Brain Teaser: ಹೋದ ನೆಂಟ ಬಂದ ನೆಂಟ, ಆದ್ರೆ ಬಂದ ದಾರಿ ಗೊತ್ತಿಲ್ಲ, ನಾನ್ಯಾರು ಹೇಳಿ ನೋಡೋಣ

Brain Teaser: ಹೋದ ನೆಂಟ ಬಂದ ನೆಂಟ, ಆದ್ರೆ ಬಂದ ದಾರಿ ಗೊತ್ತಿಲ್ಲ, ನಾನ್ಯಾರು ಹೇಳಿ ನೋಡೋಣ


ಒಗಟಿನ (ಒಗಟು) ಆಟದಲ್ಲಿರುವ ಮಜಾನೇ ಬೇರೆ. ಹೀಗಾಗಿ ಹೆಚ್ಚಿನವರು ಇಂತಹ ಒಗಟಿನ ಪ್ರಶ್ನೆ ಬಿಡಿಸುವತ್ತ ಗಮನ ಕೊಡುತ್ತಾರೆ.ಒಂದಕ್ಕಿಂತ ಒಂದು ಒಗಟಿನ ಪ್ರಶ್ನೆಗಳು ಮೆದುಳಿಗೆ ಕೆಲಸ ಮಾಡುತ್ತವೆ. ಅಂಕಿಅಂಶಗಳಿಗೆ ಕ್ಷಣಾರ್ಧದಲ್ಲಿ ಉತ್ತರ ಕಂಡುಕೊಂಡರೆ ಇನ್ನು ಕೆಲವು ಟ್ರಿಕ್ಕಿ ಪ್ರಶ್ನೆಯನ್ನು ಬಿಡಿಸಿ ಉತ್ತರ ಹೇಳುವುದು ಕಷ್ಟ. ಇದೀಗ ಬ್ರೈನ್ ಟೀಸರ್ ನಂತಹ (ಮೆದುಳಿನ ಟೀಸರ್) ಟ್ರಿಕ್ಕಿ ಒಗಟಿನ ಪ್ರಶ್ನೆಯೊಂದು ವೈರಲ್ ಆಗಿದೆ. ಈ ಪ್ರಶ್ನೆ ಕೇಳಿದಾಗ ಸುಲಭವಾಗಿ ಕಂಡರೂ ಉತ್ತರ ಕಂಡು ಹಿಡಿಯುವುದು ಅಷ್ಟೇ ಸವಾಲುದಾಯಕ. ಇದೀಗ ಈ ಒಗಟಿನ ಪ್ರಶ್ನೆಗೆ ಉತ್ತರ ಹೇಳಿದ್ರೆ ನೀವು ಬುದ್ಧಿವಂತರು ಎಂದು ಖಚಿತವಾಗುತ್ತದೆ.

ಕನ್ನಡ ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಕಲಿಯಿರಿ ಮೆದುಳಿಗೆ ಕೆಲಸ ನೀಡುವ ಒಗಟನ್ನು ಹಂಚಿಕೊಳ್ಳಲಾಗಿದೆ. ಹೋದ ನೆಂಟ ಬಂದ ನೆಂಟ, ಆದರೆ ಬಂದ ದಾರಿ ಗೊತ್ತಿಲ್ಲ, ನಾನ್ಯಾರು ಹೇಳಿ ನೋಡೋಣ. ಇದು ಒಗಟಿನ ಪ್ರಶ್ನೆ, ನೋಡುವುದಕ್ಕೆ ಸುಲದಾಯಕವಾಗಿ ಕಂಡರೂ ಇದಕ್ಕೆ ಉತ್ತರ ಹುಡುಕಲು ಎಲ್ಲರಿಂದಲೂ ಆಗದು. ಹೀಗಾಗಿ ನೀವು ಸ್ವಲ್ಪ ಸಮಯ ತೆಗೆದುಕೊಂಡರೂ ಸರಿಯೇ, ಸರಿಯಾದ ಉತ್ತರ ಹೇಳಿ ಬಿಡಿಸೋದ್ರಲ್ಲಿ ಪಂಟರು ಎನಿಸಿಕೊಳ್ಳಿ.

ವೈರಲ್ ಪೋಸ್ಟ್ ಇಲ್ಲಿದೆ ನೋಡಿ

ಇದನ್ನೂ ಓದಿ: ಒಗಟು ಬಿಡಿಸೋದ್ರಲ್ಲಿ ನೀವು ಶಾರ್ಪ್ ಇದ್ರೆ ಈ ಪ್ರಶ್ನೆಗೆ ಉತ್ತರ ಹೇಳಿ ನೋಡಿ

ಈ ಒಗಟಿನ ಪ್ರಶ್ನೆಗೆ ಉತ್ತರ ಸಿಕ್ಕಿತೇ?

ಒಗಟಿನ ಪ್ರಶ್ನೆಗಳನ್ನು ಬಿಡಿಸುವುದು ಅಷ್ಟು ಸುಲಭವಲ್ಲ. ಮೆದುಳಿಗೆ ಯಾರೋ ಕೈ ಹಾಕಿದ ಅನುಭವವಾಗುತ್ತದೆ. ಹೀಗಾಗುವುದು ಸಹಜ ಕೂಡ. ಆದರೆ ನೀವು ಈ ಕಠಿಣ ಪ್ರಶ್ನೆಯನ್ನು ಉತ್ತರಿಸಲು ಆಗಲಿಲ್ಲ ಎಂದು ಹೆಚ್ಚು ತಲೆ ಕೆಡಿಸಿಕೊಳ್ಳಬೇಡಿ. ಹೋದ ನೆಂಟ ಬಂದ ನೆಂಟ, ಆದರೆ ಬಂದ ದಾರಿ ಗೊತ್ತಿಲ್ಲ ಈ ಒಗಟಿನ ಉತ್ತರ ನೆರಳು.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ





Source link

Leave a Reply

Your email address will not be published. Required fields are marked *