Headlines

ಚಿನ್ನದಂಥ ಅವಕಾಶ ಕೈಚೆಲ್ಲಿದ ಸುಂದರ್, ರಜನೀಕಾಂತ್ ಸಿನಿಮಾದಿಂದ ಹೊರಬರಲು ಕಾರಣ?

ಚಿನ್ನದಂಥ ಅವಕಾಶ ಕೈಚೆಲ್ಲಿದ ಸುಂದರ್, ರಜನೀಕಾಂತ್ ಸಿನಿಮಾದಿಂದ ಹೊರಬರಲು ಕಾರಣ?


ರಜನೀಕಾಂತ್ (ರಜಿನಿಕಾಂತ್) ಸಿನಿಮಾ ನಿರ್ದೇಶನ ಮಾಡಬೇಕು ಎಂಬುದು ಎಷ್ಟೋ ಮಂದಿ ನಿರ್ದೇಶಕರ ಕನಸು. ಅದೂ ರಜನೀಕಾಂತ್ ನಟಿಸಿ, ಕಮಲ್ ಹಾಸನ್ ನಿರ್ಮಾಣ ಮಾಡುವ ಸಿನಿಮಾ ಒಂದನ್ನು ನಿರ್ದೇಶಿಸುವ ಅವಕಾಶ ತನಗೆ ಹುಡುಕಿಕೊಂಡು ಬಂದಿರುವ ನಿರ್ದೇಶಕನೊಬ್ಬ ಸಿನಿಮಾದಿಂದಲೇ ಹೊರ ಬಂದಿದ್ದಾರೆ. ಹೌದು, ರಜನೀಕಾಂತ್ ನಟಿಸಿ, ಕಮಲ್ ಹಾಸನ್ ನಿರ್ಮಾಣ ಮಾಡಲಿರುವ ಹೊಸ ಸಿನಿಮಾವನ್ನು ಸುಂದರ್ ನಿರ್ದೇಶಿಸಿದ್ದಾರೆ ಎಂದು ಘೋಷಿಸಿದ್ದಾರೆ, ಆದರೆ ಘೋಷಣೆಯಾಗಿ ಒಂದೇ ವಾರದಲ್ಲಿ ಸುಂದರ್ ಸಿ, ಆ ಸಿನಿಮಾದಿಂದ ಹೊರಬಂದಿದ್ದಾರೆ.

ಕೆಲವು ದಿನಗಳ ಹಿಂದಷ್ಟೇ ರಜನೀಕಾಂತ್ ಅವರ 173ನೇ ಸಿನಿಮಾದ ಘೋಷಣೆ ಆಯ್ತು. ಸಿನಿಮಾ ಅಂದರೆ ಕಮಲ್ ಹಾಸನ್ ಅವರು ತಮ್ಮ ರಾಜ್ ಕಮಲ್ ನಿರ್ಮಾಣ ಸಂಸ್ಥೆಯ ಮೂಲಕ ನಿರ್ಮಾಣ ಮಾಡುವುದಾಗಿ ಘೋಷಣೆ ಮಾಡಿದರು. ಈ ಹಿಂದೆ ಹಲವು ಸೂಪರ್ ಹಿಟ್ ತಮಿಳು ಸಿನಿಮಾಗಳನ್ನು ನೀಡಿರುವ ನಿರ್ದೇಶಕ ಸುಂದರ್ ಸಿ ಅವರು ಈ ಭಾರಿ ಬಜೆಟ್ ಸಿನಿಮಾದ ನಿರ್ದೇಶನವನ್ನು ಪ್ರಕಟಿಸಲಾಯ್ತು. ಸಿನಿಮಾದ ಮುಹೂರ್ತವೂ ಅದ್ಧೂರಿಯಾಗಿ. ಆದರೆ ಈಗ ಹಠಾತ್ತನೆ ಸುಂದರ್ ಸಿ, ಅವರು ಪ್ರಾಜೆಕ್ಟ್ ನಿಂದ ಹಿಂದೆ ಸರಿದಿದ್ದಾರೆ.

ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಸುಂದರ್ ಸಿ, ‘ಕೆಲವು ಹೇಳಲಾಗದೆ, ಆದರೆ ತಪ್ಪಿಸಲೂ ಸಹ ಆಗದ ಕಾರಣಗಳಿಂದಾಗಿ ರಜನೀಕಾಂತ್ ನಟಿಸಿ, ಕಮಲ್ ಹಾಸನ್ ನಿರ್ಮಾಣ ಮಾಡುತ್ತಿರುವ ಸಿನಿಮಾದಲ್ಲಿ ನಾನು ಕೆಲಸ ಮಾಡುತ್ತಿಲ್ಲ’. ಸುಂದರ್ ಸಿ ಅವರು ಈ ಸಿನಿಮಾದಿಂದ ಹೊರ ಹೋಗುತ್ತಿರುವುದಕ್ಕೆ ನಿಖರವಾದ ಕಾರಣವನ್ನು ತಮ್ಮ ಹೇಳಿಕೆಯಲ್ಲಿ ಉಲ್ಲೇಖಿಸಿಲ್ಲ. ಆದರೆ ಭಾರವಾದ ಮನಸ್ಸಿನಿಂದ ಪ್ರಾಜೆಕ್ಟ್ ಹೊರಗೆ ಹೋಗುವುದಿಲ್ಲ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ:ಭೈರಪ್ಪನವರ ಭೇಟಿಗೆ ಬಂದಿದ್ದರು ರಜನೀಕಾಂತ್: ಕಾರಣವೇನು?

‘ರಜನೀಕಾಂತ್ ಮತ್ತು ಕಮಲ್ ಹಾಸನ್ ಇಬ್ಬರಿಗೂ ನನ್ನದು ಹಳೆಯ ಅನುಬಂಧ, ಅವರೊಂದಿಗೆ ಕಳೆದ ದಿನಗಳು, ಕಲಿತ ಪಾಠಗಳು ಸದಾ ನನ್ನ ನೆನಪಿನಲ್ಲಿ ಉಳಿಯುತ್ತವೆ. ಜೊತೆಗೆ ಈ ಸಿನಿಮಾದ ಘೋಷಣೆ ಆದಾಗಿನಿಂದ ಈಗಿನವರೆಗೂ ಕಲೆದ ದಿನಗಳೂ ಸಹ ನನ್ನ ಸ್ಮರಣೆಯಲ್ಲಿ ಶಾಶ್ವತವಾಗಿ ಉಳಿಯಲಿವೆ. ಕಮಲ್ ಹಾಗೂ ರಜನೀಕಾಂತ್ ಇಬ್ಬರಿಗೂ ನಾನು ಕ್ಷಮೆ ಕೇಳುತ್ತೇನೆ. ಆದರೆ ಅವರ ನನ್ನೊಂದಿಗೆ ಅನುಬಂಧ ಮುಂದುವರಿಯಲಿದೆ, ನನ್ನ ಜೀವನದಲ್ಲಿ ಮುಂದೆಯೂ ನಾನು ಅವರ ಮಾರ್ಗದರ್ಶನವನ್ನು ಅಗತ್ಯ ಸಮಯಗಳಲ್ಲಿ ಪಡೆಯುತ್ತೇನೆ’.

ಸಿ ಸುಂದರ್ ಅವರು ರಜನೀಕಾಂತ್ ಅವರ ಹೊಸ ಸಿನಿಮಾ ನಿರ್ದೇಶನ ಮಾಡಲಿದ್ದಾರೆ ಎಂಬ ಸುದ್ದಿ ಹೊರಬಿದ್ದ ಸಂದರ್ಭದಲ್ಲಿ ಕೆಲವು ಅಸಮಾಧಾನ ವ್ಯಕ್ತಪಡಿಸಿದ್ದರು. ಸಿ ಸುಂದರ್ ಈಗಿನ ಕಾಲದ ಅಭಿಮಾನಿಗಳಿಗೆ ತಕ್ಕಂತೆ ಸಿನಿಮಾ ಮಾಡಲಾರರು, ಅವರು ಓಲ್ಡ್ ಸ್ಕೂಲ್ ಸಿನಿಮಾ ನಿರ್ದೇಶಕ ಹೊಸ ತಲೆಮಾರಿನ ರೀತಿಯ ಸಿನಿಮಾ ಅವರಿಗೆ ಮಾಡಲಾಗುವುದಿಲ್ಲ ಎಂಬ ಆಕ್ಷೇಪಗಳು ವ್ಯಕ್ತವಾಗಿದ್ದವು. ಇದೀಗ ಸುಂದರ್ ಅವರೇ ಪ್ರಾಜೆಕ್ಟ್ ಹಿಂದೆ ಸರಿದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *