Headlines

ಯಾದಗಿರಿ: ದಾರಿಯಲ್ಲಿ ಸಿಕ್ಕ 1.45 ಲಕ್ಷ ರೂ. ರೈತನಿಗೆ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಪೊಲೀಸ್

ಯಾದಗಿರಿ: ದಾರಿಯಲ್ಲಿ ಸಿಕ್ಕ 1.45 ಲಕ್ಷ ರೂ. ರೈತನಿಗೆ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಪೊಲೀಸ್


ಯಾದಗಿರಿ, ನವೆಂಬರ್ 13: ದಾರಿಯಲ್ಲಿ ಸಿಕ್ಕ ಹಣವನ್ನು ಮರಳಿಸಿ ಪೊಲೀಸ್ ಕಾನ್ಸ್ ಟೇಬಲ್ ಪ್ರಾಮಾಣಿಕತೆ ಮೆರೆದ ಪ್ರಸಂಗ ಯಾದಗಿರಿ ಜಿಲ್ಲೆಯ ಸುರಪುರ ಪೊಲೀಸ್ ಠಾಣಾ ಸಂಭವಿಸಿದೆ. ಹತ್ತಿ ಬೆಳೆ ಮಾರಿ ಮನೆಗೆ ಹೋಗುವಾಗ ರೈತ ಗೌಡಪ್ಪ ಪಾಟೀಲ್ ರಸ್ತೆಯಲ್ಲಿ 1 ಲಕ್ಷದ 47 ಸಾವಿರ ರೂ. ಹಣವನ್ನು ಕಳೆದುಕೊಂಡಿದ್ದರು. ಅದೇ ದಾರಿಯಲ್ಲಿ ಆಗಮಿಸಿದ ಸುರಪುರ ಪೊಲೀಸ್ ಠಾಣೆಯ ಕಾನ್ಸಟೇಬಲ್ ದಯಾನಂದ ಜಮಾದರ್ ಅವರಿಗೆ ಆ ಹಣ ಸಿಕ್ಕಿದ್ದು, ಠಾಣೆ ಪಿಐ ಉಮೇಶ್ ನಾಯಕ ರೈತ ಗೌಡಪ್ಪಗೆ ಹಣ ವಾಪಸ್ ನೀಡಿದ್ದಾರೆ. ಸುರಪುರ ಪೋಲೀಸರ ಕಾರ್ಯಕ್ಕೆ ರೈತ ಗೌಡಪ್ಪ ಮತ್ತು ಗ್ರಾಮಸ್ಥರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *