ರಾಜಮೌಳಿ (ಎಸ್ ಎಸ್ ರಾಜಮೌಳಿ) ನಿರ್ದೇಶಿಸುತ್ತಿರುವ ಹೊಸ ಸಿನಿಮಾ ವಿಶ್ವ ಸಿನಿಮಾ ಪ್ರೇಮಿಗಳ ಗಮನ ಸೆಳೆದಿದೆ. ವಿಶ್ವದಾದ್ಯಂತ ಇರುವ ಸಿನಿಮಾ ಪ್ರೇಮಿಗಳು ಸಿನಿಮಾದ ಬಗ್ಗೆ ನಿರೀಕ್ಷೆ ವ್ಯಕ್ತಪಡಿಸಿದ್ದಾರೆ. ಅದಕ್ಕೆ ತಕ್ಕಂತೆ ರಾಜಮೌಳಿ ಸಹ ಸಿನಿಮಾವನ್ನು ಹಾಲಿವುಡ್ ಗುಣಮಟ್ಟದಲ್ಲಿ ನಿರ್ದೇಶಿಸಿದ್ದಾರೆ. ಮಹೇಶ್ ಬಾಬು ನಾಯಕನಾಗಿ, ಪ್ರಿಯಾಂಕಾ ಚೋಪ್ರಾ ನಾಯಕಿಯಾಗಿ, ಪೃಥ್ವಿರಾಜ್ ಸುಕುಮಾರನ್ ವಿಲನ್ ಆಗಿ ನಟಿಸುತ್ತಿರುವ ಈ ಸಿನಿಮಾದ ಟೈಟಲ್ ರಿಲೀಸ್ ಗಾಗಿ ಅದ್ಧೂರಿ ಕಾರ್ಯಕ್ರಮವನ್ನು ರಾಜಮೌಳಿ ನಡೆಸುತ್ತಿದ್ದಾರೆ. ಆದರೆ ಇದೀಗ ಅವರಿಗೆ ಭಯವೊಂದು ಕಾಡುತ್ತಿದೆ. ಇದೇ ಕಾರಣಕ್ಕೆ ಅಭಿಮಾನಿಗಳಿಗೆ ಮನವಿ ಮಾಡಲಾಗಿದೆ.
ರಾಜಮೌಳಿ-ಮಹೇಶ್ ಬಾಬು ಅವರ ಸಿನಿಮಾವನ್ನು ‘ಗ್ಲೋಬ್ ಟ್ರೋಟರ್’ ಎಂದು ಕರೆಯಲಾಗುತ್ತಿದ್ದು, ಇದೀಗ ಈ ಸಿನಿಮಾ ಟೈಟಲ್ ರಿವೀಲ್ ಮತ್ತು ಟೀಸರ್ ಬಿಡುಗಡೆ ಕಾರ್ಯಕ್ರಮವನ್ನು ರಾಮೋಜಿ ಫಿಲಂ ಸಿಟಿಯಲ್ಲಿ ನವೆಂಬರ್ 15 ರಂದು ನಡೆಸಲಾಯಿತು. ಭಾರಿ ಸಂಖ್ಯೆಯ ಜನ ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಯಾವುದೇ ಅವಘಡ ಸಂಭವಿಸದಂತೆ, ಸ್ವಯಂಸೇವಕರ ನೆರವನ್ನು ಪಡೆಯಲಾಗುತ್ತಿದೆ. ಅದಾಗ್ಯೂ, ರಾಜಮೌಳಿ ಅವರು ಖುದ್ದಾಗಿ ವಿಡಿಯೋ ಮಾಡಿ, ಕಾರ್ಯಕ್ರಮಕ್ಕೆ ಬರುವ ಅಭಿಮಾನಿಗಳಲ್ಲಿ ಕೆಲ ಮನವಿ ಮಾಡುವ ಜೊತೆಗೆ ಕೆಲ ಸೂಚನೆಗಳನ್ನು ಸಹ ನೀಡಿದ್ದಾರೆ.
‘ಈ ಇವೆಂಟ್ ಓಪನ್ ಈವೆಂಟ್ ಆಗಿಲ್ಲ, ಟಿಕೆಟ್ ಇದ್ದವರಿಗೆ ಮಾತ್ರವೇ ಪ್ರವೇಶ ಇರಲಿದೆ. ಟಿಕೆಟ್ ಇಲ್ಲದವರಿಗೆ ಪ್ರವೇಶ ಇರುವುದಿಲ್ಲ. ಜೊತೆಗೆ ಮಕ್ಕಳು ಮತ್ತು ವಯಸ್ಸಾದವರಿಗೆ ಪ್ರವೇಶವನ್ನು ನಿರಾಕರಿಸಿದ್ದಾರೆ’ ಮುಂದುವರೆದು, ‘ಕಾರ್ಯಕ್ರಮದ ದಿನದಂದು ರಾಮೋಜಿ ಫಿಲಂ ಸಿಟಿಯ ಮುಖ್ಯ ದ್ವಾರ ಬಂದ್ ಆಗಿರುತ್ತದೆ. ಕಾರ್ಯಕ್ರಮಕ್ಕೆ ಬರುವವರಿಗಾಗಿ ಮೂರು ಬದಲಿ ರಸ್ತೆಗಳ ವ್ಯವಸ್ಥೆ ಮಾಡಲಾಗಿತ್ತು, ವಿಜಯವಾಡ, ಗಚ್ಚಿಬೋಲಿ ಹೀಗೆ ಎಲ್ಲ ಕಡೆಗಳಿಂದ ಬರುವವರಿಗೆ ಸೂಕ್ತವಾದ ಸೂಚನಾ ಫಲಕಗಳನ್ನು ಹಾಕಲಾಗಿದೆ, ಕಡ್ಡಾಯವಾಗಿ ಆ ಸೂಚನಾ ಫಲಕಗಳನ್ನು ಅನುಸರಿಸಿ ಕಾರ್ಯಕ್ರಮದ ಸ್ಥಳವನ್ನು ತಲುಪಿ’ ಎಂದು ರಾಜಮೌಳಿ ಹೇಳಿದ್ದಾರೆ.
ಇದನ್ನೂ ಓದಿ:ಒಟಿಟಿಯಲ್ಲಿ ನೋಡಿ ಮಹೇಶ್ ಬಾಬು-ರಾಜಮೌಳಿ ಸಿನಿಮಾ ಇವೆಂಟ್ : ಯಾವಾಗ?
‘ಇತ್ತೀಚೆಗೆ ನಡೆದ ಕೆಲವು ಘಟನೆಗಳಿಂದ ಹೆಚ್ಚುವರಿ ಭದ್ರತಾ ಕ್ರಮಗಳನ್ನು ನಾವು ತೆಗೆದುಕೊಂಡಿದ್ದೇವೆ. ಈ ಕಾರ್ಯಕ್ರಮ ಯಶಸ್ವಿ ಆಗಬೇಕೆಂದರೆ ನಿಮಗೆ ಸಹಕಾರ ನೀಡಿ. ವಿಧಿಸಿದ ನಿಯಮಾವಳಿಗಳನ್ನು ಪಾಲಿಸಿಯೇ ಕಾರ್ಯಕ್ರಮಕ್ಕೆ ಬನ್ನಿ ಕಾರ್ಯಕ್ರಮದಿಂದ ನಿರ್ಗಮಿಸಿ. ನಾವು ಹಾಕಿರುವ ಫಲಕಗಳನ್ನು ಹೊರತಾಗಿ ಬೇರೆ ದಾರಿಗಳಲ್ಲಿ ಯಾವುದಕ್ಕೂ ಬರಬೇಡಿ’ ಎಂದು ಸಹ ರಾಜಮೌಳಿ ಒತ್ತಿ ಹೇಳಿದ್ದಾರೆ.
ನಿಮ್ಮೆಲ್ಲರನ್ನೂ ನೋಡಲು ತುಂಬಾ ಉತ್ಸುಕನಾಗಿದ್ದೇನೆ #ಗ್ಲೋಬ್ಟ್ರೋಟರ್ ನವೆಂಬರ್ 15 ರಂದು ಕಾರ್ಯಕ್ರಮ.
ಈವೆಂಟ್ ದಿನದಂದು RFC ಮುಖ್ಯ ಗೇಟ್ ಅನ್ನು ಮುಚ್ಚಲಾಗುತ್ತದೆ. ನಿಮ್ಮ ಪ್ರವೇಶ ಪಾಸ್ನಲ್ಲಿರುವ ಸೂಚನೆಗಳನ್ನು ಅನುಸರಿಸಿ. ಪ್ರತಿಯೊಬ್ಬರಿಗೂ ತೊಂದರೆ-ಮುಕ್ತ, ಸುರಕ್ಷಿತ ಮತ್ತು ಸಂತೋಷದ ಅನುಭವವನ್ನು ಖಚಿತಪಡಿಸಿಕೊಳ್ಳಲು ಪೊಲೀಸ್ ಮತ್ತು ಭದ್ರತೆಯೊಂದಿಗೆ ಸಹಕರಿಸಿ. pic.twitter.com/bG3Hw5XmD8
– ರಾಜಮೌಳಿ ss (@ssrajamouli) ನವೆಂಬರ್ 13, 2025
ಇತ್ತೀಚೆಗೆ ದಳಪತಿ ವಿಜಯ್ ಚುನಾವಣಾ ಪ್ರಚಾರದ ವೇಳೆ ನಡೆದ ಕಾಲ್ತುಳಿತದಲ್ಲಿ 41 ಮಂದಿ ನಿಧನ ಹೊಂದಿದರು. ಅದಕ್ಕೂ ಮುನ್ನ, ಅಲ್ಲು ಅರ್ಜುನ್ ಅವರು ಪ್ರೀಮಿಯರ್ ಶೋ ನೋಡಲು ಹೈದರಾಬಾದ್‌ನ ಸಂಧ್ಯಾ ಥಿಯೇಟರ್‌ಗೆ ಹೋದಾಗ ಅಲ್ಲಿ ನಡೆದ ಕಾಲ್ತುಳಿತದಲ್ಲಿ ಇಬ್ಬರು ಅಸುನೀಗಿದ್ದು, ಒಬ್ಬ ಬಾಲಕ ಬಾಲಕ ಕೋಮಾದಲ್ಲಿದ್ದಾನೆ. ಹೀಗಾಗಿ, ಅದೇ ಅವಘಡಗಳು ಮರುಕಳಿಸದೇ ಇರಲೆಂದು ಕೆಲವು ಕಠಿಣ ನಿಯಮಗಳನ್ನು ಹಾಕಿದ್ದಾರೆ. ಅವನನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ರಾಜಮೌಳಿ ಸಹ ಮನವಿ ಮಾಡಿದ್ದಾರೆ. ಅಂದಹಾಗೆ, ನವೆಂಬರ್ 15 ರಂದು ನಡೆಯಲಿರುವ ಈವೆಂಟ್, ಜಿಯೋ ಹಾಟ್‌ಸ್ಟಾರ್‌ನಲ್ಲಿ ಲೈವ್ ಪ್ರದರ್ಶನ ಆಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ