ಭಾರತದ ಈ ವರ್ಷದ ಜಿಡಿಪಿ ದರ ಶೇ. 8.8 ಕೂಡ ಮುಟ್ಟಬಲ್ಲುದು: ಎನ್​ಐಪಿಎಫ್​ಪಿ ನಿರೀಕ್ಷೆ

ಭಾರತದ ಈ ವರ್ಷದ ಜಿಡಿಪಿ ದರ ಶೇ. 8.8 ಕೂಡ ಮುಟ್ಟಬಲ್ಲುದು: ಎನ್​ಐಪಿಎಫ್​ಪಿ ನಿರೀಕ್ಷೆ


ಜನವರಿ, ನವೆಂಬರ್ 13: ಭಾರತದ ಆರ್ಥಿಕತೆ (ಜಿಡಿಪಿ) ಈ ವರ್ಷ ಬೆಳವಣಿಗೆ ಹೊಂದಬಹುದು ಎಂದು ಹೆಚ್ಚಿನ ಆರ್ಥಿಕ ಮತ್ತು ಆರ್ಥಿಕ ತಜ್ಞರು ಕಂಡುಹಿಡಿದಿದ್ದಾರೆ. 2025-26ರಲ್ಲಿ ಭಾರತದ ಜಿಡಿಪಿ ಶೇ. 6.50 ರಿಂದ ಶೇ. 6.8ರವರೆಗೂ ಹೆಚ್ಚಬಹುದು ಎಂದು ಅಂದಾಜಿಸಿದ್ದಾರೆ. ರಾಷ್ಟ್ರೀಯ ಸಾರ್ವಜನಿಕ ಹಣಕಾಸು ಮತ್ತು ನೀತಿ ಸಂಸ್ಥೆ (ಎನ್‌ಐಪಿಎಫ್‌ಪಿ) ಒಂದು ಹೆಜ್ಜೆ ಮುಂದೆ ಹೋಗಿ ಆರ್ಥಿಕತೆ ಶೇ. 7.4ರಷ್ಟು ವೃದ್ಧಿಸುವ ಸಾಧ್ಯತೆ ಇದೆ ಎಂದು ಹೇಳಿದೆ. ಅನುಕೂಲ ಪರಿಸ್ಥಿತಿ ಬಂದರೆ ಜಿಡಿಪಿ ಶೇ. 8.8ರಷ್ಟು ಬೆಳೆಯಬಹುದು ಎಂದು ಆಶಿಸಿದೆ.

ಇದೇ ಸಂಸ್ಥೆ ಭಾರತದ ಆರ್ಥಿಕತೆ ಈ ವರ್ಷ ಶೇ. 6.6ರಷ್ಟು ಹೆಚ್ಚು ಎಂದು ಹಿಂದೆ ಮಾಡಿದ ಅಂದಾಜಿನಲ್ಲಿ ಹೇಳಿತ್ತು. ಈಗ ಅದು ಹೆಚ್ಚಿನ ಬೆಳವಣಿಗೆಯನ್ನು ನಿರೀಕ್ಷಿಸುತ್ತಿದೆ. ಜಿಎಸ್ಟಿ ಸಿಸ್ಟಂನಲ್ಲಿ ಸುಧಾರಣೆ, ಗ್ರಾಮೀಣ ಮತ್ತು ನಗರದಲ್ಲಿ ಅನುಭೋಗ ಹೆಚ್ಚುತ್ತಿರುವ ಆಂತರಿಕವಾಗಿ ಆರ್ಥಿಕತೆಗೆ ಚುರುಕು ತಂದಿದೆ. ಹಾಗೆಯೇ, ಭಾರತವನ್ನು ಪ್ರಭಾವಿಸುವ ಬಾಹ್ಯ ಅಂಶಗಳಾದ ಅಮೆರಿಕದ ಆರ್ಥಿಕತೆ ಮೊದಲಾದವು ಕೂಡ ಸಕಾರಾತ್ಮಕವಾಗಿರುವುದು ಭಾರತಕ್ಕೆ ಅನುಕೂಲವಾಗಿದೆ ಎಂಬುದು ಎನ್ ಐಪಿಎಫ್ ಪಿಯ ಅನಿಸಿಕೆ.

ಇದನ್ನೂ ಓದಿ: ಬೆಲೆ ಏರಿಕೆಯಲ್ಲಿ ಭರ್ಜರಿ ಕುಸಿತ; ಅಕ್ಟೋಬರ್ನಲ್ಲಿ ಹಣದುಬ್ಬರ ದರ ಕೇವಲ ಶೇ. 0.25

ಭಾರತದ ಬೆಳವಣಿಗೆಯ ಮೇಲೆ ಅಮೆರಿಕದ ಆರ್ಥಿಕತೆಯ ಪರಿಣಾಮ ಎಷ್ಟು?

ಭಾರತದ ಬೆಳವಣಿಗೆಯನ್ನು ಪ್ರಭಾವಿಸುವ ಬಾಹ್ಯ ಅಂಶದ ಬಗ್ಗೆ ಎನ್ ಐಪಿಎಫ್ ಪಿ ಎರಡು ಸ್ಥಿತಿಗಳನ್ನು ಕಾಣುತ್ತಿದೆ. ಅಮೆರಿಕದ ಆರ್ಥಿಕತೆ ಶೇ. 1ರಷ್ಟು ಅಧಿಕ ಬೆಳವಣಿಗೆಯಲ್ಲಿ ಭಾರತದ ಜಿಡಿಪಿ ಈ ವರ್ಷ ಶೇ. 8.8ರಷ್ಟು ಹೆಚ್ಚಾಗಬಹುದು. ಅಕಸ್ಮಾತ್, ಅಮೆರಿಕದ ಜಿಡಿಪಿ ನಿರೀಕ್ಷೆಗಿಂತ ಶೇ. 1 ಕುಸಿತ ಕಂಡರೆ, ಭಾರತದ ಬೆಳವಣಿಗೆ ಶೇ. 6ಕ್ಕೆ ಸೀಮಿತಗೊಳ್ಳಬಹುದು ಎಂದಿದೆ.

ಹಣಕಾಸು ಸಚಿವಾಲಯದ ಅಡಿಯಲ್ಲಿ ಸ್ವಾಯತ್ತ ಸಂಸ್ಥೆಯಾಗಿರುವ ಎಫ್ ಐಪಿಎಫ್ ಪಿ ದೇಶದ ಹಣದುಬ್ಬರ ಮುಂದಿನ ದಾರಿಯ ಬಗ್ಗೆಯೂ ಅಂದಾಜು ಮಾಡಲಾಗಿದೆ. ಈ ಹಣಕಾಸು ಕಲಿತ ರೀಟೇಲ್ ಹಣದುಬ್ಬರ ಶೇ. 1.6 ಇರಬಹುದು ಎಂದು ಹೇಳಿದೆ. ಆರ್ಬಿಐ ಅಂದಾಜು ಮಾಡಿದ್ದ ಶೇ. 2.6ಕ್ಕಿಂತ ಕಡಿಮೆ ಹಣದುಬ್ಬರ ಸಾಧ್ಯತೆಯನ್ನು ಇದು ವ್ಯಕ್ತಪಡಿಸಿದೆ.

ಇದನ್ನೂ ಓದಿ: ಮುಂದಿನ ದಿನಗಳಲ್ಲಿ ಭಾರತದ ಜಿಡಿಪಿ, ಹಣದುಬ್ಬರ, ಬಡ್ಡಿದರ ಟ್ರೆಂಡ್ ಹೀಗಿರುತ್ತದೆ: ಯುಬಿಎಸ್ ಅಂದಾಜು

ಅಕ್ಟೋಬರ್ ತಿಂಗಳಿನಲ್ಲಿ ಭಾರತದ ಹಣದುಬ್ಬರ ಶೇ 0.25ಕ್ಕೆ ಇಳಿದಿರುವುದು ಗಮನಾರ್ಹ. ಸಿಪಿಐ ಆಧಾರಿತವಾಗಿ ಹಣದುಬ್ಬರ ಲೆಕ್ಕಾಚಾರ ಆರಂಭಗೊಂಡಾಗಿನಿಂದ ಈ ಬೆಲೆ ಏರಿಕೆ ಮಟ್ಟ ಕನಿಷ್ಠಕ್ಕೆ ಇಳಿದಿರುವುದು ಇದೇ ಮೊದಲು. ಆಹಾರವಸ್ತುಗಳ ಬೆಲೆ ಗಣನೀಯವಾಗಿ ಕುಸಿದಿರುವುದು ಹಣದುಬ್ಬರ ಇಳಿಕೆಗೆ ಕಾರಣವಾಗಿದೆ.

ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ರಂದು ಪ್ರಕಟಿಸಲಾಗಿದೆ – 10:07 pm, ಗುರುವಾರ, 13 ನವೆಂಬರ್ 25



Source link

Leave a Reply

Your email address will not be published. Required fields are marked *