ಪಾಟ್ನಾ, ನವೆಂಬರ್ 14: ಬಿಹಾರದಲ್ಲಿ ಆಡಳಿತಾರೂಢ ಚುನಾವಣೆ ಎನ್‌ಡಿಎ ಮೈತ್ರಿಕೂಟ ಮತ್ತೆ (ಬಿಹಾರ ಚುನಾವಣೆ) ಗೆದ್ದಿದೆ. ಚುನಾವಣೆಗೆ ಮುನ್ನವೇ ಭರಪೂರ ಉಚಿತ ಕೊಡುಗೆಗಳನ್ನು (ಉಚಿತವಾಗಿ) ಕೊಡಲು ಪ್ರಾರಂಭಿಸಿದ ಎನ್ಡಿಎ ಈಗ ತನ್ನ ಭರವಸೆಯನ್ನು ಮುಂದಿನ ಐದು ವರ್ಷ ಉಳಿಸಿಕೊಂಡು ಹೋಗಬೇಕಾಗಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಮಾಡಿದ ಪ್ರಯೋಗ ಈಗ ಪಕ್ಷಾತೀತವಾಗಿ ಎಲ್ಲರನ್ನೂ ಸೆಳೆದಿದೆ. ಉಚಿತ ಕೊಡುಗೆಗಳನ್ನು ನೀಡಲು ದೊಡ್ಡ ಪೈಪೋಟಿಯೇ ನಡೆದಿದೆ. ಅದರ ಮುಂದುವರಿದ ಭಾಗವೇ ಬಿಹಾರದ ಸ್ಥಿತಿ.
ಬಿಹಾರದಲ್ಲಿ ಉಚಿತ ಕೊಡುಗೆಗಳಿಂದ ಸರ್ಕಾರಕ್ಕೆ ಆಗುವ ಹೊರೆ 33,000 ಕೋಟಿ ರೂ ಎಂದು ಅಂದಾಜಿಸಲಾಗಿದೆ. ಬಿಹಾರದ ಬಜೆಟ್ ಗಾತ್ರ ಸುಮಾರು ಮೂರರಿಂದ ಮೂರೂವರೆ ಲಕ್ಷ ಕೋಟಿ ರೂ. ಬಿಹಾರದಲ್ಲಿ ಸ್ವಂತವಾಗಿ ಸಿಗುವ ತೆರಿಗೆ ಆದಾಯ 54,300 ಕೋಟಿ ರೂ. ಶೇ. 60ರಷ್ಟು ಸ್ವಂತ ತೆರಿಗೆಗಳಿಗೆ ಸಮ ಈ ಉಚಿತ ಕೊಡುಗೆಗಳು.
ಇದನ್ನೂ ಓದಿ: ‘ಜಂಗಲ್ರಾಜ್’ನಿಂದ ಶೂನ್ಯ ಮರು ಮತದಾನದವರೆಗೆ, ಬಿಹಾರ ಮತದಾನ ಸಂಸ್ಕೃತಿಯಲ್ಲಿ ಐತಿಹಾಸಿಕ ಬದಲಾವಣೆ
ಕ್ಯಾಪಿಟಲ್ ಔಟ್ಲೇ (ಕ್ಯಾಪಿಟಲ್ ಔಟ್ಲೇ), ಅಂದರೆ ಸರ್ಕಾರದ ಬಂಡವಾಳ ವೆಚ್ಚದ ಶೇ. 80ರಷ್ಟು ಹಣವು ಉಚಿತ ಕೊಡುಗೆಗಳಿಗೆ ಹೋಗುತ್ತವೆ. ಬಂಡವಾಳ ಒಂದು ಆರ್ಥಿಕತೆಗೆ ಬಹಳ ಮುಖ್ಯವಾದ ವೆಚ್ಚದ ಸಂಗತಿ. ದೂರಗಾಮಿ ಅಭಿವೃದ್ಧಿಗೆ ಈ ವೆಚ್ಚ ಬಹಳ ಮುಖ್ಯ.
ಭಾರತದ ಅತ್ಯಂತ ಹಿಂದುಳಿದ ರಾಜ್ಯಗಳಲ್ಲಿ ಬಿಹಾರವೂ ಇದೆ. ಇಲ್ಲಿ ಸೃಷ್ಟಿಯಾಗುವ ತೆರಿಗೆ ಆದಾಯ ಬಹಳ ಕಡಿಮೆ. ಅದರ ಒಟ್ಟು ತೆರಿಗೆ ಆದಾಯದಲ್ಲಿ ಕೇಂದ್ರದಿಂದ ಸಿಗುವ ಪಾಲೇ ಅಧಿಕ. ಹೀಗೆ, ನೆರವಿನ ಬಗ್ಗೆ ಕೇಂದ್ರ ಇಟ್ಟುಕೊಂಡಿರುವ ಬಿಹಾರ ರಾಜ್ಯಕ್ಕೆ ಉಚಿತ ಕೊಡುಗೆಗಳು ಬೇಕಾ ಎಂಬ ಪ್ರಶ್ನೆಯಂತೂ ಕಾಡಬಹುದು.
ಬಿಹಾರದಲ್ಲಿ ಭರವಸೆ ನೀಡಲಾದ ಕೆಲ ಉಚಿತ ಕೊಡುಗೆಗಳು
- 125 ಯುನಿಟ್ ವಿದ್ಯುತ್ ಉಚಿತ
- ನಿರುದ್ಯೋಗಿಗಳಿಗೆ ಮಾಸಿಕ 1,000 ರೂ ಭತ್ಯೆ
- ಹಿರಿಯ ನಾಗರಿಕರು, ವಿಧವೆಯರು, ವಿಶೇಷ ಚೇತನರಿಗೆ ನೀಡುವ ಪಿಂಚಣಿಯಲ್ಲಿ 700 ರೂ ಏರಿಕೆ
- ಕಟ್ಟಡ ನಿರ್ಮಾಣ ಕಾರ್ಮಿಕರಿಗೆ 5,000 ರೂ ವಸ್ತ್ರ ಭತ್ಯೆ
- ಜೀವಿಕಾ, ಅಂಗನವಾಡಿ, ಆಶಾ ಕಾರ್ಯಕರ್ತೆಯರಿಗೆ ಹೆಚ್ಚಿನ ಗೌರವಧನ
ಇದನ್ನೂ ಓದಿ: ಭಾರತದ ಈ ವರ್ಷದ ಜಿಡಿಪಿ ದರ ಶೇ. 8.8 ಕೂಡ ಮುಟ್ಟಬಲ್ಲುದು: ಎನ್‌ಐಪಿಎಫ್‌ಪಿ ನಿರೀಕ್ಷೆ
ಕರ್ನಾಟಕ ಸರ್ಕಾರ ಕೂಡ ಸಾಕಷ್ಟು ಫ್ರೀಬೀಗಳನ್ನು ನೀಡುತ್ತಿದೆ. ಕರ್ನಾಟಕಕ್ಕೆ ಅಧಿಕ ತೆರಿಗೆ ಆದಾಯವನ್ನು ಸೃಷ್ಟಿಸುವ ಶಕ್ತಿ ಇದೆ. ಸಾಕಷ್ಟು ಉದ್ಯಮಗಳು ಮತ್ತು ಉದ್ಯಮ ವಾತಾವರಣ ಕರ್ನಾಟಕದಲ್ಲಿದೆ. ಆದರೂ ಕೂಡ ಅಭಿವೃದ್ಧಿಪರ ಯೋಜನೆಗಳಿಗೆ ವ್ಯಯಿಸಲು ಇಲ್ಲಿಯ ಸರ್ಕಾರ ಪರದಾಡುತ್ತಿದೆ. 4 ಲಕ್ಷ ಕೋಟಿ ರೂಗಿಂತ ಅಧಿಕ ಸಾಲ ಹೊಂದಿರುವ, ಮತ್ತು ಆದಾಯಕ್ಕೆ ಕೇಂದ್ರವನ್ನೇ ಅವಲಂಬಿಸಿರುವ ಬಿಹಾರ ರಾಜ್ಯಕ್ಕೆ ಈ ಉಚಿತ ಕೊಡುಗೆಗಳು ಎಷ್ಟು ಅನುಕೂಲ, ಅನಕೂಲ ತರುತ್ತವೆ ಎನ್ನುವುದನ್ನು ಕಾಲವೇ ಉತ್ತರಿಸಬೇಕು.
ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ