ಬಿಗ್ ಬಾಸ್ (ಬಿಗ್ ಬಾಸ್) ಮನೆಯಲ್ಲಿ ಬಾಗಿಲು ತೆರೆದಾಗ ಅದನ್ನು ಸ್ವೀಕರಿಸಬೇಕು. ಅದನ್ನು ಮುಚ್ಚಿಬಿಟ್ಟರೆ ಅದರಷ್ಟು ಮೂರ್ಖತನ ಮತ್ತೊಂದು ಇರೋದಿಲ್ಲ. ಈಗ ರಾಶಿಕಾ ಶೆಟ್ಟಿ ಅವರು ತಮ್ಮ ದಡ್ಡತನದಿಂದ ದೊಡ್ಡ ಅವಕಾಶವನ್ನು ಕಳೆದುಕೊಂಡಿದ್ದಾರೆ. ಈ ಬಗ್ಗೆ ಬಿಗ್ ಬಾಸ್ ಕೂಡ ಅಸಮಾಧಾನ ಹೊರಹಾಕಿದ್ದಾರೆ. ಅಷ್ಟಕ್ಕೂ ಅಲ್ಲಿ ನಡೆದಿದ್ದು ಏನು? ಆ ಬಗ್ಗೆ ಇಲ್ಲಿದೆ ವಿವರ.
ರಾಶಿಕಾ ಶೆಟ್ಟಿ ಅವರು ಈ ವಾರ ಆಡಿದರು. ಅವರ ತಂಡ ಗೆದ್ದಿತು. ಈ ವೇಳೆ ಅವರು ತಾವು ನಾಮನಿರ್ದೇಶನದಿಂದ ಬಚಾವ್ ಮಾಡಿಕೊಳ್ಳುವ ಪ್ರಯತ್ನದಲ್ಲಿದ್ದಾರೆ. ಆದರೆ, ಇದಕ್ಕೆ ರಕ್ಷಿತಾ ಶೆಟ್ಟಿ ಅವಕಾಶ ಕೊಡಲಿಲ್ಲ. ಅವರು ಹಠ ಬಿದ್ದು, ಸುಧಿಯನ್ನು ಸೇವ್ ಮಾಡಬೇಕು ಎಂದರು. ಅವಕಾಶ ಹಾಳಾಗಬಾರದು ಎಂಬ ಕಾರಣಕ್ಕೆ ಎಲ್ಲರೂ ಒಪ್ಪುತ್ತಾರೆ.
ಆ ಬಳಿಕ ಮತ್ತೊಂದು ಟಾಸ್ಕ್ ಗೆದ್ದಾಗ ರಾಶಿಕಾ ಅವರನ್ನು ನಾಮನಿರ್ದೇಶನದಿಂದ ಬಚಾವ್ ಮಾಡಬೇಕು ಎಂದು ಎಲ್ಲರೂ ನಿರ್ಧಾರಕ್ಕೆ ಬಂದರು. ಈ ರೀತಿ ಸೇವ್ ಮಾಡಿದಾಗ ಎದುರಾಳಿ ತಂಡದಿಂದ ಒಬ್ಬರನ್ನು ನಾಮಿನೇಟ್ ಮಾಡಬೇಕಿತ್ತು. ಮುಂದೆ ಬರುವ ಆಟದ ದೃಷ್ಟಿಯಿಂದ ಅಭಿಯನ್ನು ನಾಮಿನೇಟ್ ಮಾಡಬೇಕು ಎಂಬುದು ತಂಡದ ನಿರ್ಧಾರ. ಆದರೆ, ಇದಕ್ಕೆ ರಾಶಿಕಾ ಒಪ್ಪಿಗೆ ಸೂಚಿಸಲೇ ಇಲ್ಲ.
ಇನ್ನೂ ಯಾರಾದರೂ ದಡ್ಡರು ಇದ್ದಾರೆಯೇ #BBK12 ಗಿಂತ #ರಾಶಿಕಾಶೆಟ್ಟಿ? ಆಯ್ಕೆಯಾಗದಿದ್ದಕ್ಕಾಗಿ ಅಳುತ್ತಾಳೆ, ಧ್ವಜಧಾರಿ ಎಂದು ಸಾಬೀತುಪಡಿಸಲು ತ್ಯಜಿಸಿದರು, ತಂಡವು ಅವಳನ್ನು ಗೆಲ್ಲುತ್ತದೆ. ತಂಡದ ಸದಸ್ಯರು ಅವಳಿಗೆ ಮತ ಹಾಕುತ್ತಾರೆ. ಮುಂದಿನ ನಡೆ: ಮೂರ್ಖ. ಎಲಿಮ್ ಇದ್ದರೆ, ಅವಳು ಯಾರನ್ನಾದರೂ ದೂಷಿಸುತ್ತಾಳೆ ಎಂದು ನನಗೆ ಅನುಮಾನವಿದೆ. ಡಂಬೋಮೀಟರ್ನಲ್ಲಿ 10/10. ದಯವಿಟ್ಟು ಕೆಳಗಿನ ಪೋಸ್ಟ್ ಅನ್ನು ಅಳಿಸಿ pls🤦 https://t.co/zYFZZVXBps
— ಪ್ರಸಾದ್ (@Prasad_C_) ನವೆಂಬರ್ 13, 2025
ಇಡೀ ಸೀಸನ್ಗೆ ರಾಶಿಕಾ – ನಾನಾ ಯಾರು ಸೇವ್ ಮಾಡ್ಲಾ, ಯಾಕೆ ಬಿಗ್ ಬಾಸ್ ಯಾವಾಗ್ಲೂ ನಂಗೆ ಆಗುತ್ತೆ. ಒಂದು ಅಂತಿಮ ದಿನ ಇಡೀ ತಂಡ ಒಪ್ಪಿಕೊಂಡಾಗ, ಅವಳು ತನ್ನ ಅವಕಾಶವನ್ನು ಹಾಳುಮಾಡಿದಳು. ರಕ್ಷಿತಾ ಅವಳನ್ನು ಕುಶಲತೆಯಿಂದ ನಿರ್ವಹಿಸಿದ ರೀತಿ ನಿಜವಾಗಿಯೂ ಅದ್ಭುತವಾಗಿದೆ#ರಾಶಿಕಾಶೆಟ್ಟಿ #ಗಿಲ್ಲಿ #BBK12
— ಭಾರತೀಯ (@desikannadiga1) ನವೆಂಬರ್ 12, 2025
ರಾಶಿಕಾ ಕೋಪವನ್ನು ಹತೋಟಿಯಲ್ಲಿಟ್ಟುಕೊಳ್ಳಬೇಕು, ಅವಳು ಇಂದು ಉಳಿಸಬಹುದಿತ್ತು, b/w ಅಭಿ ಮತ್ತು ಸ್ಪಂದನಾ ಆಯ್ಕೆಯಾಗಿದ್ದರೆ ಅವಳಿಗೆ ಏನು ವ್ಯತ್ಯಾಸವಾಗುತ್ತದೆ, ಇದು ನಿಜವಾಗಿಯೂ ಮೂಕ ನಾಟಕ#ರಾಶಿಕಾಶೆಟ್ಟಿ#BBKSeason12 #bbk12
— ಭಾರತೀಯ (@desikannadiga1) ನವೆಂಬರ್ 12, 2025
ರಾಶಿಕಾ ಥಿಯರಿಯೇ ಬೇರೆ ಇತ್ತು. ಸ್ಪಂದನಾ ನಾಮಿನೇಟ್ ಆಗಬೇಕು ಎಂದು ಅವರು ಹಠ ಹಿಡಿದರು. ಅವರನ್ನು ನಾಮಿನೇಟ್ ಮಾಡಿ ತಂಡಕ್ಕೆ ಸೇರಿಸಿದರೆ ಟೀಂ ಬಲ ಕಡಿಮೆ ಆಗುತ್ತದೆ ಎಂಬುದು ಎಲ್ಲರ ಅಭಿಪ್ರಾಯ. ಆದರೆ, ರಾಶಿಕಾ ಮಾತ್ರ ಹಠ ಬಿಡಲೇ ಇಲ್ಲ. ಕೊನೆಗೆ ಒಮ್ಮತದ ನಿರ್ಧಾರಕ್ಕೆ ಬರಲಾಗದೆ ಸಿಕ್ಕ ದೊಡ್ಡ ಅವಕಾಶವನ್ನು ಕೈಚೆಲ್ಲಿದರು.
ಇದನ್ನೂ ಓದಿ: ಗಿಲ್ಲಿ ಕೈಗೊಂಬೆಯಾದ್ರಾ ರಕ್ಷಿತಾ ಶೆಟ್ಟಿ? ವೀಕೆಂಡ್ನಲ್ಲಿ ಸುದೀಪ್ ಕ್ಲಾಸ್ ಫಿಕ್ಸ್?
ಈ ಬಗ್ಗೆ ಬಿಗ್ ಬಾಸ್ ಅನೌನ್ಸ್ ಬೇಸರ ಹೊರಹಾಕಿದರು. ‘ನೀವೆಷ್ಟು ದೊಡ್ಡ ಅವಕಾಶ ಕಳೆದುಕೊಂಡಿದ್ದೇನೆ ಎಂಬ ಪರಿಜ್ಞಾನ ನಿಮಗೆ ಇಲ್ಲ’ ಎಂದು ಬಿಗ್ ಬಾಸ್ ಹೇಳಿದರು. ಇಷ್ಟು ದಿನ ‘ನಾನು ಸೇವ್ ಆಗೋದಿಲ್ಲ, ನನಗೆ ಯಾಕೆ ಹೀಗಾಗುತ್ತದೆ’ ಎನ್ನುತ್ತಿದ್ದ ರಾಶಿಕಾ ಅವರು ಇಂದು ಈ ಮತ್ತು ದೊಡ್ಡತನದ ಕಾರಣಕ್ಕೆ ಸಿಕ್ಕ ದೊಡ್ಡ ಅವಕಾಶ ಕೈಚೆಲ್ಲಿದಂತೆ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.