‘ಅವರನ್ನು ಚಾನೆಲ್ ಅವರೇ ಉಳಿಸ್ತಾರೆ’; ಬಿಗ್ ಬಾಸ್​ನಲ್ಲಿ ವಿವಾದದ ಕಿಡಿ ಹೊತ್ತಿಸಿದ ಜಾನ್ವಿ

‘ಅವರನ್ನು ಚಾನೆಲ್ ಅವರೇ ಉಳಿಸ್ತಾರೆ’; ಬಿಗ್ ಬಾಸ್​ನಲ್ಲಿ ವಿವಾದದ ಕಿಡಿ ಹೊತ್ತಿಸಿದ ಜಾನ್ವಿ


ಬಿಗ್ ಬಾಸ್ (ಬಿಗ್ ಬಾಸ್) ಸಂಪೂರ್ಣವಾಗಿ ನಡೆಯೋದು ಜನರ ಮತದಾನದ ಆಧಾರದ ಮೇಲೆ. ಯಾರು ಉಳಿಯಬೇಕು, ಯಾರು ಇರಬಾರದು ಎಂದು ಜನರೇ ನಿರ್ಧರಿಸುತ್ತಾರೆ. ಆದರೆ, ಕೆಲವು ಸ್ಪರ್ಧಿಗಳು ಈ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದು ಇದೆ. ಜಾನ್ವಿ ಅವರೇ ಈ ಬಗ್ಗೆ ಮಾತನಾಡಿದ್ದು ಚರ್ಚೆಗೆ ಕಾರಣ. ಜಾನ್ವಿ ಕೂಡ ಕಲರ್ಸ್ ಅಲ್ಲಿ ಶೋ ಮಾಡಿದ್ದಾರೆ. ಅವರು ಈ ರೀತಿ ಆರೋಪ ಮಾಡಿದ್ದು ಎಷ್ಟು ಸರಿ ಎಂಬ ಪ್ರಶ್ನೆ ಮೂಡಿದೆ.

ಜಾನ್ವಿ, ಸೂರಜ್ ಹಾಗೂ ರಾಶಿಕಾ ಒಟ್ಟಿಗೆ ನಿಂತು ಮಾತನಾಡುತ್ತಿದ್ದರು. ಈ ವೇಳೆ ಜಾನ್ವಿ ಈ ವಾದ ಮುಂದೆ ಇಟ್ಟರು. ರಾಶಿಕಾ ಮತ್ತು ಸೂರಜ್ ಮಧ್ಯೆ ಒಳ್ಳೆಯ ಬಾಂಧವ್ಯ ಇದೆ. ಈ ಚಾನೆಲ್ ಅವರು ಇವರನ್ನು ಕಳುಹಿಸಿಕೊಡಲ್ಲ ಎಂಬ ನಂಬಿಕೆಯಲ್ಲಿ ಜಾನ್ವಿ ಇದ್ದಂತೆ. ಇದಕ್ಕೆ ಸೂರಜ್ ಉತ್ತರಿಸಿದ್ದಾರೆ.

‘ರಾಶಿ ಹಾಗೂ ರಾಜ್ ಮಧ್ಯೆ ಒಂದು ಲವ್ ಟ್ರ್ಯಾಕ್ ನಡೆಯುತ್ತಿದೆ. ಈ ಚಾನೆಲ್ ಅವರು ಉಳಿಸುತ್ತಾರೆ ಎಂದು ನೀವು ಹೇಳ್ತಾ ಇದೀರಾ. ಇದು ತಪ್ಪು. ನಮ್ಮ ಮಧ್ಯೆ ಲವ್ ಇಲ್ಲ. ಚಾನೆಲ್ ಆಯಂಗಲ್ ನಿಂದ ನೀವು ಮಾತನಾಡುತ್ತಿರುವುದು ಕೂಡ ತಪ್ಪೇ. ವೀಕೆಂಡ್‌ನಲ್ಲಿ ಈ ವಿಚಾರ ಬಂದ್ರೆ ಸಮಸ್ಯೆ ಆಗುತ್ತೆ. ನಿಮ್ಮ ಹಳ್ಳ ನೀವೇ ತೊಡಿಕೊಳ್ಳಬೇಡಿ’ ಎಂದು ಸೂರಜ್ ಅವರು ಜಾನ್ವಿಗೆ ಕಿವಿಮಾತು ಹೇಳಿದರು.

ಇದನ್ನೂ ಓದಿ: ದಡ್ಡತನದಿಂದ ಅಪರೂಪದ ಅವಕಾಶ ಕಳೆದುಕೊಂಡ ರಾಶಿಕಾ ಶೆಟ್ಟಿ

ಸ್ಪಂದನಾ ಸೇವ್ ಆಗುತ್ತಿರುವ ಬಗ್ಗೆ ಜಾನ್ವಿಗೆ ಬೇಸರವಿದೆ. ಈ ಬಗ್ಗೆಯೂ ಅವರ ಬಗ್ಗೆ. ‘ಸ್ಪಂದನಾ ಯಾಕೆ ಸೇವ್ ಆಗುತ್ತಿದ್ದಾರೆ? ಅದು ನನ್ನ ಪ್ರಶ್ನೆ. ಅವರನ್ನು ಎತ್ತುತ್ತಿದ್ದಾರೆ ಎಂದು ನನಗೆ ಅನಿಸುತ್ತಿದೆ. ಫ್ಯಾನ್ ಫಾಲೋಯಿಂಗ್ ಕೂಡ ಮುಖ್ಯವಾಗುತ್ತದೆ’ ಎಂದು ಜಾನ್ವಿ ಅವರು ಹೇಳಿದರು. ಈ ಮೊದಲು ಆರ್ಯವರ್ಧನ್ ಗುರೂಜಿ ಅವರು ಇದೇ ರೀತಿಯ ಆರೋಪ ಮಾಡಿದರು. ಸುದೀಪ್ ಸಿಟ್ಟಾಗಿ ಕ್ಲಾಸ್ ತೆಗೆದುಕೊಂಡಿದ್ದರು. ಈ ವಾರವೂ ಜಾನ್ವಿಗೆ ಇದೇ ರೀತಿಯ ಪಾಠ ಇರುತ್ತದೆ ಎಂಬ ಪ್ರಶ್ನೆ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

ರಂದು ಪ್ರಕಟಿಸಲಾಗಿದೆ – 11:41 am, ಗುರು, 13 ನವೆಂಬರ್ 25



Source link

Leave a Reply

Your email address will not be published. Required fields are marked *