ಎಸ್ ಎಸ್ ರಾಜಮೌಳಿ ಎಲ್ಲದರಲ್ಲೂ ಪರ್ಫೆಕ್ಷನ್ ಅನ್ನು ನಿರೀಕ್ಷಿಸುತ್ತಾರೆ. ಸಿನಿಮಾದಲ್ಲಿ, ಸಿನಿಮಾದ ಎಲ್ಲ ಇವೆಂಟ್ಗಳನ್ನೂ ಸಹ ಅವರೇ ಖುದ್ದಾಗಿ ನಿರ್ದೇಶಿಸುತ್ತಾರೆ.
ನಿರೂಪಕಿ ಸುಮನಾ, ಹಿಂದಿ ನಿರೂಪಕ ಆಶಿಶ್ ಚಂಚಲಾನಿ ಇನ್ನೂ ಕೆಲವರೊಟ್ಟಿಗೆ ರಾಜಮೌಳಿ, ಕೀರವಾಣಿ ಕೂತು ಚರ್ಚೆ ಕಾರ್ಯಕ್ರಮ ಹೀಗೆ ಬರಬೇಕೆಂದು ನೀಲ ನಕ್ಷೆ ಹಾಕಿಕೊಟ್ಟಿದ್ದಾರೆ ರಾಜಮೌಳಿ.
ಕಾರ್ಯಕ್ರಮದ ವೇದಿಕೆ ಕಾರ್ಯಕ್ರಮದ ಯೋಜನೆಗಾಗಿ ವಿಶೇಷ ಕಾರ್ಯಗಾರವನ್ನೇ ರಾಜಮೌಳಿ ಮಾಡಿದ್ದು, ಇಡೀ ಕಾರ್ಯಕ್ರಮದ ನೀಲ ನಕ್ಷೆ ರೆಡಿ ಮಾಡಿ ನಿರೂಪಕರು, ಲೈಟಿಂಗ್ ಇನ್ನಿತರೆವರಿಗೆ ಹೇಳಿದ್ದಾರೆ.
ಇದೀಗ ರಾಜಮೌಳಿಯ ಹೊಸ ಸಿನಿಮಾ ‘ಗ್ಲೋಬಲ್ ಟ್ರೋಟರ್’ನಲ್ಲಿ ನಡೆಯುತ್ತಿದೆ, ರಾಜಮೌಳಿ ತಾವೇ ಖುದ್ದು ಮುಂದೆ ನಿಂತು ಕಾರ್ಯಕ್ರಮದ ಎಲ್ಲಾ ವಿಭಾಗಗಳ ಮೇಲ್ವಿಚಾರಣೆ ಮತ್ತು ನಿರ್ದೇಶನ ಮಾಡುತ್ತಿದ್ದಾರೆ.
ಕಾರ್ಯಕ್ರಮಕ್ಕೆ ಬರುವವರಿಗಾಗಿ ವಿಶೇಷ ಪಾಸ್ಗಳನ್ನು ಮಾಡಿದ್ದು, ಈ ಪಾಸ್ಗಳನ್ನು ಪಾಸ್ಪೋರ್ಟ್ ಎಂದು ಕರೆಯಲಾಗುತ್ತಿದ್ದು, ಕಾರ್ಯಕ್ರಮದ ಮ್ಯಾಪ್ನಂತಹ ಮಾಹಿತಿಗಳನ್ನು ಈ ಅಪ್ಲಿಕೇಶನ್ ಒಳಗೊಂಡಿದೆ. ನವೆಂಬರ್ 15ಕ್ಕೆ ರಾಮೋಜಿ ಫಿಲಂ ಸಿಟಿಯಲ್ಲಿ ಕಾರ್ಯಕ್ರಮ.




