ದರ್ಶನ್​ ಸಿನಿಮಾದಲ್ಲಿ ಕೆಟ್ಟದ್ದಾಗಿ ನೋಡಿದ್ರು, ಬಟ್ಟೆ ಹಾಕಲೂ ಬಿಡಲಿಲ್ಲ: ಆ ದಿನಗಳ ನೆನೆದ Bigg Boss ಡಾಗ್​ ಸತೀಶ್​

ದರ್ಶನ್​ ಸಿನಿಮಾದಲ್ಲಿ ಕೆಟ್ಟದ್ದಾಗಿ ನೋಡಿದ್ರು, ಬಟ್ಟೆ ಹಾಕಲೂ ಬಿಡಲಿಲ್ಲ: ಆ ದಿನಗಳ ನೆನೆದ Bigg Boss ಡಾಗ್​ ಸತೀಶ್​

ದರ್ಶನ್​ ಸಿನಿಮಾದಲ್ಲಿ ಕೆಟ್ಟದ್ದಾಗಿ ನೋಡಿದ್ರು, ಬಟ್ಟೆ ಹಾಕಲೂ ಬಿಡಲಿಲ್ಲ: ಆ ದಿನಗಳ ನೆನೆದ Bigg Boss ಡಾಗ್​ ಸತೀಶ್​

ಬಿಗ್ ಬಾಸ್ ಖ್ಯಾತಿಯ ಡಾಗ್ ಸತೀಶ್, 2001ರಲ್ಲಿ ತೆರೆಕಂಡ ‘ದರ್ಶನ್’ ಚಿತ್ರದಲ್ಲಿ ತಮಗಾದ ಅನುಭವವನ್ನು ಹಂಚಿಕೊಂಡಿದ್ದಾರೆ. ತಮಗೆ ಕೆಟ್ಟದಾಗಿ ಮೇಕಪ್ ಮಾಡಿ ಅವಮಾನಿಸಲಾಯಿತು ಮತ್ತು ಇದನ್ನು ಪ್ರಶ್ನಿಸಿದ್ದಕ್ಕೆ ತಮ್ಮ ಪಾತ್ರವನ್ನು ಅರ್ಧಕ್ಕೆ ಸಾಯಿಸಲಾಯಿತು ಎಂದು ನಟ  ಆರೋಪಿಸಿದ್ದಾರೆ.

Bigg Boss ಖ್ಯಾತಿಯ ಡಾಗ್​ ಸತೀಶ್​ ಅವರು ಕಾಂಟ್ರವರ್ಸಿಗಳಿಂದಲೇ ಫೇಮಸ್​ ಆದವರು. ಇದೇ ಕಾರಣಕ್ಕೆ ಅವರಿಗೆ ಬಿಗ್​ಬಾಸ್​ನಲ್ಲಿ ಸ್ವಾಗತ ಸಿಕ್ಕಿತ್ತು. ಮೊದಲಿಗೆ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರೂ, ವಿಶ್ವದ ನಂಬರ್​ 1 ಡಾಗ್​ ಬ್ರೀಡರ್​ ಎಂದು ಹೇಳಿಕೊಳ್ಳುತ್ತಿದ್ದರೂ, ಇವರಿಗೆ ಪ್ರಚಾರ ಸಿಕ್ಕಿರಲಿಲ್ಲ. ಇದೀಗ ಬಿಗ್​ಬಾಸ್​ ಖ್ಯಾತಿಯಿಂದಾಗಿ ಹಲವೆಡೆ ಸಂದರ್ಶನಗಳನ್ನು ನೀಡುತ್ತಿದ್ದಾರೆ.

ಅಂದಹಾಗೆ, ಡಾಗ್​ ಸತೀಶ್​ ಅವರು, 2001ರಲ್ಲಿ ತೆರೆಕಂಡ ದರ್ಶನ್​ ಚಿತ್ರದಲ್ಲಿ, ಸಹನಟನಾಗಿ ಕಾಣಿಸಿಕೊಂಡಿದ್ದರು. ಇದರ ಹೀರೋ ನಟ ದರ್ಶನ್. ರಮೇಶ್ ಕಿಟ್ಟಿ ನಿರ್ದೇಶನದ ಈ ಚಿತ್ರವನ್ನು ಆರ್‌. ಬಿ. ಎಸ್ ಪ್ರಸಾದ್ ನಿರ್ಮಿಸಿದ್ದರು. ನವನೀತ್ ನಾಯಕಿಯಾಗಿದ್ದರು. ಶ್ರೀನಾಥ್, ಸೃಜಲ್ ಲೋಕೇಶ್, ಚಿತ್ರಾ ಶೆಣೈ, ಸತ್ಯಜಿತ್ ಚಿತ್ರದ ತಾರಾಗಣದಲ್ಲಿದ್ದರು. ಸಹನಟನಾಗಿದ್ದವರು ಸತೀಶ್​.

ಈ ಸಿನಿಮಾದ ಬಗ್ಗೆ ಇದೀಗ ಇ-ಮಾಯೆ ಎಂಟರ್​ಟೈನ್​ಮೆಂಟ್​ ಚಾನೆಲ್​ಗೆ ನೀಡಿರುವ ಸಂದರ್ಶನದಲ್ಲಿ ಸತೀಶ್​ ಮಾತನಾಡಿದ್ದಾರೆ. ತಮಗೆ ವಯಸ್ಸಾದರೂ ಅತ್ಯಂತ ಸ್ಮಾರ್ಟ್​ ವ್ಯಕ್ತಿ ಎಂದು ಪದೇ ಪದೇ ಹೇಳಿಕೊಳ್ಳುವ ಡಾಗ್​ ಸತೀಶ್​ ಅವರು, ಇದೀಗ ತಮ್ಮ ಸೌಂದರ್ಯವನ್ನು ದರ್ಶನ್​  ಸಿನಿಮಾದಲ್ಲಿ ಹೇಗೆ ಕೆಟ್ಟದ್ದಾಗಿ ಬಿಂಬಿಸಿದ್ದರು ಎಂದು ಹೇಳಿದ್ದಾರೆ.

ಈ ಚಿತ್ರದಲ್ಲಿ ನನಗೆ ಕೆಟ್ಟದ್ದಾಗಿ ಮೇಕಪ್​ ಮಾಡಲಾಗಿತ್ತು. ಡ್ರೆಸ್​ ಹಾಕಿಕೊಳ್ಳಲೂ ಬಿಡಲಿಲ್ಲ. ಕಪ್ಪು ಪೇಂಟ್ ಬಳಿದ ಹಾಗೆ ಬಳಿದಿದ್ದರು. ಕನ್ನಡಿಯಲ್ಲಿ ನನ್ನನ್ನು ನೋಡಿಕೊಂಡು ಅತ್ತೇ ಬಿಟ್ಟಿದ್ದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ ಸತೀಶ್​.

ಈ ಬಗ್ಗೆ  ನಾನು ಕರೆದು ಕೇಳಿದಾಗ, ಏನಾಗಿದೆ ಚೆನ್ನಾಗಿಯೇ ಇದೆಯಲ್ಲ ಎಂದು ನನ್ನನ್ನು ತುಳಿಯಲು ನೋಡಿದ್ರು. ಆಗ ಜಗಳವಾಡಿ ಇನ್ನು ನಾನು ಈ ಸಿನಿಮಾದಲ್ಲಿ ಇರುವುದಿಲ್ಲ ಎಂದೆ ಎಂದು ಆ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

ಈ ಸಿನಿಮಾದ ಅಂತ್ಯದವರೆಗೂ ನಾನು ಇರಬೇಕಿತ್ತು. ಯಾವಾಗ ನಾನು ಈ ಸಿನಿಮಾ ಮಾಡಲ್ಲ ಎಂದೆನೋ, ಆ ಸಿನಿಮಾದಲ್ಲಿ ನನ್ನ ಹನಿಮೂನ್​ ಸೀನ್​ ಇತ್ತು. ಆಗಲೇ ವಿಮಾನದಲ್ಲಿ ಹೋಗುವಾಗ ಸಾಯಿಸಿಬಿಟ್ಟರು ಎಂದು ಹೇಳಿದ್ದಾರೆ.

ಈ ಬಗ್ಗೆ ಡಾಗ್​ ಸತೀಶ್​ ಅವರು ಮಾತನಾಡಿರುವ ವಿಡಿಯೋಕ್ಕಾಗಿ ಇದರ ಮೇಲೆ  ಕ್ಲಿಕ್​ ಮಾಡಿ

Source link

Leave a Reply

Your email address will not be published. Required fields are marked *