ಬಿಗ್ಬಾಸ್ (ಬಿಗ್ ಬಾಸ್0) ಮನೆಯಲ್ಲಿ ಮಾಳು ಅವರದ್ದು ಹೆಚ್ಚು ಸದ್ದಿಲ್ಲ. ಆದರೆ ಕಳೆದ ವಾರ ಬಂದ ಟಾಸ್ಕ್ ನಲ್ಲಿ ಅದ್ಭುತವಾಗಿ ಭಾಷಣ ಮಾಡಿ ಮನೆಯ ಕ್ಯಾಪ್ಟನ್ ಆಗಿ ಮಾಳು ಆಯ್ಕೆ ಆದರು. ಕ್ಯಾಪ್ಟನ್ ಆದ ಬಳಿ ಹೆಚ್ಚು ಆಕ್ಟಿವ್ ಆದ ಮಾಳು ಎಲ್ಲರೊಟ್ಟಿಗೆ ಅಧಿಕಾರಯುತವಾಗಿ ಮಾತನಾಡಲು ಪ್ರಾರಂಭಿಸಿದರು. ಆದರೆ ಬರ ಬರುತ್ತಾ ಮಾಳು ಅವರ ಕ್ಯಾಪ್ಟನ್ ಗಿರಿ ಮನೆಯವರಿಗೆ ಸರಿ ಬರಲಿಲ್ಲ. ಇದೀಗ ಕ್ಯಾಪ್ಟನ್ ಅನ್ನು ಮನೆಯವರೆಲ್ಲ ಸೇರಿ ಕಳಪೆಯಾಗಿ ಮಾಡಿದ್ದಾರೆ. ಕಳೆದ ವಾರ ಕ್ಯಾಪ್ಟನ್ ಆಗಿ ಮೆರೆದಾಡಿದ್ದ ಮಾಳು ಈ ವಾರ ಜೈಲು ಸೇರಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ