ಸಾಮಾಜಿಕ ಜಾಲತಾಣದಲ್ಲಿ ಮೆಟ್ರೋದಲ್ಲಿ ಆಗುವ ವಿಚಿತ್ರ ಘಟನೆಗಳು ವೈರಲ್ ಆಗುತ್ತಿದೆ. ಅದರಲ್ಲೂ ಈ ದೆಹಲಿ ಹಾಗೂ ಬೆಂಗಳೂರು ಮೆಟ್ರೋದಲ್ಲಿ ಇಂತಹ ಘಟನೆಗಳು ಪ್ರತಿದಿನ ನಡೆಯುತ್ತಿರುತ್ತವೆ. ಇದೀಗ ದೆಹಲಿ ಮೆಟ್ರೋದಲ್ಲಿ (ದೆಹಲಿ ಮೆಟ್ರೋ) ನಡೆದ ಘಟನೆಯಲ್ಲಿ ವ್ಯಕ್ತಿಯೊಬ್ಬರು ತುಂಬಾ ಬೇಸರದಿಂದ ರೆಡ್ಡಿಟ್ನಲ್ಲಿ ಹಂಚಿಕೊಂಡಿದ್ದಾರೆ. ದೆಹಲಿ ಮೆಟ್ರೋದಲ್ಲಿ ಜನಸಂದಣಿ ಆಗುವುದು ಸಾಮಾನ್ಯ, ಸುಮಾರು ಜನ ಮೆಟ್ರೋವನ್ನು ಅವಲಂಬಿಸಿರುತ್ತಾರೆ. ಹೀಗೆ ಮೆಟ್ರೋದಲ್ಲಿ ಪ್ರಯಾಣಿಕರೊಬ್ಬರು ಜನದಟ್ಟನೆ ನಡುವೆ ಫೋನ್ ಚಾರ್ಜ್ ಮಾಡಲು ಹಾಕಿದ್ದಾರೆ. ಈ ವೇಳೆ ಚಾರ್ಜರ್ ತಪ್ಪಿ ಅಲ್ಲೇ ಕುಳಿತಿದ್ದ ಹಿರಿಯ ನಾಗರಿಕರೊಬ್ಬರ ಮೇಲೆ ಬಿದ್ದಿದೆ. ಇದರಿಂದ ಕೋಪಗೊಂಡು ಆ ವ್ಯಕ್ತಿ ಕಪಾಲಮೋಕ್ಷ ಮಾಡಿದ್ದಾರೆ. ಇದೀಗ ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, ನೆಟ್ಟಿಗರು ಹಿರಿಯ ನಾಗರಿಕರ ವರ್ತನೆಯನ್ನು ಖಂಡಿಸಿದ್ದಾರೆ.
ರೆಡ್ಡಿಟ್ನಲ್ಲಿ ಹಂಚಿಕೊಂಡ ಪೋಸ್ಟ್ನಲ್ಲಿ ಹೀಗೆ ಹೇಳಿಕೊಳ್ಳಲಾಗಿದೆ. “ನಾನು ಪ್ರಯಾಣಿಸಿದ ಮೆಟ್ರೋ ಜನರಿಂದ ತುಂಬಿ ತುಳುಕುತ್ತಿದ್ದೆ. ಒಂದು ಕಡೆ ಫೋನ್ನಲ್ಲಿ ಚಾರ್ಜ್ ಕೂಡ ಇರಲಿಲ್ಲ. ಮೆಟ್ರೋದ ಚಾರ್ಜ್ ಪಾಯಿಂಟ್ನಲ್ಲಿ ಫೋನ್ನಲ್ಲಿ ಒಬ್ಬಾಕೆಯನ್ನು ಹಾಕಲು ಹೋದೆ, ಅಲ್ಲೇ ಪಕ್ಕದಲ್ಲಿ ಕುಳಿತಿದ್ದ ಹಿರಿಯ ನಾಗರಿಕರೊಬ್ಬರ ಮೇಲೆ ನನ್ನ ಚಾರ್ಜರ್ ಬಿತ್ತು. ಪ್ರಯಾಣಿಕರು ಮಧ್ಯಪ್ರವೇಶಿಸಿ, ನನ್ನನ್ನು ಬೇರೆ ಕಡೆ ಕಳಿಸಿದರು.
ಇದನ್ನೂ ಓದಿ: ಗೆಳತಿಯ ಪೋಷಕರನ್ನು ಮೆಚ್ಚಿಸಲು ಹೋಗಿ ಪ್ರಾಣ ಕಳೆದುಕೊಂಡ ವ್ಯಕ್ತಿ
ವೈರಲ್ ಪೋಸ್ಟ್ ಇಲ್ಲಿದೆ ನೋಡಿ:
ಮೆಟ್ರೋದಲ್ಲಿ ಕಪಾಳಮೋಕ್ಷವಾಯಿತು. ಎಐಟಿಎ? byu/Extra_Attention_5506 indelhi
ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ಹೇಗಿತ್ತು?
ನೀವು ಕ್ಷಮೆ ಕೇಳಿದ ನಂತರ ಅವರು ಹೇಗೆ ಕೈ ಮಾಡಿದ್ರು, ಹಿರಿಯ ನಾಗರಿಕರು ಕಪಾಳಮೋಕ್ಷ ಮಾಡಲು ಉಚಿತ ಪಾಸ್ ತೆಗೆದುಕೊಳ್ಳಬೇಕು ಎಂದು ಒಬ್ಬ ನೆಟ್ಟಿಗ ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಈ ವರ್ತನೆ ಸ್ವೀಕಾರಾರ್ಹವಲ್ಲ, ಹಿರಿಯರು ತಮ್ಮ ವಯಸ್ಸಿಗೆ ತಕ್ಕಂತೆ ನಡೆದುಕೊಳ್ಳಬೇಕು. ಇದು ಮೆಟ್ರೋದಲ್ಲಿ, ಬಸ್ಸು, ರೈಲು, ವಿಮಾನದಲ್ಲೂ ಇಂತಹ ಘಟನೆಗಳು ನಡೆಯುತ್ತಿವೆ ಎಂದು ಮತ್ತೊಬ್ಬರು ವಿವರಿಸಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ