Headlines

Amrutadhare ಮಲ್ಲಿಯ ಈ ಗೆಟಪ್​ ನೋಡಿದ್ರೆ ಜೈದೇವ ಹೊಸ ಹೆಂಡ್ತಿ ಬಿಟ್ಟು ಬರೋದು ಗ್ಯಾರೆಂಟಿ! | Amrutadhare Malli Urf Anvita Sagar Hot Video Shoot Gone Viral Suc

Amrutadhare ಮಲ್ಲಿಯ ಈ ಗೆಟಪ್​ ನೋಡಿದ್ರೆ ಜೈದೇವ ಹೊಸ ಹೆಂಡ್ತಿ ಬಿಟ್ಟು ಬರೋದು ಗ್ಯಾರೆಂಟಿ! | Amrutadhare Malli Urf Anvita Sagar Hot Video Shoot Gone Viral Suc


ಅಮೃತಧಾರೆ ಮಲ್ಲಿ ಸದ್ಯ ನೂರಾರು ಕೋಟಿ ರೂಪಾಯಿ ಒಡತಿಯಾಗಿದ್ದು, ಹಾಟ್​ ಡ್ರೆಸ್​ನಲ್ಲಿ ಕಾಣಿಸಿಕೊಂಡಿದ್ದಾಳೆ. ಜೈದೇವ ಓಡಿ ಬರ್ತಾನಾ? 

ಮೈತುಂಬಾ ಸೀರೆ, ಉದ್ದನೆಯ ಜಡೆಗೆ ಮುಡಿಯಲ್ಲೊಂದು ಹೂವಿನ ಮಾಲೆ, ಕೆನ್ನೆಯ ಮೇಲೆ ಅರಿಶಿಣ, ದೊಡ್ಡದಾದ ಕುಂಕುಮ… ಹೀಗೆ ಹೇಳುತ್ತಿದ್ದಂತೆಯೇ ಅಪ್ಪಟ ಭಾರತೀಯ ನಾರಿಯ ಚಿತ್ರಪಟ ಮುಂದೆ ಬರುತ್ತದೆ. ಇಂಥದ್ದೊಂದು ಸುಂದರ ದಿರಿಸಿನ ಮುಂದೆ ಎಲ್ಲವೂ ಗೌಣ ಎನ್ನಿಸುವುದು ಉಂಟು. ಆದರೆ ಬದಲಾಗ್ತಿರೋ ಕಾಲಘಟ್ಟದಲ್ಲಿ ವಿದೇಶಿಯರು ಭಾರತೀಯರ ಈ ಸಂಪ್ರದಾಯದತ್ತ ಆಕರ್ಷಿಕತರಾಗುತ್ತಿದ್ದರೆ, ಭಾರತದಲ್ಲಿ ಹೀಗೆ ಬಟ್ಟೆ ಹಾಕಿಕೊಂಡರೆ ಗೌರಮ್ಮಾ ಎಂದು ಮೂಗುಮುರಿಯುವವರೇ ಹೆಚ್ಚು. ತುಂಡುಡುಗೆ ಇದ್ದಷ್ಟೂ ಅವರಿಗೆ ಡಿಮಾಂಡು. ಮಾಡರ್ನ್​ ಡ್ರೆಸ್​ ಹಾಕದಿದ್ದರೆ ಆಕೆಗೆ ಗೌರವವೇ ಇಲ್ಲ ಎನ್ನುವಂಥ ಸ್ಥಿತಿಯೂ ಕೆಲ ಮನೆಗಳಲ್ಲಿ ಇದೆ. ಅದನ್ನೇ ಅಮೃತಧಾರೆಯ ಸೀರಿಯಲ್​ನಲ್ಲಿಯೂ ತೋರಿಸಿಯಾಗಿದೆ. ಮಲ್ಲಿಯಂಥ ಅಪ್ಪಟ ಸಂಪ್ರದಾಯಬದ್ಧ ಹೆಣ್ಣನ್ನು ಕಡೆಗಣಿಸಿ ಜೈದೇವ ಮಾಡರ್ನ್​ ಹುಡುಗಿಯ ಹಿಂದೆ ಹೋಗಿ ಆಕೆಯನ್ನು ಮದುವೆಯಾಗಿ ಆಗಿದ್ದು ಆಗಿದೆ.

ಆದರೆ ಅದೇ ಇನ್ನೊಂದೆಡೆ, ಮಲ್ಲಿಗೆ ಅಪ್ಪನ ಆಸ್ತಿ ಸಿಕ್ಕು ನೂರಾರು ಕೋಟಿ ರೂಪಾಯಿ ಒಡತಿಯಾಗಿದ್ದಾಳೆ. ಕಾಲೇಜಿನ ಪರೀಕ್ಷೆಯನ್ನೂ ಉತ್ತೀರ್ಣ ಆಗಿದ್ದಾಳೆ. ಇದೀಗ ಜೈದೇವ ಹೊಟ್ಟೆ ಉರಿದುಕೊಳ್ಳುವಷ್ಟು ನೀವು ಬದಲಾಗಬೇಕು, ಕಾಲಕ್ಕೆ ತಕ್ಕಂತೆ ಬದಲಾಗಿ ಎಂದು ಪಾರ್ಥ, ಸುಧಾ ಎಲ್ಲರೂ ಮಲ್ಲಿಗೆ ಕಿವಿಮಾತು ಹೇಳಿದ್ದಾರೆ. ಆದ್ದರಿಂದ ಮಲ್ಲಿ ಬದಲಾಗೋದೊಂದೇ ಬಾಕಿ ಇದೆ. ಆಕೆ ಡ್ರೆಸ್​ನಲ್ಲಿ ಬದಲಾಗ್ತಾಳಾ ಅಥವಾ ಒಳ್ಳೆಯ ಹುದ್ದೆ ಏರಿ ಜೈದೇವನ ಹೊಟ್ಟೆ ಉರಿಸ್ತಾಳೋ ಸದ್ಯ ನೋಡಬೇಕಿದೆ.

ಇದು ಸೀರಿಯಲ್​ ಮಾತಾದ್ರೆ ಇನ್ನು ರಿಯಲ್​​ ಲೈಫ್​ನಲ್ಲಿ ಮಲ್ಲಿ ಉರ್ಫ್​ ಅನ್ವಿತಾ ಸಾಗರ್​ ಸೋಷಿಯಲ್​ ಮೀಡಿಯಾದಲ್ಲಿಯೂ ಸಕತ್​ ಆ್ಯಕ್ಟೀವ್​ ಆಗಿದ್ದಾರೆ. ಇದೀಗ ಅವರ ವಿಡಿಯೋ ಒಂದು ವೈರಲ್​ ಆಗಿದೆ. ಇದರಲ್ಲಿ ಸಕತ್​ ಮಾಡರ್ನ್​ ಡ್ರೆಸ್​ನಲ್ಲಿ ಅನ್ವಿತಾ ಕಾಣಿಸಿಕೊಂಡಿದ್ದಾರೆ. ಇದನ್ನೇನಾದ್ರೂ ಜೈದೇವ ನೋಡಿದ್ರೆ ಹೊಸ ಹೆಂಡ್ತಿಯನ್ನು ಬಿಟ್ಟು ಓಡಿ ಬರ್ತಾನೆ ಎಂದು ನೆಟ್ಟಿಗರು ತಮಾಷೆ ಮಾಡ್ತಿದ್ದಾರೆ! ಏಕೆಂದ್ರೆ ಮಲ್ಲಿ ಕೋಟ್ಯಧೀಶ್ವರ ರಾಜೇಂದ್ರ ಭೂಪತಿ ಮಗಳು ಎಂದು ತಿಳಿದಿದೆ. ನೀವು ನಿಮ್ಮಂಥ ಮಹಿಳೆಯರಿಗೆ ಮಾದರಿಯಾಗಬೇಕು ಎಂದು ಪಾರ್ಥ, ಸುಧಾ ಸಲಹೆ ಕೊಟ್ಟಿದ್ದಾರೆ. ಹೊಸ ಬದುಕನ್ನು ಕಟ್ಟಿಕೊಳ್ಳುವಂತೆ ಹೇಳಿದ್ದಾರೆ. ಅದರಿಂದ ಇಂಥ ಗೆಟಪ್​ ಬರಲಿ ಎಂದು ಹಾರೈಸುತ್ತಿದ್ದಾರೆ ಫ್ಯಾನ್ಸ್​.

ಇನ್ನು ನಟಿ ಅನ್ವಿತಾ ಸಾಗರ್‌ ಕುರಿತು ಹೇಳುವುದಾದರೆ, ಇವರು ಕನ್ನಡ ಸಿನಿಮಾ ಮತ್ತು ಧಾರಾವಾಹಿ ಕ್ಷೇತ್ರದಲ್ಲಿ ಕಳೆದೊಂದು ದಶಕದಿಂದ ಸಕ್ರಿಯರಾಗಿದ್ದದಾರೆ. ಈ ಹಿಂದೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿ ಗಟ್ಟಿಮೇಳದಲ್ಲಿ ಆದ್ಯಾ ಪಾತ್ರದಲ್ಲಿ ನಟಿಸಿದ್ದರು. ಇದಾದ ಬಳಿಕ ಉದಯ ಟಿವಿಯ ಅಣ್ಣ ತಂಗಿ ಸೀರಿಯಲ್​ನಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಅದು 1 ಸಾವಿರ ಸಂಚಿಕೆಗಳನ್ನು ಆಗಲೇ ಪೂರೈಸಿದೆ. ಇದೀಗ ಮತ್ತೆ ಅನ್ವಿತಾ ಸಾಗರ್ ಅಮೃತಧಾರೆ ಸೀರಿಯಲ್ ಮೂಲಕ ಕಮ್‌ ಬ್ಯಾಕ್ ಮಾಡಿದ್ದಾರೆ. ಮಲ್ಲಿ ಪಾತ್ರಧಾರಿಯಾಗಿದ್ದ ರಾಧಾ ಭಗವತಿ ಅವರು ಭಾರ್ಗವಿ ಎಲ್​ಎಲ್​ಬಿ ಸೀರಿಯಲ್​ಗಾಗಿ ಈ ಪಾತ್ರ ತೊರೆದ ಬಳಿಕ, ಈಗ ಆ ಪಾತ್ರದಲ್ಲಿ ಅನ್ವಿತಾ ನಟಿಸುತ್ತಿದ್ದಾರೆ.

Anvitha Sagar #shorts #kannadareels



Source link

Leave a Reply

Your email address will not be published. Required fields are marked *