ಆನೇಕಲ್, ನವೆಂಬರ್ 13: ಸಫಾರಿ ವೇಳೆ ಮಹಿಳೆ ಮೇಲೆ ಚಿರತೆ ದಾಳಿ ಮಾಡಿರುವಂತಹ ಘಟನೆ ಬೆಂಗಳೂರು ಹೊರವಲಯದ ಬನ್ನೇರುಘಟ್ಟದಲ್ಲಿ ನಡೆದಿದೆ. ಚೆನ್ನೈ ಮೂಲದ ವಹಿತ ಬಾನು (50) ಮೇಲೆ ಚಿರತೆ ಅಟ್ಯಾಕ್ ಮಾಡಿದೆ. ಪತಿ ಮತ್ತು ಮಗನ ಜತೆ ವಹಿತ ಬಾನು ಬನ್ನೇರುಘಟ್ಟ ಸಫಾರಿಗೆ ಬಂದಿದ್ದರು. KSTDC ವಾಹನದಲ್ಲಿ ಸಫಾರಿಗೆ ತೆರಳಿದ್ದು, ವಾಹನದ ಗ್ಲಾಸ್ ಓಪನ್ ಮಾಡಿ ನೋಡುತ್ತಿದ್ದರು. ಈ ವೇಳೆ ವಾಹನದ ಮೇಲೆ ಎಗರಿ ವಹಿತ ಬಾನು ಕೈಗೆ ಚಿರತೆ ದಾಳಿ ಮಾಡಿದೆ. ಗಾಯಾಳು ಮಹಿಳೆಗೆ ಜಿಗಣಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.