಚನೆಗಳನ್ನು ಸರಿಯಾಗಿ ಪಾಲಿಸುವ ಕಡೆಗೆ ಹೆಚ್ಚಿನ ಗಮನವನ್ನು ನೀಡಿ. ಮಾಂಸಾಹಾರ ಸೇವನೆ ಮಾಡುವವರು ಇನ್ನೂ ಹೆಚ್ಚಿನ ಎಚ್ಚರಿಕೆಯನ್ನು ತೆಗೆದುಕೊಳ್ಳಬೇಕು. ಫಿಸಿಯೋ ಥೆರಪಿ ಮಾಡುತ್ತಿದ್ದರು, ಆದರೆ ನಾನಾ ಕಾರಣಗಳಿಗಾಗಿ ಮುಂದುವರಿಸುವುದು ಕಷ್ಟವಾಯಿತು ಎಂದು ಕೈ ಬಿಟ್ಟಿದ್ದಲ್ಲಿ ಫಾಲೋ ಅಪ್ ಕಡೆಗೆ ಗಮನ ನೀಡಿ.

ಜನ್ಮಸಂಖ್ಯೆ 3 (ಯಾವುದೇ ತಿಂಗಳ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3):

ಬ್ಯಾಂಕ್ ಅಥವಾ ಬ್ಯಾಂಕೇತರ ಹಣಕಾಸು ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಾ ಇರುವವರಿಗೆ ಈ ಹಿಂದೆ ನೀವು ತೆಗೆದುಕೊಂಡ ನಿರ್ಧಾರವು ಎಷ್ಟೋ ಸಹಾಯವಾಯಿತು ಎಂದು ತುಂಬ ಸಲ ಅನಿಸುವಂಥ ದಿನ ಇದಾಗಿದೆ. ಪ್ರಭಾವಿ ಯಾರಾದರೂ ನಿಮ್ಮ ಮೇಲೆ ಒತ್ತಡ ತಂದು, ಆಗಲೇಬೇಕು ಎಂದು ಕೆಲಸ ಮಾಡಿಕೊಡುವಂತೆ ಪಟ್ಟು ಹಾಕಿದ ನಂತರ ಉತ್ತರ ನೀಡುವ ಮೂಲಕ ಕೆಲವು ಸಮಸ್ಯೆಗಳನ್ನು ಪ್ರಾರಂಭಿಸುವಿರಿ. ಕೃಷಿ ಜಮೀನಿನಲ್ಲಿ ಹೆಚ್ಚು ಹಣ ಹೂಡಿಕೆ ಮಾಡಿ, ಆದಂಥ ಕೆಲಸಗಳ ಫಲವನ್ನು ಪಡೆದಿರುವುದಕ್ಕೆ ಹೆಮ್ಮೆ ಮೂಡಲಿದೆ. ಅಷ್ಟು ದೊಡ್ಡ ಮೊತ್ತ ಹಾಕಿದ ನಂತರ ರಿಟರ್ನ್ಸ್ ಬರಬಹುದಾ ಎಂಬ ಆತಂಕದ ಬಗ್ಗೆ ನಿಮಗಿದ್ದ ಆತಂಕ. ತರಕಾರಿ ಬೆಳೆಯುವ ರೈತರಿಗೆ ಆದಾಯ ಹೆಚ್ಚಾಗುವಂತೆ ದೊಡ್ಡ ದೊಡ್ಡ ಆರ್ಡರ್ ಹುಡುಕಿಕೊಂಡು ಯೋಗ ಈ ದಿನ ಇದೆ.

ಜನ್ಮಸಂಖ್ಯೆ 4 (ಯಾವುದೇ ತಿಂಗಳ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4):

ನೀವು ಕನಸಿನಲ್ಲಿಯೂ ಅಂದುಕೊಳ್ಳುವ ಕೆಲವು ಅವಕಾಶಗಳು ಹುಡುಕಿಕೊಂಡು ಬರಲಿವೆ. ನಿಮ್ಮಲ್ಲಿ ವಿವಾಹ ವಯಸ್ಕರಿದ್ದು, ಮದುವೆ ಆಗುವ ಇಂಗಿತವನ್ನು ಹೇಳಲು ಪ್ರಸ್ತಾಪಿಸಿದ ವ್ಯಕ್ತಿಯೊಬ್ಬರು ಅದಕ್ಕೆ ಒಪ್ಪಿಗೆ ಸೂಚಿಸುವ ಅವಕಾಶ ಈ ದಿನ. ಮನೆ ನವೀಕರಣ ಮಾಡಿಸಬೇಕು ಎಂದು ಬಹುಕಾಲದಿಂದ ಅಂದುಕೊಳ್ಳುತ್ತಾ ಇರುವವರಿಗೆ ಹಣದ ಹೊಂದಾಣಿಕೆ ಆಗುವ ಸೂಚನೆ ದೊರೆಯಲಿದೆ. ವೈದ್ಯರಿಗೆ ಉತ್ತಮವಾದ ದಿನ ಇದಾಗಲಿದೆ, ಪ್ರಾಯೋಜಕರಿಗಾಗಿ ಹುಡುಕಾಟ ನಡೆಸುತ್ತಾ ಇದ್ದಲ್ಲಿ ಸಿಗುವ ಸಾಧ್ಯತೆಗಳು ಹೆಚ್ಚಿವೆ. ಶಿಕ್ಷಣ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುವವರಿಗೆ ಬಡ್ತಿ, ವೇತನ ಹೆಚ್ಚಾಗುವ ಸಾಧ್ಯತೆಯಿದೆ, ನಿಮ್ಮ ಆದಾಯದ ಮೂಲವನ್ನು ಹೆಚ್ಚಿಸಿಕೊಳ್ಳುವುದಕ್ಕೆ ಪಟ್ಟದ ಪರಿಶ್ರಮ ಫಲ ​​ನೀಡುವುದಕ್ಕೆ ಆರಂಭ ಆಗಲಿದೆ. ಬಟ್ಟೆ- ಬರೆ, ವಾಚ್, ಬ್ರ್ಯಾಂಡೆಡ್ ಪರ್ ಫ್ಯೂಮ್ ಇಂಥವುಗಳ ಖರೀದಿಗೆ ಹೆಚ್ಚಿನ ಖರ್ಚನ್ನು ಈ ದಿನ ಮಾಡುತ್ತೀರಿ.

ಜನ್ಮಸಂಖ್ಯೆ 5 (ಯಾವುದೇ ತಿಂಗಳ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5):

ಸಾಮಾಜಿಕ ಸ್ಥಾನಮಾನದಲ್ಲಿ ಬದಲಾವಣೆ ಆಗುವಂಥ ಅಥವಾ ಮಾಡಿಕೊಳ್ಳಲೇ ಬೇಕು ಅಂತ ನೀವೇ ನಿರ್ಧಾರ ಮಾಡುವ ಸಮಯ ಇದು ಬಲವಾಗಿ ಈ ದಿನ ಅನಿಸಲಿದೆ. ಈ ಕಡೆಗೆ ಕೆಲವು ಪ್ರಯತ್ನಗಳು ಸಹ ಪ್ರಾರಂಭವಾಗುತ್ತವೆ. ನಿಮ್ಮಲ್ಲಿ ಕೆಲವು ಸಾಲ ಮಾಡಿಯಾದರೂ ಮನೆಗೆ ಕೆಲವು ವಸ್ತುಗಳನ್ನು ಖರೀದಿಸುವ ಯೋಗ ಇದೆ. ಕ್ರೆಡಿಟ್ ಕಾರ್ಡ್ ಬಳಸಿಯೋ ಅಥವಾ ಪರ್ಸನಲ್ ಲೋನ್ ತೆಗೆದುಕೊಂಡೋ ಗೃಹಲಂಕಾರಿಕ ವಸ್ತುಗಳನ್ನು ಕೊಳ್ಳುವ ಸಾಧ್ಯತೆಯಿದೆ. ಇನ್ನು ನಿಮ್ಮ ಬಳಿ ಗುಟ್ಟಾಗಿದ್ದ ವಿಷಯ ಸುದ್ದಿ ಹೇಳಿ, ಅವರಿಂದ ನಿಮಗೆ ಕೆಲವು ಸಮಸ್ಯೆ ಎದುರಾಗಬಹುದು. ಕಮಿಷನ್ ಆಧಾರದಲ್ಲಿ ಆದಾಯ ಪಡೆಯುವವರಿಗೆ ತಮ್ಮ ವ್ಯವಹಾರದ ವಿಧಾನ ಬದಲಾಗಬೇಕು ಎಂದೆನಿಸುವುದಕ್ಕೆ ಆರಂಭ ಆಗಲಿದೆ. ಜನಪ್ರಿಯತೆ ಸಿಗುವ ಯೋಗವಿದ್ದು, ಪಠ್ಯೇತರ ಚಟುವಟಿಕೆಗಳಲ್ಲಿ ಉತ್ತಮ ಸಾಧನೆ ಮಾಡುತ್ತೀರಿ.

ಜನ್ಮಸಂಖ್ಯೆ 6 (ಯಾವುದೇ ತಿಂಗಳ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6):

ಕುಟುಂಬ ಸದಸ್ಯರ ಮನೆಯಲ್ಲಿ ನಡೆಯುವ ಸಮಾರಂಭಗಳಿಗೆ ಹಣಕಾಸಿನ ಹೊಂದಾಣಿಕೆ ಮಾಡಲೇ ಬೇಕಾದ ಸನ್ನಿವೇಶ ಸೃಷ್ಟಿ ಆಗಲಿದೆ. ಸಂಘ- ಸಂಸ್ಥೆಗಳ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುತ್ತಾ ಇರುವವರು ಕೊನೆ ಕ್ಷಣದಲ್ಲಿ ಸ್ಪರ್ಧೆಯಿಂದ ಹಿಂದೆ ಸರಿಯುವ ಬಗ್ಗೆ ಗೊಂದಲ ಏರ್ಪಡಬಹುದು. ನಿಮ್ಮೊಂದಿಗೆ ಸುಮಧುರವಾದ ಸಂಬಂಧ ಹೊಂದಿದವರು ತಮ್ಮ ನಿಲವು ಬದಲಿಸಿದ ಬಗ್ಗೆ ಸಿಟ್ಟು, ಆಕ್ರೋಶ ಮೂಡುತ್ತದೆ, ಮಾನಸಿಕವಾಗಿ ಕುಗ್ಗುವಂತೆ ಆಗಲಿದೆ. ಪ್ರೀತಿ- ಪ್ರೇಮದಲ್ಲಿ ಇರುವವರಿಗೆ ಗೆಳೆಯ ಅಥವಾ ಗೆಳತಿಯ ವರ್ತನೆ ಬೇಸರಕ್ಕೆ ಕಾರಣ ಆಗಲಿದೆ. ಬೇಕೆಂತಲೆ ಫೋನ್ ಸ್ವೀಕಾರ ಮಾಡುತ್ತಿಲ್ಲ. ಮೆಸೇಜ್ ಗೆ ರಿಪ್ಲೈ ಮಾಡುತ್ತಿಲ್ಲ ಎಂದೆಲ್ಲ ಅನಿಸುವುದಕ್ಕೆ ಶುರು ಆಗಲಿದೆ. ನಿಮ್ಮಲ್ಲಿ ಈ ದಿನ ಮಾಸ್ಟರ್ ಚೆಕ್ ಅಪ್ ವೈದ್ಯಕೀಯ ಪರೀಕ್ಷೆಗಳನ್ನು ಮಾಡಿಸಿಕೊಳ್ಳಬೇಕು ಎಂದುಕೊಳ್ಳಬೇಕು. ಹಲ್ಲಿನ ನೋವು ಯಾರಿಗೆ ತೀವ್ರವಾಗಿದೆ ಅವರು ವೈದ್ಯರ ಭೇಟಿ ಮಾಡುವ ಯೋಗ ಇದೆ.

ಇದನ್ನೂ ಓದಿ: ಸಂಖ್ಯಾಶಾಸ್ತ್ರದ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ನವೆಂಬರ್ 9 ರಿಂದ 15 ರ ತನಕ ವಾರಭವಿಷ್ಯ

ಜನ್ಮಸಂಖ್ಯೆ 7 (ಯಾವುದೇ ತಿಂಗಳ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7):

ಮಕ್ಕಳ ಶಿಕ್ಷಣ, ನಡವಳಿಕೆ ಹಾಗೂ ಮನೆಯಲ್ಲಿ ಆಗುವಂಥ ಕೆಲವು ಬದಲಾವಣೆಗಳು ಚಿಂತೆಗೆ ಕಾರಣವಾಗುತ್ತವೆ. ನೀವು ಬಹಳ ಇಷ್ಟಪಟ್ಟು ಖರೀದಿಸಿ ತಂದಿದ್ದ ವಸ್ತುವೊಂದು ಕಳೆದು ಹೋಗಿದೆ ಎಂಬ ಅಂಶ ಗಮನಕ್ಕೆ ಬರಲಿದೆ, ಇದರಿಂದ ಬಹಳ ಬೇಸರ ಆಗಲಿದೆ. ಹೂಡಿಕೆಗೆ ಸಂಬಂಧಿಸಿದಂತೆ ನೀವು ಬಹಳ ಗೌರವ ನೀಡುವ ವ್ಯಕ್ತಿಯೊಬ್ಬರು ತಾವಾಗಿಯೇ ಸಲಹೆ ನೀಡಲಿದ್ದಾರೆ, ಅದನ್ನು ಸರಿಯಾಗಿ ಪರಿಗಣಿಸಿ. ಆಸಕ್ತಿ ವಹಿಸಿ, ನೀವು ಮಹತ್ವಾಕಾಂಕ್ಷೆ ಜೊತೆಗೆ ತೊಡಗಿಸಿಕೊಂಡಿರುವ ಪ್ರಾಜೆಕ್ಟ್ ಒಂದರಿಂದ ನಿಮ್ಮನ್ನೇ ಹೊರಗಿಡುವ ಸುಳಿವು ದೊರೆಯಲಿದೆ. ಹೊಟ್ಟೆಗೆ ಸಂಬಂಧಿಸಿದ ಅನಾರೋಗ್ಯ ಸಮಸ್ಯೆ ಆತಂಕಕ್ಕೆ ಕಾರಣವಾಗಬಹುದು. ಆಹಾರ ಪಥ್ಯವನ್ನು ಕಡ್ಡಾಯವಾಗಿ ಪಾಲಿಸಿ. ಕಾರ್ಯಕ್ರಮ- ಸಮಾರಂಭದಲ್ಲಿ ಭಾಗೀ ಆಗುವರಿದ್ದಲ್ಲಿ ಅಲ್ಲಿಯೂ ಆಹಾರ ಸೇವನೆ ವಿಚಾರದಲ್ಲಿ ಯಾವ ಕಾರಣಕ್ಕೂ ರಾಜೀ ಮಾಡಿಕೊಳ್ಳುವುದು ಬೇಡ.

ಜನ್ಮಸಂಖ್ಯೆ 8 (ಯಾವುದೇ ತಿಂಗಳ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8):

ಪ್ರಭಾವಿಗಳ ಸಂಪರ್ಕ ದೊರೆಯಲಿದೆ. ನಿಮ್ಮ ಕೆಲಸ- ಕಾರ್ಯಗಳಿಗೆ ಅನುಕೂಲ ಮಾಡಿಕೊಡುವುದಾಗಿ ಹಾಗೂ ಬೇಕಾದ ಬೆಂಬಲ ಸಹ ನೀಡುವುದಾಗಿ ಭರವಸೆ ನೀಡುವ ಸಾಧ್ಯತೆ ಇದೆ. ಮನೆ ನಿರ್ಮಾಣಕ್ಕಾಗಿ ಆಲೋಚನೆ ಮಾಡುತ್ತಾ ಇರುವವರು ಬ್ಯಾಂಕ್ ಮೂಲಕ ಸಾಲಕ್ಕೆ ಪ್ರಯತ್ನ ಮಾಡುವುದಕ್ಕೆ ಗಟ್ಟಿ ತೀರ್ಮಾನ ಮಾಡಲಿದ್ದೇವೆ. ತಂದೆ-ತಾಯಿ ಬೇಡ ಎಂದ ಮೇಲೂ ಅವರ ಆಯ್ಕೆಗೆ ವಿರುದ್ಧವಾಗಿ ಹೂಡಿಕೆ ಮಾಡುವ ನಿರ್ಧಾರ ಮಾಡಲಿದ್ದೇನೆ. ವ್ಯಾಪಾರ- ವ್ಯವಹಾರ ಮಾಡುತ್ತಾ ಇರುವವರಿಗೆ ಬರಬೇಕಾದ ಹಣ, ಅದರಲ್ಲಿ ಬಹಳ ಸಮಯದಿಂದ ಬಾಕಿ ಉಳಿದಿದೆ ಎಂದಾದಲ್ಲಿ ಹಿಡಿದು, ವಸೂಲಿ ಮಾಡಲಿದ್ದೇನೆ. ಇನ್ನು ನಿಮ್ಮಲ್ಲಿ ಕೆಲವರು ವ್ಯವಹಾರದ ಸಲುವಾಗಿ ಕೆಲವು ಯಂತ್ರೋಪಕರಣ ಖರೀದಿ ಮಾಡುವ ಯೋಗ ಇದೆ. ಇದರಿಂದ ಅನುಕೂಲ ಆಗಲಿದೆ.

ಜನ್ಮಸಂಖ್ಯೆ 9 (ಯಾವುದೇ ತಿಂಗಳ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9):

ನೀವು ಬಯಸಿದ್ದು ಸಿಗಲಿಲ್ಲ, ಪ್ರಯತ್ನ ಕೂಡ ಪಡದೇ ಇದ್ದದ್ದು ದೊರೆಯುವ ಸೂಚನೆ ಇದೆ. ಈಗ ಏನು ಮಾಡಬೇಕು ಎಂಬ ವಿಚಾರವೇ ಆಲೋಚನೆಗೆ ಕಾರಣ ಆಗಲಿದೆ. ಉತ್ಸಾಹದಲ್ಲಿ ನಿತ್ಯದ ಕಾರ್ಯಗಳಲ್ಲಿ ತೊಡಗುವುದು ಸಾಧ್ಯ ಇಲ್ಲದಂತೆ ಆಗಲಿದೆ. ವಿವಾಹ ವಯಸ್ಕರಾಗಿದ್ದರೆ ಮದುವೆಗೆ ಪ್ರಯತ್ನ ಪಡುತ್ತಾ ಇದ್ದಲ್ಲಿ ಸೂಕ್ತ ಸಂಬಂಧ ಹುಡುಕಲು ಬರಲಿದೆ, ಪ್ರಯತ್ನಗಳು ಫಲ ನೀಡುವ ಸಾಧ್ಯತೆ ಹೆಚ್ಚಿದೆ. ಇನ್ನು ಪ್ರೀತಿಯಲ್ಲಿ ಇರುವಂಥವರು ಮನೆಯಲ್ಲಿ ಈ ವಿಚಾರ ಮಾಡುವ ಸಾಧ್ಯತೆಯೂ ಹೆಚ್ಚಿದ್ದು, ಇದಕ್ಕೆ ಒಪ್ಪಿಗೆ ಸಿಗುವ ಅವಕಾಶವಿದೆ. ಆದರೆ ಪಾರದರ್ಶಕವಾಗಿ ನಡೆದುಕೊಳ್ಳಿ. ಅಷ್ಟೇನೂ ಅಪಾಯಕಾರಿ ಅಲ್ಲ ಎಂದು ನೀವೇ ಅಂದುಕೊಂಡು ಸಣ್ಣ- ಪುಟ್ಟ ಸುಳ್ಳುಗಳನ್ನು ಹೇಳಬೇಡಿ. ಮಾಧ್ಯಮಗಳಲ್ಲಿ ಕಾರ್ಯ ನಿರ್ವಹಣೆ ಮಾಡುವವರಿಗೆ ಬಡ್ತಿ ಸಿಗುವ ಅವಕಾಶಗಳು ಇವೆ.

ಲೇಖನ- ಎನ್.ಕೆ.ಸ್ವಾತಿ



Source link

Leave a Reply

Your email address will not be published. Required fields are marked *