ಯುಐಡಿಐಐ ಸಂಸ್ಥೆ ಹೊಸ ಆಧಾರ್ ಆಯಪ್ (ಆಧಾರ್) ಕೆಲವು ದಿನಗಳ ಹಿಂದೆ (2025ರ ನ. 10) ಬಿಡುಗಡೆ ಮಾಡಿದೆ. ಗೂಗಲ್‌ನ ಪ್ಲೇಸ್ಟೋರ್ ಮತ್ತು ಆಯಪಲ್ ಆಯಪ್ ಸ್ಟೋರ್‌ನಲ್ಲಿ ಆಧಾರ್ ಆಯಪ್ ಲಭ್ಯವಿರುತ್ತದೆ, ಡೌನ್‌ಲೋಡ್ ಮಾಡಿಕೊಳ್ಳಬಹುದು. ಗುರುತು ದಾಖಲೆ ಪರಿಶೀಲನೆಯ ಅವಶ್ಯಕತೆ ಇದ್ದಾಗ ಈ ಆಯಪ್ ಅನ್ನು ಬಳಸಬಹುದು. ಇದೂ ಸೇರಿದಂತೆ ಇನ್ನೂ ಹಲವು ಕಾರ್ಯಗಳಿಗೆ ಹೊಸ ಆಧಾರ್ ಆಯಪ್ ಪ್ರಯೋಜನಕಾರಿ ಎನಿಸಬಲ್ಲದು. ಎಂಆಧಾರ್ (mAadhaar – My Aadhaar) ಎಂಬ ಆಯಪ್ ಕೂಡ ಅಸ್ತಿತ್ವದಲ್ಲಿದೆ, ಈ ಹೊಸ ಆಯಪ್ ಯಾಕೆ ಎಂದನಿಸಬಹುದು. ಈ ಎರಡೂ ಆಯಪ್ಗಳ ಮಧ್ಯೆ ವ್ಯತ್ಯಾಸಗಳಿವೆ. ಸದ್ಯಕ್ಕೆ ಎರಡೂ ಪ್ರತ್ಯೇಕವಾಗಿ ಲಭ್ಯವಿಲ್ಲ. ಈ ಎರಡೂ ಆಯಪ್ಗಳ ನಡುವಿನ ವ್ಯತ್ಯಾಸವನ್ನು ಗುರುತಿಸುವ ಮೊದಲು ಹೊಸ ಆಧಾರ್ ಆಯಪ್ನ ಕೆಲವು ಮುಖ್ಯ ಕಾರ್ಯಗಳೇನು ಎಂಬ ವಿವರ ಈ ಕೆಳಕಂಡಂತಿವೆ:
ಹೊಸ ಆಧಾರ್ ಆಯಪ್ನ ಫೀಚರ್‌ಗಳು
- ಒಂದೇ ಮೊಬೈಲ್ ನಂಬರ್ ಲಿಂಕ್ ಆಗಿರುವ ಕುಟುಂಬದ ಎಲ್ಲಾ ಸದಸ್ಯರ ಆಧಾರ್ ಕಾರ್ಡ್‌ಗಳನ್ನು ಒಂದೇ ಆಯಪ್‌ನಲ್ಲಿ ಇಟ್ಟುಕೊಂಡು ನಿರ್ವಹಿಸಬಹುದು.
- ಆಧಾರ್ ಡಾಟಾ ಲಾಕ್ ಮಾಡಲು ಮತ್ತು ಅನ್ಲಾಕ್ ಮಾಡಲು ಬಯೋಮೆಟ್ರಿಕ್ ಅಥೆಂಟಿಕೇಶನ್ ನಿಯಂತ್ರಣ ಹೊಸ ಆಧಾರ್ ಆಯಪ್ನಲ್ಲಿ ಇರುತ್ತದೆ. , ಆಧಾರ್ ದೃಢೀಕರಣಕ್ಕಾಗಿ ಆಧಾರ್ ಅನ್ನು ಅನ್ಲಾಕ್ ಮಾಡಿದ ನಂತರ ಮತ್ತೆ ಅದನ್ನು ಲಾಕ್ ಮಾಡಬಹುದು.
- ಆಧಾರ್ ಡಾಟಾದಲ್ಲಿ ಯಾವುದನ್ನು ತೋರಿಸಬೇಕು, ತೋರಿಸಬಾರದು ಎಂಬ ನಿಯಂತ್ರಣ ನಿಮ್ಮ ಕೈಯಲ್ಲಿದೆ. ಅಂದರೆ, ಆಧಾರ್‌ನಲ್ಲಿ ನಿಮ್ಮ ಹೆಸರು ಮತ್ತು ಫೋಟೋ ಮಾತ್ರ ಕಾಣಬೇಕು. , ಜನ್ಮದಿನಾಂಕ ವಿವರ ಕಾಣಬಾರದು ವಿಳಾಸ ನಮೂದಿಸಿದರೆ ಅದರ ನಿಯಂತ್ರಣ ನಿಮಗಿರುತ್ತದೆ.
- ಬ್ಯಾಂಕು, ಸರ್ಕಾರಿ ಕಚೇರಿ, ಸರ್ವಿಸ್ ಸೆಂಟರ್ ಇತ್ಯಾದಿ ಕಡೆಗಳಲ್ಲಿ ಆಧಾರ್ ದೃಢೀಕರಣಕ್ಕೆ ಆಧಾರ್ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಸೌಲಭ್ಯವನ್ನು ಈ ಆಯಪ್ ಕೊಡುಗೆ.
- ಇಂಟರ್ನೆಟ್ ಇಲ್ಲದಿದ್ದರೂ ಆಧಾರ್ ವಿವರವನ್ನು ವೀಕ್ಷಿಸಲು ಅವಕಾಶ ಇರುತ್ತದೆ.
- ಆಧಾರ್ ಯಾವಾಗ್ಯಾವಾಗ ಮತ್ತು ಯಾವ ಉದ್ದೇಶಕ್ಕೆ ಬಳಸಲಾಯಿತು ಎನ್ನುವುದನ್ನು ಟ್ರ್ಯಾಕ್ ಮಾಡಬಹುದು.
ಇದನ್ನೂ ಓದಿ: ಕಣ್ತಪ್ಪಿಯಾದ ತಪ್ಪು ಇಡೀ ಬ್ಯಾಂಕನ್ನೇ ದಿವಾಳಿಯಾಗಿಸುತ್ತಿತ್ತಾ? ಕರ್ನಾಟಕ ಬ್ಯಾಂಕ್‌ನ 1,00,000 ಕೋಟಿ ರೂ ಫ್ಯಾಟ್ ಫಿಂಗರ್ ಕಥೆ
ಹೊಸ ಆಧಾರ್ ಆಯಪ್ ಸೆಟಪ್ ಪ್ರಕ್ರಿಯೆ
- ಫೋನ್‌ಗೆ ಆಧಾರ್ ಆಯಪ್ ಡೌನ್‌ಲೋಡ್ ಮಾಡಿ, ಇನ್‌ಸ್ಟಾಲ್ ಮಾಡಿಕೊಂಡ ನಂತರ ಅದನ್ನು ತೆರೆಯಿರಿ.
- ಆಧಾರ್ ನಂಬರ್ ಅನ್ನು ನಮೂದಿಸಿ
- ಆಧಾರ್‌ಗೆ ನೊಂದಾಯಿತವಾದ ಮೊಬೈಲ್ ನಂಬರ್‌ಗೆ ಬರುವ ಒಟಿಪಿ ಮೂಲಕ ವೆರಿಫೈ ಮಾಡಿ
- ಫೇಸ್ ಅಥೆಂಟಿಕೇಶನ್ ಮಾಡಬೇಕು.
- ನಂತರ, ನಿಮ್ಮ ಆಧಾರ್ ಪ್ರೊಫೈಲ್ ರಕ್ಷಣೆಗೆ 5 ಅಂಕಿಗಳ ಸೆಕ್ಯೂರಿಟಿ ಪಿನ್ ರಚಿಸಬೇಕು.
ಹಳೆಯ ಎಂ ಆಧಾರ್ ಆಯಪ್ ಬಳಕೆ ಯಾತಕ್ಕೆ?
- ಎಂ ಆಧಾರ್ ಆಯಪ್‌ನಲ್ಲಿ ಆಧಾರ್ ದಾಖಲೆಯನ್ನು ನೀವು ಪಿಡಿಎಫ್ ಫೈಲ್‌ನಲ್ಲಿ ಪಡೆದು ಸಲ್ಲಿಸಬಹುದು.
- ಭೌತಿಕವಾದ ಪಿವಿಸಿ ಆಧಾರ್ ಕಾರ್ಡ್‌ಗಳನ್ನು ಪೋಸ್ಟ್ ಮೂಲಕ ತರಿಸಿಕೊಳ್ಳಬಹುದು.
- ಆನ್‌ಲೈನ್ ಟ್ರಾನ್ಸಾಕ್ಷನ್ ವೇಳೆ, 16 ಅಂಕಿಗಳ ತಾತ್ಕಾಲಿಕ ಐಡಿ ಸೃಷ್ಟಿಸಿ ನೀಡಬಹುದು. ಇದರಿಂದ ನಿಜವಾದ ಆಧಾರ್ ನಂಬರ್ ಅನ್ನು ಮರೆಮಾಚಬಹುದು.
- ಆಧಾರ್‌ಗೆ ನೊಂದಾಯಿತವಾದ ಮೊಬೈಲ್ ನಂಬರ್ ಮತ್ತು ಇಮೇಲ್ ಅನ್ನು ಪರಿಶೀಲಿಸಬಹುದು ಅಥವಾ ಬದಲಾಯಿಸಬಹುದು.
ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ