ಬೆಳಗಾವಿ, ನವೆಂಬರ್ 13: ಫೈನಾನ್ಸ್ ಕಿರುಕುಳಕ್ಕೆ ಬೇಸತ್ತು ರೈತ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಗಾವಿ ತಾಲೂಕಿನ ಕಡೋಲಿ ಗ್ರಾಮದಲ್ಲಿ ನಡೆದಿದೆ. ಸಾತೇರಿ ಹೊನ್ನಪ್ಪ ರುಟಕುಟೆ (78) ಮೃತ ದುರ್ದೈವಿ ಕಿರುತೆರೆ, ಮಣ್ಣೂರ ಗ್ರಾಮದ ಕೋ ಆಪರೇಟಿವ್ ಫೈನಾನ್ಸ್ ಮೇಲೆ ಕುಳದ ಆರೋಪ ಕೇಳಿಬಂದಿದೆ. ರೈತ ಸಾತೇರಿ ಹೊನ್ನಪ್ಪ ರುಟಕುಟೆ ಫೈನಾನ್ಸ್ ನಲ್ಲಿ 12 ಲಕ್ಷ ರೂಪಾಯಿ ಸಾಲ ತೆಗೆದುಕೊಂಡಿದ್ದರು. ಆ ಮೇಲಿನ 4 ಲಕ್ಷ ರೂ. ಮರುಪಾವತಿ ಮಾಡಿದರು. ಹೀಗಿದ್ದರೂ ಬಡ್ಡಿ ಮತ್ತು ಅಸಲು ಸೇರಿ ಮತ್ತೆ 16 ಲಕ್ಷ ಕೊಡುವಂತೆ ಫೈನಾನ್ಸ್ ಕಿರುಕುಳ ನೀಡಿದೆ. ಸಾಲ ತೀರಿಸದೆ ಇದ್ದರೆ ಮನೆ ಹರಾಜು ಹಾಕುವುದಾಗಿ ಬೆದರಿಕೆ ಹಾಕಿದ್ದಲ್ಲದೆ, ಫೈನಾನ್ಸ್ ಸಿಬ್ಬಂದಿಗೆ ಡಂಗುರ ಸಾರಿದ್ದಾರೆ. ಹೀಗಾಗಿ ಮರ್ಯಾದೆ ಸ್ಥಗಿತಗೊಂಡಿದೆ ಎಂದು ಮನನೊಂದು ಸಾತೇರಿ ಹೊನ್ನಪ್ಪ ರುಟಕುಟೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಫೈನಾನ್ಸ್ ಸಿಬ್ಬಂದಿಯೇ ಸಾವಿಗೆ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದು, ಈ ಬಗ್ಗೆ ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.