ಬೆಂಗಳೂರು, ನವೆಂಬರ್ 13: ಇವತ್ತು ಬೆಳಗ್ಗೆಯಿಂದ ಕರ್ನಾಟಕ ಬ್ಯಾಂಕ್ (ಕರ್ನಾಟಕ ಬ್ಯಾಂಕ್) ಟ್ರೆಂಡಿಂಗ್‌ಗೆ ಬಂದಿದೆ. ಸಿಬ್ಬಂದಿಯ ಸಣ್ಣ ಅಚಾತುರ್ಯದಿಂದ ಸಂಭವಿಸಿದ ಒಂದು ತಪ್ಪು ಈಗ ಬ್ಯಾಂಕ್ ಕಾರ್ಯಾಚರಣೆ ನಿರ್ವಹಣಾ ವ್ಯವಸ್ಥೆ ಮೇಲೆ ಅನುಮಾನ ಮೂಡುವಂತೆ ಮಾಡಿದೆ. ಎರಡು ಕರ್ನಾಟಕ ಬ್ಯಾಂಕ್ ಸುಮಾರು 1,00,000 ಕೋಟಿ ರೂ ಹಣವನ್ನು ತಪ್ಪಾಗಿ ಬೇರೊಂದು ಅಕೌಂಟ್‌ಗೆ ವರ್ಗಾವಣೆ ಮಾಡಲಾಗಿದೆ. ಅಂದೆ ಅದನ್ನು ಹಿಂಪಡೆಯಲಾಯಿತು. ಈ ರೀತಿ ತಪ್ಪಾಗುವುದು ಸಹಜ. ಇದನ್ನು ಬ್ಯಾಂಕಿಂಗ್ ವಲಯದಲ್ಲಿ ಫ್ಯಾಟ್ ಫಿಂಗರ್ ಎರರ್ (ಫ್ಯಾಟ್ ಫಿಂಗರ್ ಎರರ್) ಎನ್ನುತ್ತಾರೆ. ಕೈತಪ್ಪಿ ಆಗುವ ದೋಷ. ಆದರೆ, ಪ್ರಶ್ನೆ ಎದ್ದಿರುವುದು ಕರ್ಣಾಟಕ ಬ್ಯಾಂಕ್ ಸಿಬ್ಬಂದಿ ಈ ಅಚಾತುರ್ಯ ಘಟನೆಯನ್ನು ಪ್ರತಿಕ್ರಿಯಿಸಿದ ವೇಗ ಮತ್ತು ರೀತಿ. ಮನಿ ಕಂಟ್ರೋಲ್ ವೆಬ್ ಸೈಟ್ ಈ ಎಕ್ಸ್ ಕ್ಲೂಸಿವ್ ಸುದ್ದಿಯನ್ನು ಪ್ರಕಟಿಸಲಾಗಿದೆ. ಈ ಬಗ್ಗೆ ಬ್ಯಾಂಕ್ ನಿಂದ ಅಧಿಕೃತ ಹೇಳಿಕೆ ಬಂದಿಲ್ಲ.
1,00,000 ಕೋಟಿ ರೂ ವರ್ಗಾವಣೆ ಆಗಿದ್ದು ನಿಷ್ಕ್ರಿಯ ಖಾತೆಗೆ…
2023ರ ಆಗಸ್ಟ್ 9ರಂದು ಸಂಜೆ 5:17ಕ್ಕೆ ಕರ್ನಾಟಕ ಬ್ಯಾಂಕ್ ಸಿಬ್ಬಂದಿ 1,00,000 ಕೋಟಿ ರೂ.ಗೆ ಎಸ್ ಬಿ ಖಾತೆಗೆ ವರ್ಗಾವಣೆ ಮಾಡಲಾಗಿದೆ. ಆ ತಪ್ಪು ಗೊತ್ತಾಗಿ ಅದನ್ನು ವಾಪಸ್ ಪಡೆಯುವಷ್ಟರಲ್ಲಿ ರಾತ್ರಿ 8:09 ಆಗಿ ಹೋಗಿತ್ತು. ಹತ್ತಿರಹತ್ತಿರ 3 ಗಂಟೆ ಕಾಲ ಅಷ್ಟು ದೊಡ್ಡ ಮೊತ್ತವು ತಪ್ಪಾದ ಖಾತೆಗೆ ಹೋಗಿಬಿಟ್ಟಿತ್ತು.
ಕರ್ನಾಟಕ ಬ್ಯಾಂಕ್‌ನ ಅದೃಷ್ಟಕ್ಕೆ, ತಪ್ಪಾಗಿ ವರ್ಗಾವಣೆ ಆಗಿದ್ದು ನಿಷ್ಕ್ರಿಯ ಖಾತೆಗೆ. ಡಾರ್ಮಂಟ್ ಅಕೌಂಟ್ ಆಗಿದ್ದು ಸರಿಹೋಯಿತು. ಬ್ಯಾಂಕುಗಳಲ್ಲಿ ಈ ರೀತಿ ಅಚಾತುರ್ಯದಿಂದ ತಪ್ಪಾದ ಅಕೌಂಟ್‌ಗೆ ಹಣ ವರ್ಗಾವಣೆ ಆಗುವುದು. ಕೆಲವೇ ನಿಮಿಷಗಳಲ್ಲಿ ಅದನ್ನು ಸರಿಪಡಿಸುವುದು. ಇಲ್ಲಿ ಕರ್ನಾಟಕ ಬ್ಯಾಂಕ್ ಈ ತಪ್ಪನ್ನು ಗ್ರಹಿಸಿ ಸರಿಪಡಿಸುವಷ್ಟರಲ್ಲಿ 3 ಗಂಟೆಗಳು ಆಗುತ್ತಿವೆ. ಒಂದು ವೇಳೆ ಸಕ್ರಿಯ ಖಾತೆ, ಖಾತೆದಾರರು ಹಣವನ್ನು ಏನು ಬೇಕಾದರೂ ಮಾಡಿಕೊಳ್ಳಬಹುದಿತ್ತು.
ಇದನ್ನೂ ಓದಿ: ಐ ಸೃಷ್ಟಿತ ಕಾಂಟೆಂಟ್; ಸೋಷಿಯಲ್ ಮಾಧ್ಯಮಗಳಿಗೆ ಜವಾಬ್ದಾರಿ; ಬರಲಿದೆ ಹೊಸ ಕಾನೂನು
ಬ್ಯಾಂಕ್ ಗ್ರಾಹಕರು ಇಡೀ ಹಣವೇ ವರ್ಗಾವಣೆ ಆಗಿದ್ದಾರೆ…
ಕರ್ನಾಟಕ ಬ್ಯಾಂಕ್‌ನಲ್ಲಿ ಗ್ರಾಹಕರು ಇಟ್ಟಿರುವ ಠೇವಣಿಗಳು ಒಟ್ಟು 1,04,807 ಕೋಟಿ ರೂ. ತಪ್ಪಾಗಿ ವರ್ಗಾವಣೆ ಆದ ಹಣವೂ ಹತ್ತಿರ ಹತ್ತಿರ ಇಷ್ಟೇ ಮೊತ್ತ. ಇಡೀ ಗ್ರಾಹಕರು ಹಣವೇ ತಪ್ಪಾದ ಅಕೌಂಟ್‌ಗೆ ವರ್ಗಾವಣೆಯಾಗಿರುವುದು ಸೋಜಿಗ. ಈ ಹಣ ಕಳೆದುಹೋಗಿದ್ದರೆ ಬ್ಯಾಂಕ್ ದಿವಾಳಿ ಏಳಬಹುದಿತ್ತು.
ಆರು ತಿಂಗಳ ಬಳಿಕ ಮಂಡಳಿ ಗಮನಕ್ಕೆ ಬಂದ ಅಚಾತುರ್ಯ…
ಕರ್ನಾಟಕ ಬ್ಯಾಂಕ್‌ನಲ್ಲಿ ತಪ್ಪು ಸರಿಪಡಿಸಲು ಮೂರು ಗಂಟೆ ವಿಳಂಬವಾಗಿದ್ದು, ಇಡೀ ಘಟನೆಯನ್ನು ಬ್ಯಾಂಕ್‌ನ ರಿಸ್ಕ್ ಮ್ಯಾನೇಜ್‌ಮೆಂಟ್ ಸಮಿತಿಯ ಗಮನಕ್ಕೆ ತರಲು ಆರು ತಿಂಗಳವರೆಗೆ. ಘಟನೆ ನಡೆದದ್ದು 2023ರ ಆಗಸ್ಟ್ 9ರಂದು. ಬ್ಯಾಂಕ್ ನ ರಿಸ್ಕ್ ಮ್ಯಾನೇಜ್ಮೆಂಟ್ ವಿಭಾಗವು ಈ ಘಟನೆಯ ಬಗ್ಗೆ ಸಮಿತಿಯ ಗಮನಕ್ಕೆ ತಂದಿದ್ದು 2024ರ ಮಾರ್ಚ್ 4 ರಂದು. ಅಂದರೆ ಆರು ತಿಂಗಳವರೆಗೂ ಬ್ಯಾಂಕ್ ಮ್ಯಾನೇಜ್ಮೆಂಟ್ ಗೆ ಈ ಪ್ರಮಾದ ಗೊತ್ತೇ ಆಗಲಿಲ್ಲ. ಇದು ವಾಸ್ತವವಾಗಿ ಆತಂಕಪಡುವ ಸಂಗತಿ.
ವಿಳಂಬ ಇಷ್ಟಕ್ಕೇ ಸೀಮಿತವಾಗಿಲ್ಲ. ಮಂಡಳಿಯು ಈ ಘಟನೆಯ ಬಗ್ಗೆ ವರದಿ ಸಲ್ಲಿಸಿ, ಪ್ರಮಾಣೀಕೃತ ಲೆಕ್ಕಪರಿಶೋಧಕರಿಂದ ಬ್ಯಾಂಕ್ನ ಐಟಿ ಸಿಸ್ಟಂಗಳನ್ನು ಆಡಿಟ್ ಮಾಡಿ, ಎಲ್ಲಿ ತಪ್ಪಾಗಿದೆ ಎಂದು ಪತ್ತೆ ಮಾಡಿ ದೋಷವನ್ನು ಸರಿಪಡಿಸಲು ಹೆಚ್ಚಿನ ತಿಂಗಳುಗಳು ಗತಿಸಿವೆ.
ಇದನ್ನೂ ಓದಿ: ನಿರ್ಮಲಾ ಸೀತಾರಾಮನ್ ಸಹಿ ನಕಲು ಮಾಡಿ ಮಹಿಳೆಯೊಬ್ಬಳಿಂದ ಕೋಟಿ ರೂ ವಸೂಲಿ ಮಾಡಿದ ದುಷ್ಕರ್ಮಿಗಳು
ಬ್ಯಾಂಕ್ನ ಆಂತರಿಕ ವ್ಯವಸ್ಥೆ ಬಗ್ಗೆ ಆರ್ಬಿಐ ಕೂಡ ಆತಂಕಪಟ್ಟಿದೆ. ಒಂದು ವೇಳೆ ಅಷ್ಟು ದೊಡ್ಡ ಮೊತ್ತದ ವರ್ಗಾವಣೆ ಆಗಿದ್ದು ಇನಾಪರೇಟಿವ್ ಅಕೌಂಟ್‌ಗೆ ಅಲ್ಲ ಎಂದರೆ ಎಂಥ ಅನಾಹುತವಾಗುತ್ತಿತ್ತು ಎಂಬ ಪ್ರಶ್ನೆ ಇದೆ. ಕರ್ನಾಟಕ ಬ್ಯಾಂಕ್ನ ಮ್ಯಾನೇಜ್ಮೆಂಟ್ ನಾಲ್ಕೈದು ಹಿರಿಯ ಅಧಿಕಾರಿಗಳು ಈ ಘಟನೆಗೆ ದೋಷಿಗಳೆಂದು ಗುರುತಿಸಿ, ಅವರ ಕೆಲಸದಿಂದ ತೆಗೆದುಹಾಕಲಾಗಿದೆ ಎಂದು ಹೇಳಿದರು.
ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ