Bigg Boss ಕನ್ನಡದವ್ರೂ ಕಮ್ಮಿ ಇಲ್ಲ ಕಣ್ರಿ! ಮಹಿಳೆಯರ ಮಾರಾಮಾರಿ: ಭಯದಿಂದ ಬೆವರಿದ ಪುರುಷರು!

Bigg Boss ಕನ್ನಡದವ್ರೂ ಕಮ್ಮಿ ಇಲ್ಲ ಕಣ್ರಿ! ಮಹಿಳೆಯರ ಮಾರಾಮಾರಿ: ಭಯದಿಂದ ಬೆವರಿದ ಪುರುಷರು!

Bigg Boss ಕನ್ನಡದವ್ರೂ ಕಮ್ಮಿ ಇಲ್ಲ ಕಣ್ರಿ! ಮಹಿಳೆಯರ ಮಾರಾಮಾರಿ: ಭಯದಿಂದ ಬೆವರಿದ ಪುರುಷರು!
ಬಿಗ್​ಬಾಸ್​ ರಿಯಾಲಿಟಿ ಷೋನಲ್ಲಿ ಜಗಳಗಳು ಸಾಮಾನ್ಯ, ಆದರೆ ಇದೀಗ ಕನ್ನಡ ಬಿಗ್​ಬಾಸ್​ನ ಹೊಸ ಪ್ರೊಮೋದಲ್ಲಿ ಮಹಿಳಾ ಸ್ಪರ್ಧಿಗಳು ಮಾರಾಮಾರಿ ಮಾಡಿಕೊಂಡಿದ್ದಾರೆ. ಅಚ್ಚರಿಯೆಂದರೆ, ಸದಾ ಜಗಳದಿಂದಲೇ ಗುರುತಿಸಿಕೊಂಡಿದ್ದ ಅಶ್ವಿನಿ ಗೌಡ ಅವರೇ ಈ ಜಗಳವನ್ನು ತಡೆಯಲು ಬಂದಿದ್ದಾರೆ.
ಬಿಗ್​ಬಾಸ್​ (Bigg Boss) ಎನ್ನೋದು ಯಾವ ರೀತಿಯ ಷೋ ಎನ್ನುವುದು ಬಹುತೇಕ ಎಲ್ಲರಿಗೂ ತಿಳಿದದ್ದೇ. ಈ ಷೋನಲ್ಲಿ ಹೀಗೆಯೇ ಇರುತ್ತದೆ ಎಂದು ಅದನ್ನು ಖುಷಿಯಿಂದ ಎಂಜಾಯ್​ ಮಾಡುವ ವರ್ಗ ಒಂದೆಡೆಯಾದರೆ, ಅದು ಹೀಗೆಯೇ ಇರುತ್ತದೆ ಎನ್ನುವ ಕಾರಣಕ್ಕಾಗಿಯೇ ಇದನ್ನು ನೋಡದ ವರ್ಗವೂ ಅಷ್ಟೇ ಪ್ರಮಾಣದಲ್ಲಿ ಇದೆ. ಕೆಲವರಿಗೆ ಇದೇ ಖುಷಿ, ಮತ್ತೆ ಕೆಲವರಿಗೆ ಇದೇ ಅಸಹ್ಯ, ಅಸಭ್ಯ!

ಒಟ್ಟಿನಲ್ಲಿ ಮಾರಾಮಾರಿ, ಗಲಾಟೆ, ಕಿರುಚಾಟ, ಅಶ್ಲೀಲತೆ, ಲವ್​… ಎಲ್ಲವೂ ಎಲ್ಲಾ ಭಾಷೆಗಳ ಬಿಗ್​ಬಾಸ್​ನಲ್ಲಿ ರಾರಾಜಿಸುವುದು ಇದ್ದೇ ಇದೆ. ಕೆಲವೊಂದು ಭಾಷೆಯ ಬಿಗ್​ಬಾಸ್​ನಲ್ಲಿ ಸ್ಪರ್ಧಿಗಳ ಬೆಡ್​ರೂಮ್​ ದೃಶ್ಯಗಳನ್ನೂ, ಅಲ್ಲಿ ಅವರ ರೊಮಾನ್ಸ್​ ಅನ್ನೂ ತೋರಿಸಿದ್ದು ಇದೆ. ಅದನ್ನು ಬೈದುಕೊಳ್ಳುತ್ತಲೇ ಅದನ್ನು ಎಂಜಾಯ್​ ಮಾಡಿ ಟಿಆರ್​ಪಿ ಏರಿಸಿರುವ ಘಟನೆಗಳೂ ನಡೆದಿವೆ.

ಜೀವನದಲ್ಲಿಯೂ ಸಪ್ಪಗಿದ್ದು, ಇಂಥ ರಿಯಾಲಿಟಿ ಷೋನಲ್ಲಿಯೂ ಎಲ್ಲರೂ ಒಳ್ಳೆಯವರಾಗಿಯೇ ಸೀದಾ ಸಾದಾ ಆಗಿ ಬಿಟ್ಟರೆ ರುಚಿಸುವುದಾದರೂ ಹೇಗೆ ಅಲ್ವಾ? ಪಾಪ ಮಲ್ಲಮ್ಮನಂಥ ಮುಗ್ಧರ ಗತಿನೇ ಆಗತ್ತೆ. ಅವರು ಬೇಗನೇ ಮನೆಯಿಂದ ಹೊರಬರಬೇಕಾಗುತ್ತದೆ. ಅದಕ್ಕಾಗಿಯೇ ಬಿಗ್​ಬಾಸ್​ ಮನೆಯಲ್ಲಿ ಕೊನೆಯವರೆಗೆ ಉಳಿಯಬೇಕು ಎಂದರೆ ಎಲ್ಲಾ ಎಲ್ಲೆಗಳನ್ನು ಮೀರಲೇಬೇಕಾದ ಅನಿವಾರ್ಯತೆ ಸ್ಪರ್ಧಿಗಳಿಗೆ.

ಇದೀಗ ಇಲ್ಲೊಂದು ಪ್ರೊಮೋ ಬಿಡುಗಡೆಯಾಗಿದೆ. ಇದರಲ್ಲಿ, ಮಹಿಳೆಯರು ಎಲ್ಲಾ ಹಂತ ಮೀರಿ ಮಾರಾಮಾರಿ ಮಾಡಿಕೊಂಡಿದ್ದಾರೆ. ಕೆಲವು ಪ್ರದೇಶಗಳಲ್ಲಿ ಸರ್ವೇ ಸಾಮಾನ್ಯವಾಗಿ ಕಾಣುವ ಇಂಥ ದೃಶ್ಯಗಳು ಇದೀಗ ಬಿಗ್​ಬಾಸ್​ಮನೆಯಲ್ಲಿ ಕಂಡುಬಂದಿದೆ.

ಬೇರೆ ಭಾಷೆಗಳ ಬಿಗ್​ಬಾಸ್​ನಲ್ಲಿ ಇಂಥದ್ದು ಮಾಮೂಲು ಆಗಿದ್ದರೂ ಇದೀಗ ಕನ್ನಡದ ಈ ಮಹಿಳಾ ಮಣಿಗಳು ತಾವೇನೂ ಕಮ್ಮಿ ಇಲ್ಲ ಕಣ್ರೀ ಎನ್ನುತ್ತಿದ್ದಾರೆ.

ಕುತೂಹಲದ ವಿಷ್ಯವೊಂದು ಇದರಲ್ಲಿ ಕಾಣಬಹುದು. ಅದೇನೆಂದರೆ, ಸದಾ ಜಗಳದಿಂದಲೇ ಫೇಮಸ್​ ಆಗ್ತಿರೋ ಅಶ್ವಿನಿ ಗೌಡ (Ashwini Gowda) ಅವರು ಈ ಜಗಳವನ್ನು ತಡೆಯಲು ಬಂದು, ಎಲ್ಲರ ಬಾಯಿ ಮುಚ್ಚಿಸಿರುವುದು. ಈ ಬಗ್ಗೆ ಸಾಕಷ್ಟು ಮಂದಿ ಕಮೆಂಟ್​ ಮೂಲಕ ಅಚ್ಚರಿಯನ್ನೂ ವ್ಯಕ್ತಪಡಿಸುತ್ತಿದ್ದಾರೆ.

ಅದೇ ರೀತಿ ಅಲ್ಲಿರುವ ಪುರುಷರು ಭಯದಿಂದ ನೋಡುತ್ತಿರುವುದನ್ನು ಈ ಪ್ರೊಮೋದಲ್ಲಿ ನೋಡಬಹುದಾಗಿದೆ. ಇಂಥ ದೃಶ್ಯಗಳು ಅಪರೂಪ ಆಗಿರುವ ಕಾರಣದಿಂದ ಅವರು ಭಯಪಟ್ಟುಕೊಂಡರೋ ಎನ್ನುವಂತಿದೆ ಈ ದೃಶ್ಯ.

Bigg Boss 12 ಎನ್ನೋ ಇನ್​ಸ್ಟಾಗ್ರಾಮ್​ನಲ್ಲಿ ಶೇರ್​ ಆಗಿರೊ ಈ ವಿಡಿಯೋ ನೋಡಿ

Source link

Leave a Reply

Your email address will not be published. Required fields are marked *