ಬೆಂಗಳೂರು, ನವೆಂಬರ್ 13: ರಾಜ್ಯದಲ್ಲಿ ಬೀದಿ ನಾಯಿಗಳ ಹಾವಳಿ ಜೊತೆಗೆ ಹಾವುಗಳ ಕಾಟವೂ ಹೆಚ್ಚಿದೆ. ಅತಿಯಾಗಿ ನಡೆಯುತ್ತಿರುವ ಕಾಂಕ್ರಿಟೀಕರಣದ ಪ್ರಭಾವದಿಂದಾಗಿ ಹಾವುಗಳು ಜನವಸತಿ ಪ್ರದೇಶಗಳಿಗೆ ನುಗ್ಗುತ್ತಿವೆ, ಅವುಗಳ ಕಡಿತ ಪ್ರಮಾಣವೂ ಗಣನೀಯವಾಗಿ ಹೆಚ್ಚಾಗಿರುತ್ತದೆ. ಕೇವಲ 10 ತಿಂಗಳ ಅವಧಿಯಲ್ಲಿ 18 ಸಾವಿರಕ್ಕೂ ಹೆಚ್ಚು ಹಾವು ಕಡಿತ ಪ್ರಕರಣಗಳು ರಾಜ್ಯದಲ್ಲಿ ವರದಿಯಾಗಿದ್ದು, ಒಟ್ಟು 125 ಜನ ಈವರೆಗೆ ಪ್ರಾಣ ಕಳೆದುಕೊಂಡಿದ್ದಾರೆ. ಕಳೆದ ಒಂದು ವಾರದ ಅವಧಿಯಲ್ಲೇ 512 ಹಾವು ಕಡಿತ ಪ್ರಕರಣಗಳು ಇದ್ದಿದ್ದು, ಆ ಮೂವರು ಅಸುನೀಗಿದ್ದಾರೆ.
ಹಾವು ಕಡಿತ ಪ್ರಕರಣಗಳ ಸಂಖ್ಯೆ ಏರಿಕೆ
ವರ್ಷ ಪ್ರಕರಣಗಳ ಸಂಖ್ಯೆ ಸಾವು
2021 950 0
2022 3439 17
2023 6596 19
2024 13,235 95
2025 18,246 125 (ಜನವರಿಯಿಂದ-ನವೆಂಬರ್ 2ರ ವರೆಗೆ)
ಇದನ್ನೂ ಓದಿ: ನಾಗುಲ ಚೌತಿಯಂದು ಹುತ್ತದಿಂದ ಹೊರಬಂದು ಭಕ್ತರು ಇಟ್ಟ ಹಾಲು ಕುಡಿದ ಹಾವು!
ಹಾವು ಕಡಿತ ಪ್ರಕರಣಗಳ ಪಟ್ಟಿ ಈ ಸಕಲದಲ್ಲಿ ಚಿಕಿತ್ಸೆ ಮತ್ತು ಔಷಧ ಸಿಗದೆ, ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ಹೀಗಾಗಿ ರಾಜ್ಯದ ಎಲ್ಲ ತಾಲೂಕುಗಳು ಹಾಗೂ ಜಿಲ್ಲಾ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಅಗತ್ಯವಿರುವ ಆರೋಗ್ಯ ದಾಸ್ತಾನು ಇಟ್ಟುಕೊಳ್ಳುವಂತೆ ಇಲಾಖೆ ಸೂಚಿಸಿದೆ. ಆಸ್ಪತ್ರೆಗಳಲ್ಲಿ ಬೇಡಿಕೆ ಇರುವಷ್ಟು ಆಯಂಟಿ ಸ್ನೇಕ್ ವೀನೋಮ್ ಸ್ಟಾಕ್ ಇರಿಸುವಂತೆ ತಿಳಿಸಲಾಗಿದೆ, ಯಾವುದೇ ತರನಾದ ಹಾವು ಕಡಿದರೂ ನಿರ್ಲಕ್ಷ್ಯ ವಹಿಸದಂತೆ ಸಾರ್ವಜನಿಕರಿಗೆ ಸೂಚಿಸಲಾಗಿದೆ. ಹೀಗಿದ್ದರೂ ಜನ ನಿರ್ಲಕ್ಷ್ಯ ತೋರುತ್ತಿದ್ದಾರೆ, ತುರ್ತು ಚಿಕಿತ್ಸೆ ಪಡೆಯುತ್ತಿಲ್ಲ. ಬದಲಾಗಿ ನಾಟಿ ಆಸ್ಪತ್ರೆಗಳ ಮೊರೆ ಹೋಗಿ ಅಂತಿಮ ಹಂತದಲ್ಲಿ ಬರುತ್ತಿದೆ. ಹೀಗಾಗಿಯೇ ಹಾವು ಕಡಿತದಿಂದ ಮೃತರ ಸಂಖ್ಯೆಯು ಸಂಖ್ಯೆಯಾಗಿದೆ.
ಹಾವುಗಳ ಬಗ್ಗೆ ಇರಲಿ ಎಚ್ಚರಿಕೆ
ಇದು ಹಾವುಗಳ ಮಿಲನದ ಕಾಲವಾಗಿದ್ದು, ಹೀಗಾಗಿಯೇ ಅವು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಹಾವುಗಳು ಕಂಡಾಗ ಅವುಗಳಿಗೆ ತೊಂದರೆ ಕೊಡುವುದು ಅಥವಾ ಅವನನ್ನು ಹಿಡಿಯಲು ಪ್ರಯತ್ನ ಮಾಡಬೇಡಿ. ಅವು ಕಡಿದಾಗ ಅಂಗಾಂಗಗಳ ಮೇಲೆ ಪರಿಣಾಮ ಬೀರಲಿರುವ ಕಾರಣ ತುರ್ತಾಗಿ ಚಿಕಿತ್ಸೆ ಪಡೆಯಿರಿ ಎಂದು ಉರಗ ಸಂರಕ್ಷಕ ಪ್ರಸನ್ನ ಕುಮಾರ್ ಸಲಹೆ ನೀಡಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ರಂದು ಪ್ರಕಟಿಸಲಾಗಿದೆ – 11:20 am, ಗುರುವಾರ, 13 ನವೆಂಬರ್ 25