ಎಲ್ಲರ ಎದುರೇ ರಶ್ಮಿಕಾ ಮಂದಣ್ಣಗೆ ಮುತ್ತಿಟ್ಟ ವಿಜಯ್ ದೇವರಕೊಂಡ; ವಿಡಿಯೋ ನೋಡಿ

ಎಲ್ಲರ ಎದುರೇ ರಶ್ಮಿಕಾ ಮಂದಣ್ಣಗೆ ಮುತ್ತಿಟ್ಟ ವಿಜಯ್ ದೇವರಕೊಂಡ; ವಿಡಿಯೋ ನೋಡಿ


ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ (ರಶ್ಮಿಕಾ ಮಂದಣ್ಣ) ಅವರು ನಿಶ್ಚಿತಾರ್ಥ ಮಾಡಿಕೊಂಡಿರುವ ಸುದ್ದಿ ಇತ್ತೀಚೆಗೆ ಜೋರಾಗಿದೆ. ಹೋದಲ್ಲೆಲ್ಲ ರಶ್ಮಿಕಾ ಮಂದಣ್ಣ ಅವರಿಗೆ ಈ ಪ್ರಶ್ನೆಗಳು ಎದುರಾಗುತ್ತಾ ಇವೆ. ಆದರೆ, ರಶ್ಮಿಕಾ ಮಂದಣ್ಣ ಮಾತ್ರ ನಾಚುತ್ತಲೇ, ಪರೋಕ್ಷವಾಗಿ ಈ ವಿಚಾರವನ್ನು ಒಪ್ಪಿಕೊಳ್ಳುತ್ತಿದ್ದಾರೆ. ಈಗ ಅವರ ಮಧ್ಯೆ ಅದೇ ಬಾಂಧವ್ಯ ಇದೆ ಎಂದು ತೋರಿಸುವ ವಿಡಿಯೋ ಒಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ವಿಜಯ್ ಅವರು ರಶ್ಮಿಕಾ ಕೈಗೆ ಮುತ್ತು ಕೊಟ್ಟಿದ್ದಾರೆ.

ರಶ್ಮಿಕಾ ಮಂದಣ್ಣ ನಟನೆಯ ‘ದಿ ಗರ್ಲ್ಫ್ರೆಂಡ್’ ಸಿನಿಮಾ ಕಳೆದ ವಾರ ರಿಲೀಸ್ ಆಗಿದೆ. ಈ ಚಿತ್ರಕ್ಕೆ ಪಾಸಿಟಿವ್ ರೆಸ್ಪಾನ್ಸ್ ಸಿಕ್ಕಿದೆ. ಈ ಚಿತ್ರ ತಂಡ ನವೆಂಬರ್ 12 ರಂದು ಹೈದರಾಬಾದ್‌ನಲ್ಲಿ ಸಕ್ಸಸ್ ಮೀಟ್ ಆಯೋಜನೆ ಮಾಡಿತ್ತು. ಇದಕ್ಕೆ ವಿಜಯ್ ದೇವರಕೊಂಡ ಅವರು ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಅವರು ಬರಲು ರಶ್ಮಿಕಾನ ಹುಡುಕಾಡಿದ್ದಾರೆ.

ರಶ್ಮಿಕಾ ಕಾಣದಂತೆ ವಿಜಯ್ ದೇವರಕೊಂಡ ಅವರು ಓಡೋಡಿ ಬಂದರು. ಆ ಬಳಿಕ ರಶ್ಮಿಕಾ ಕೈಗೆ ಮುತ್ತಿಟ್ಟರು. ಇದರಿಂದ ರಶ್ಮಿಕಾ ಕೂಡ ಖುಷಿಪಟ್ಟರು. ಈ ವಿಡಿಯೋ ವೈರಲ್ ಆಗಿದ್ದು, ಅಭಿಮಾನಿಗಳು ಖುಷಿಯಿಂದ ಕಮೆಂಟ್ ಮಾಡುತ್ತಿದ್ದಾರೆ. ಇವರದ್ದು ಬೆಸ್ಟ್ ಜೋಡಿ ಎಂದು ಅನೇಕರು ಕರೆದಿದ್ದಾರೆ.

ಇದನ್ನೂ ಓದಿ: ರಶ್ಮಿಕಾ ಮಂದಣ್ಣ ಚಿತ್ರಕ್ಕೂ ತಟ್ಟಿದ ದೆಹಲಿ ಬಾಂಬ್ ಬ್ಲಾಸ್ ಪ್ರಕರಣದ ಬಿಸಿ

ಸಾಮಾನ್ಯವಾಗಿ ಸೆಲೆಬ್ರಿಟಿಗಳು ಎದುರು-ಬದುರು ಸಿಕ್ಕಾಗ ಪ್ರೀತಿಯಿಂದ ಹಗ್ ಮಾಡಿಕೊಳ್ಳೋದು ಸಾಮಾನ್ಯ. ಯಾರೂ ಮುತ್ತುಕೊಳ್ಳಲು ಹೋಗೋದಿಲ್ಲ. ಈಗ ವಿಜಯ್ ಮತ್ತು ರಶ್ಮಿಕಾ ತಮ್ಮ ಸಂಬಂಧವನ್ನು ಅಧಿಕೃತ ಮಾಡಬೇಕು ಎಂಬ ನಿರ್ಧಾರಕ್ಕೆ ಬಂದಂತೆ ಇದೆ. ಈ ಕಾರಣದಿಂದಲೇ ಅವರು ಓಪನ್ ಆಗಿ ಕಿಸ್ ಮಾಡಿಕೊಳ್ಳುತ್ತಿದ್ದಾರೆ.

ದಿ ಗರ್ಲ್‌ಫ್ರೆಂಡ್ ಸಿನಿಮಾ ಬಗ್ಗೆ

ದಿ ಗರ್ಲ್‌ಫ್ರೆಂಡ್ ಸಿನಿಮಾ ಯಾವುದೇ ಸ್ಟಾರ್‌ಗಳು ಇಲ್ಲದೆ ಸಿದ್ಧವಾದ ಸಿನಿಮಾ ರಶ್ಮಿಕಾ ಜೊತೆ ಕನ್ನಡದ ದೀಕ್ಷಿತ್ ಶೆಟ್ಟಿ ಅವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರ ಸುಮಾರು 10 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ಚಿತ್ರ ದಿನ ಕಳೆದಂತೆ ಒಳ್ಳೆಯ ಗಳಿಕೆ ಮಾಡುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.





Source link

Leave a Reply

Your email address will not be published. Required fields are marked *