ನಿಷ್ಠೆ, ನಿಯತ್ತು, ನಿಷ್ಕಲ್ಮಶ ಪ್ರೀತಿ ಎಂದಾಕ್ಷಣ ಮೊದಲು ನೆನಪಿಗೆ ಬರುವುದೇ ಈ ಶ್ವಾನ (ನಾಯಿ) ಹೌದು, ಶ್ವಾನ ಎಂದರೆ ಎಲ್ಲರಿಗೂ ಕೂಡ ಇಷ್ಟನೇ. ಒಂದು ತುತ್ತು ಹಾಕಿದ್ರೆ ಸಾಕು, ಜೀವನ ಪರ್ಯಂತ ಋಣಿಯಾಗಬೇಕು. ಮನೆಯ ಮುದ್ದಿನ ಶ್ವಾನಗಳನ್ನು ತಮ್ಮ ಸದಸ್ಯರಂತೆ ನೋಡಿಕೊಳ್ಳುತ್ತಾರೆ. ಆದರೆ ಈಗ ಒಬ್ಬ ವ್ಯಕ್ತಿಯನ್ನು ತನ್ನ ಹೆಗಲ ಮೇಲೆ ಹೊತ್ತುಕೊಂಡು ಸುತ್ತಿದ್ದಾನೆ. ಮಕ್ಕಳಂತೆ ತನ್ನ ಹೆಗಲ ಮೇಲೆ ಹೊತ್ತು ನಡೆದುಕೊಂಡು ಹೋಗುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
Binoy joshep ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡ ವಿಡಿಯೋದಲ್ಲಿ ವ್ಯಕ್ತಿಯೊಬ್ಬನಿಗೆ ಶ್ವಾನವು ಮಕ್ಕಳಿಗಿಂತ ಹೆಚ್ಚಾಗಿರುತ್ತದೆ. ತನ್ನ ಹೆಗಲ ಮೇಲೆ ಹೊತ್ತು ಹೊತ್ತು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವುದನ್ನು ನೋಡಬಹುದು. ನಿಷ್ಕಲ್ಮಶ ಪ್ರೀತಿ ನೀಡಿದ ಶ್ವಾನಕ್ಕೆ ವ್ಯಕ್ತಿಯೂ ತೋರುವ ಪ್ರೀತಿಯನ್ನು ನೀವಿಲ್ಲಿ ಕಾಣಬಹುದು.
ವೈರಲ್ ವಿಡಿಯೋ ಇಲ್ಲಿದೆ ನೋಡಿ
ಇದನ್ನೂ ಓದಿ:ಮಾತಿಗೆ ತಪ್ಪದೇ ಮನೆಮಾಲಕಿಯ ಪಾರ್ಸ್ ಅನ್ನು ಕಾಯ್ದ ಮುದ್ದಿನ ಶ್ವಾನ
ಈ ವಿಡಿಯೋ ಆರು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹೊಂದಿದೆ. ಒಬ್ಬ ಬಳಕೆದಾರ ಪ್ರೀತಿ ನೀಡಿದರೆ ಕೊನೆತನಕ ಜೊತೆಯಿರುವ ಏಕೈಕ ಜೀವವಿದು ವಾತಾವರಣ. ಇತರರು, ಇದು ನಿಜವಾದ ಪ್ರೀತಿ ಎಂದರೆ, ಮತ್ತೊಬ್ಬರು ಇಂತಹ ದೃಶ್ಯಗಳು ಮನಸ್ಸಿಗೆ ಹತ್ತಿರವಾಗುವುದಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ರಂದು ಪ್ರಕಟಿಸಲಾಗಿದೆ – 1:32 pm, ಗುರುವಾರ, 13 ನವೆಂಬರ್ 25