ಇತ್ತೀಚಿನ ದಿನಗಳಲ್ಲಿ ವಿವಾಹೇತರ ಸಂಬಂಧಗಳ ಪ್ರಕರಣಗಳು ತೀರಾ ಹೆಚ್ಚಿವೆ. ವಿವಾಹಿತ ಪುರುಷ ಬೇರೊಬ್ಬ ಮಹಿಳೆಯೊಂದಿಗೆ ಸಂಬಂಧ ಹೊಂದಿದ, ಗಂಡ ಮಕ್ಕಳಿದ್ದರೂ ಮಹಿಳೆ ಪರಪುರುಷನೊಂದಿಗೆ ಪ್ರೀತಿಯಲ್ಲಿ ಬಿದ್ದಂತಹ ಸುದ್ದಿಗಳು ಕೇಳಿ ಬರುತ್ತಲೇ ಇರುತ್ತವೆ. ಈ ಒಂದು ಹೆಜ್ಜೆ ಮುಂದೆ ಎಂಬಂತೆ ಮಹಿಳೆಯರು ಗಂಡನನ್ನು ಮನೆಯಲ್ಲಿಟ್ಟು ಹಣ, ಆಭರಣಗಳನ್ನು ದೋಚಿ ಪ್ರಿಯಕರನೊಂದಿಗೆ ಎಸ್ಕೇಪ್ ಆದಂತಹ, ಮನಸ್ತಾಪದ ಕಾರಣದಿಂದ ಮನೆ ಬಿಟ್ಟು ಹೋದಂತಹ ಸಾಕಷ್ಟು ಘಟನೆಗಳು ಇವೆ. ಹೀಗೆ ಹಣ, ಆಭರಣ ದೋಚಿ ಹೆಂಡತಿ ಮನೆ ಬಿಟ್ಟು ಹೋದರೆ ಗಂಡನಾದವನಿಗೆ (ಗಂಡ) ಆಕೆಯ ವಿರುದ್ಧ ಕಾನೂನು ಸಮರ ಸಾರುವ ಹಕ್ಕಿದ್ಯಾ, ಕಾನೂನಿನ ಪ್ರಕಾರ ಆತ ಮಾಡಬೇಕಾದದ್ದೇನು? ಈ ಕುರಿತ ಸಂಕ್ಷಿಪ್ತ ಮಾಹಿತಿಯನ್ನು ತಿಳಿಯಿರಿ.
ಹೆಂಡ್ತಿ ಚಿನ್ನಾಭರಣ ದೋಚಿ ಮನೆ ಬಿಟ್ಟು ಹೋದರೆ ಗಂಡ ಏನು ಮಾಡಬಹುದು?
ಭಾರತೀಯ ಕಾನೂನಿನ ಪ್ರಕಾರ, ಮದುವೆಯ ಸಮಯದಲ್ಲಿ ಹೆಂಡತಿ ಉಡುಗೊರೆಯಾಗಿ ಆಭರಣಗಳು, ನಗದು ಸೇರಿದಂತೆ ಯಾವುದೇ ರೀತಿಯ ಉಡುಗೊರೆಗಳನ್ನು ಸಹ ಅವಳು ಹೊಂದಿದ್ದಾಳೆ. ಅದರ ಮೇಲೆ ಪತಿ ಅಥವಾ ಅತ್ತೆ-ಮಾವಂದಿರಿಗೆ ಯಾವುದೇ ಮಾಲೀಕತ್ವದ ಹಕ್ಕಿಲ್ಲ. ಅವಳ ಸ್ವಂತ ವಸ್ತುಗಳನ್ನು ಕೊಂಡು ಹೋದರೆ ಗಂಡ ಪ್ರಶ್ನೆ ಮಾಡಿದ್ದೇನೆ. ಆದರೆ ಒಂದು ವೇಳೆ ಹೆಂಡತಿ ಮನೆಯ ಇತರ ಸದಸ್ಯರಿಗೆ ಸಂಬಂಧಿಸಿದ ಹಣ, ಆಭರಣಗಳನ್ನು ದೋಚಿ ಮನೆ ಬಿಟ್ಟು ಹೋದರೆ ಇದರ ವಿರುದ್ಧ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಬಹುದು.
ಈ ರೀತಿಯ ಗಂಡ ಯಾವ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಬೇಕು?
ಪೊಲೀಸ್ ದೂರು: ಹೆಂಡತಿ ಗಂಡನ ಅಥವಾ ಆತನ ಕುಟುಂಬದ ಆಸ್ತಿ, ನಗದು, ಆಭರಣ ಅಥವಾ ದಾಖಲೆಗಳನ್ನು ತೆಗೆದುಕೊಂಡು ಹೋಗಿ ಹಿಂತಿರುಗಿಸದಿದ್ದರೆ, ಗಂಡನು ಐಪಿಸಿ ಸೆಕ್ಷನ್ 406 – ಕ್ರಿಮಿನಲ್ ವಿಶ್ವಾಸ ಪ್ರಕರಣದಡಿಯಲ್ಲಿ ದೂರು ದಾಖಲಾಗಬಹುದು.
ಸಿವಿಲ್ ಮೊಕದ್ದಮೆ: ತನ್ನ ಹೆಂಡತಿ ದೋಚಿರುವ ಹಣ, ಆಭರಣಗಳನ್ನು ವಸೂಲಿ ಮಾಡಲು ಗಂಡ ಸಿವಿಲ್ ನ್ಯಾಯಾಲಯದಲ್ಲಿ ಸಿವಿಲ್ ಮೊಕದ್ದಮೆ ಹೂಡಬಹುದು.
ಮಧ್ಯಸ್ಥಿಕೆ/ಸಮಾಲೋಚನೆ: ಈ ಪ್ರಕರಣ ಉದ್ವಿಗ್ನತೆಯ ಮಟ್ಟ ತಲುಪದಿದ್ದರೆ, ಪೊಲೀಸ್ ಅಥವಾ ಕುಟುಂಬ ನ್ಯಾಯಾಲಯದ ಮೂಲಕ ಪರಿಹರಿಸಲು ಒಂದು ಮಾರ್ಗವನ್ನು ಕಂಡುಹಿಡಿಯಬಹುದು.
ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ: ಡಿವೋರ್ಸ್ ಆದರೆ ಪತಿಯು ತನ್ನ ಹೆಂಡತಿ ತೆಗೆದುಕೊಂಡ ಹಣ, ಆಭರಣಗಳನ್ನು ಹಿಂತಿರುಗಿಸಲು ಕೌಟುಂಬಿಕ ನ್ಯಾಯಾಲಯದಲ್ಲಿ ದಾಂಪತ್ಯ ಹಕ್ಕುಗಳ ಮರುಪಾವತಿ (ವಿಭಾಗ 9, ಹಿಂದೂ ವಿವಾಹ ಕಾಯ್ದೆ) ಅಡಿಯಲ್ಲಿ ಅರ್ಜಿ ಸಲ್ಲಿಸಬಹುದು.
ಇದನ್ನೂ ಓದಿ: ಸಾರ್ವಜನಿಕ ಸ್ಥಳಗಳಲ್ಲಿ ರೀಲ್ಸ್, ವಿಡಿಯೋ ಮಾಡಿ ಹುಚ್ಚಾಟ ಮೆರೆಯುವವರಿಗೆ ಕಾನೂನು ಅಡಿಯಲ್ಲಿ ಶಿಕ್ಷೆ ಇದ್ಯಾ?
ಈ ಕಾನೂನು ಮುನ್ನೆಚ್ಚರಿಕೆಗಳ ಬಗ್ಗೆ ಗಮನವಹಿಸಿ:
ನಿಮ್ಮ ಹೆಂಡತಿಯ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಬೇಡಿ. ನಿಮ್ಮ ಪ್ರತಿ ಹಣ, ಆಭರಣಗಳ ವಹಿವಾಟಿನ ಪುರಾವೆಗಳು (ಬಿಲ್ಗಳು, ಬ್ಯಾಂಕ್ ವಹಿವಾಟುಗಳು, ಸಂದೇಶಗಳು, ವೀಡಿಯೊಗಳು, ಇತ್ಯಾದಿ) ಇಟ್ಟುಕೊಳ್ಳಿ. ಹೀಗೆ ಹೆಂಡತಿ ಅವಳ ಸ್ವಂತ ಆಭರಣಗಳನ್ನು ಕೊಂಡು ಹೋದರೆ ಪ್ರಶ್ನೆ ಮಾಡಿದೆ. ಆದರೆ ಆಕೆ ಮನೆ ಬಿಟ್ಟು ಹೋಗುವಾಗ ಗಂಡನ ಮನೆಗೆ ಸೇರಿದ ಹಣ ಆಸ್ತಿಯನ್ನು ದೋಚಿದ್ದರೆ, ಗಂಡ ಕಾನೂನು ಕ್ರಮ ಕೈಗೊಳ್ಳಬಹುದು. ಯಾವುದೇ ದೂರು ದಾಖಲಿಸುವ ಮೊದಲು ವಕೀಲರ ಮಾರ್ಗದರ್ಶನ ಪಡೆಯುವುದು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ